ನವದೆಹಲಿ: ಚೀನಾ ಮೂಲದ ಕರೊನಾ COVID19 ವೈರಸ್​ ಸೋಂಕು ಜಗತ್ತಿಗೆ ಕಂಟಕವಾಗಿ ಪರಿಣಮಿಸಿದರೆ ಭಾರತದಲ್ಲಿ ತಯಾರಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್​ ‘ಸಂಜೀವಿನಿಯಾಗಿ ಕಾಣಿಸತೊಡಗಿದೆ. ಈ ವಿಷಯವನ್ನು ಬ್ರೆಜಿಲ್​ ಪ್ರೆಸಿಡೆಂಟ್ ಪತ್ರದ ಮೂಲಕ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದು ವಿಶೇಷ! ರಾಮಾಯಣದ ಘಟನೆಯೂ ಉಲ್ಲೇಖವಾಗಿದ್ದು ಇನ್ನೂ ವಿಶೇಷ..
ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧದ ನೇರ ರಫ್ತಿನ ಮೇಲೆ ನಿರ್ಬಂಧ ಹೇರಿದ ಭಾರತದ ಕ್ರಮದ ಬಗ್ಗೆ ಅಸಮಾಧಾನ ತೋಡಿಕೊಂಡು ಪ್ರತೀಕಾರದ ಎಚ್ಚರಿಕೆಯನ್ನು ಲೈಟಾಗಿ ಕೊಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ. ಅಲ್ಲದೆ, ಭಾರತ ತೆಗೆದುಕೊಂಡ ನಿರ್ಧಾರ ಸರಿ ಇದೆ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಫಾಕ್ಸ್​ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಅವರು, ನಾನು ಲಕ್ಷಾಂತರ ಡೋಸ್ ಹೈಡ್ರೋಕ್ಸಿಕ್ಲೋರೋಕ್ವಿನ್ ತರಿಸಿಕೊಂಡಿದ್ದೇನೆ. 29 ದಶಲಕ್ಷಕ್ಕೂ ಹೆಚ್ಚಿದೆ ಅದು. ನಾನು ಪ್ರಧಾನಿ ಮೋದಿ ಜತೆಗೆ ಮಾತನಾಡಿದ್ದೆ. ಅವರು ನನ್ನ ಮನವಿಯನ್ನು ಪುರಸ್ಕರಿಸಿದ್ದಾರೆ. ಈಗ ಅಮೆರಿಕಕ್ಕೆ ಬಂದಿರುವ ಔಷಧದ ಪೈಕಿ ಬಹುತೇಕ ಭಾರತದ ಪಾಲೇ ದೊಡ್ಡದಿದೆ. ಅವರು ಭಾರತೀಯರಿಗಾಗಿ ಔಷಧ ಉಳಿಸಲು ಪ್ರಯತ್ನಿಸಿದ್ದರು. ಆದರೆ, ಇಲ್ಲಿನ ಪರಿಸ್ಥಿತಿ ನೋಡಿ ಇಲ್ಲಿಗೆ ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಭಾರತದ ಮೇಲೆ ಪ್ರತೀಕಾರದ ಎಚ್ಚರಿಕೆ ನೀಡಿದ್ದೇಕೆ?
ಈ ಸಂಕಷ್ಟಮಯ ಸನ್ನಿವೇಶದಲ್ಲಿ ಅಧ್ಯಕ್ಷ ಟ್ರಂಪ್​ ಭಾರತದ ಮೇಲೆ ಪ್ರತೀಕಾರದ ಮಾತು ಹೇಳಿದ್ದರೆ, ಅದೇ ದೇಶ ಉನ್ನತ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಜಗತ್ತು ಈ ಸೋಂಕಿನಿಂದ ತತ್ತರಿಸುವ ಸಂದರ್ಭದಲ್ಲಿ ಚೀನಾದಂತೆ ನಾವು ಕೂಡ ಮೂಲೆಗುಂಪಾಗಲು ಬಯಸುವುದಿಲ್ಲ. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಯಾವೆಲ್ಲ ದೇಶಗಳು ಭಾರತದ ಔಷಧದ ಮೇಲೆ ಅವಲಂಬಿತವಾಗಿದೆಯೋ ಅದೇ ರೀತಿ ನಮಗೂ ಹೊಣೆಗಾರಿಕೆಗಳು, ಬದ್ಧತೆಗಳಿವೆ ಎಂದು ಹೇಳಿಕೊಂಡಿದ್ದಾರೆ.ಇನ್ನೊಂದೆಡೆ, ಸೋಂಕಿನ ಕುರಿತು ಜಗತ್ತನ್ನು ಕತ್ತಲಲ್ಲಿ ಇರಿಸಿದ ಚೀನಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್​ ಈ ವಿಚಾರವಾಗಿ ಸುಮ್ಮನೆ ಕುಳಿತ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ, ಹೈಡ್ರೋಕ್ಸಿಕ್ಲೋರೊಕ್ವಿನ್ ವಿಚಾರದಲ್ಲಿ ಭಾರತದ ನಿಲುವನ್ನು ಬೆಂಬಲಿಸಿದ್ದಾರೆ ಟ್ರಂಪ್​.
ಹೈಡ್ರೋಕ್ಸಿಕ್ಲೋರೋಕ್ವಿನ್​ ವಿಚಾರದಲ್ಲಿ ಪ್ರತೀಕಾರದ ಎಚ್ಚರಿಕೆ ನೀಡಿದ್ದ ಟ್ರಂಪ್​ಗೆ ಭಾರತದಿಂದ ಸಮಾಧಾನಕರ ಉತ್ತರ; ಜತೆಗೆ ಸಣ್ಣ ವಾರ್ನ್​!
ಇನ್ನೊಂದೆಡೆ, ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧ ಬ್ರೆಜಿಲ್​ಗೂ ತಲುಪಿದ್ದು ಅಲ್ಲಿನ ಅಧ್ಯಕ್ಷ ಜೈರ್​ ಬೊಲ್ಸೊನಾರೊ ಅವರು ಹರ್ಷ ವ್ಯಕ್ತಪಡಿಸಿದ್ದು, ಭಾರತಕ್ಕೆ ಪತ್ರವನ್ನೂ ಬರೆದಿದ್ದಾರೆ ಎಂದುವರದಿಯಾಗಿದೆ. ಅದರಲ್ಲಿ ಅವರು ಹನುಮಾನ್ ಜಯಂತಿ ದಿನ ಈ ಸಂದರ್ಭದಲ್ಲಿ ರಾಮನ ಸಹೋದರ ಲಕ್ಷ್ಮಣನನ್ನು ಉಳಿಸುವುದಕ್ಕೆ ಭಗವಾನ್ ಹನುಮಾನ್ ಸಂಜೀವಿನಿ ಪರ್ವತವನ್ನೇ ಹೊತ್ತು ತಂದಂತೆ ಭಾಸವಾಗಿದೆ ಭಾರತದ ಈ ಔಷಧ ನಮ್ಮ ನೆಲಕ್ಕೆ ತಲುಪಿದಾಗ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ! (ಏಜೆನ್ಸೀಸ್)
ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 3 =
Remember me
