ವಾಷಿಂಗ್ಟನ್:ಭಾರತ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಜತೆ ದೇಶದಲ್ಲಿನ ಧಾರ್ವಿುಕ ಸ್ವಾತಂತ್ರ್ಯದ ಕುರಿತೂ ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಬಗ್ಗೆ ಟ್ರಂಪ್ ಹಾಗೂ ಮೋದಿ ರ್ಚಚಿಸಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಯೊಬ್ಬರು, ನಿಶ್ಚಿತವಾಗಿಯೂ ಧಾರ್ವಿುಕ ಸ್ವಾತಂತ್ರ್ಯದ ವಿಚಾರವನ್ನು ಪ್ರಸ್ತಾಪಿಸಲಿದ್ದಾರೆ ಎಂದಿದ್ದಾರೆ.
ಸಿಎಎ ಮತ್ತು ಎನ್​ಆರ್​ಸಿಯಂಥ ವಿಷಯಗಳನ್ನು ಅಧ್ಯಕ್ಷರು ಪ್ರಧಾನಿ ಮೋದಿ ಜೊತೆ ರ್ಚಚಿಸಲಿದ್ದಾರೆ. ಉಭಯ ದೇಶಗಳ ಪ್ರಜಾಪ್ರಭುತ್ವದ ಪರಂಪರೆ ಮತ್ತು ಧಾರ್ವಿುಕ ಸ್ವಾತಂತ್ರ್ಯದ ವಿಷಯಗಳನ್ನು ಟ್ರಂಪ್ ಸಾರ್ವಜನಿಕ ಸಭೆ ಮತ್ತು ಪ್ರಧಾನಿ ಜೊತೆಗಿನ ಖಾಸಗಿ ಮಾತುಕತೆಯಲ್ಲಿ ರ್ಚಚಿಸಲಿದ್ದಾರೆ. ತನ್ನ ಪ್ರಜಾಸತ್ತಾತ್ಮಕ ಪರಂಪರೆ ಮತ್ತು ಧಾರ್ವಿುಕ ಅಲ್ಪಸಂಖ್ಯಾತರ ಗೌರವವನ್ನು ಭಾರತ ಮುಂದುವರಿಸುವ ಬಗ್ಗೆ ಇಡೀ ಜಗತ್ತು ಕಾತರದಿಂದ ನೋಡುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ವಿರುದ್ಧ ಕ್ರಮಕ್ಕೆ ಪಾಕ್​ಗೆ ಸೂಚನೆ:ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಬೇಕು. ಉದ್ವಿಗ್ನತೆ ಹೆಚ್ಚಿಸುವಂಥ ಯಾವುದೇ ಹೇಳಿಕೆ ನೀಡಬಾರದು ಅಥವಾ ಕೃತ್ಯಗಳಲ್ಲಿ ತೊಡಗಬಾರದೆಂದು ಭೇಟಿ ವೇಳೆ ಭಾರತ ಮತ್ತು ಪಾಕಿಸ್ತಾನಕ್ಕೆ ಟ್ರಂಪ್ ಸಲಹೆ ನೀಡುವ ಸಾಧ್ಯತೆ ಇದೆ. ಉಭಯ ದೇಶಗಳ ಮಧ್ಯೆ ಸಂಧಾನಕ್ಕೆ ಟ್ರಂಪ್ ಸಹಾಯಹಸ್ತ ಚಾಚಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನ ಅಧಿಕಾರಿಯೊಬ್ಬರು, ಎರಡೂ ದೇಶಗಳು ದ್ವಿಪಕ್ಷೀಯ ಚರ್ಚೆ ನಡೆಸುವುದು ಒಳ್ಳೆಯದೆಂಬುದು ಅಧ್ಯಕ್ಷರ ಅಭಿಪ್ರಾಯವಾಗಿದೆ ಎಂದರು. ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರವೇ ಅಂಥ ಮಾತುಕತೆ ಸಾಧ್ಯವೆಂಬುದು ಅಮೆರಿಕದ ನಿಲುವಾಗಿದೆ ಎಂದರು.
ಆಗ್ರಾ ಭೇಟಿ ಗೊಂದಲ:ಟ್ರಂಪ್ ದಂಪತಿ ಆಗ್ರಾದ ತಾಜ್​ವುಹಲ್​ಗೆ ಭೇಟಿ ನೀಡುವಾಗ ಮೋದಿ ಇವರ ಜೊತೆಗಿರುವ ಬಗ್ಗ್ಗೆ ಗೊಂದಲ ಉಂಟಾಗಿದೆ. ಪ್ರಧಾನಿ ಮೋದಿ ಕೂಡ ಅಮೆರಿಕದ ಮುಖ್ಯಸ್ಥರ ಜೊತೆಯಲ್ಲಿರುತ್ತಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಟ್ರಂಪ್ ಮತ್ತು ಮೆಲನಿಯಾ ಭೇಟಿ ವೇಳೆ ಯಾವುದೇ ಅಧಿಕೃತ ಕಾರ್ಯಕ್ರಮ ಇರಬಾರದು. ಭಾರತದ ಕಡೆಯಿಂದ ಉನ್ನತ ಪ್ರತಿನಿಧಿಗಳು ಇರುವುದು ಸೂಕ್ತವಲ್ಲ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ ಎಂದು ಕೆಲ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಟೀಕೆ
ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಕ್ಕೆ ಎಷ್ಟು ಜನ ಸೇರುತ್ತಾರೆ ಎಂಬ ಬಗ್ಗೆ ದಿನಕ್ಕೊಂದು ಸಂಖ್ಯೆ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ, ‘ಭರವಸೆಗಳನ್ನು ನೀಡಿರಿ, ಭರವಸೆಗಳನ್ನು ಮುರಿಯಿರಿ, ಭರವಸೆ ನೀಡಿದ್ದನ್ನು ಮರೆತುಬಿಡಿ’ ಎಂದು ಪ್ರಧಾನಿ ಮೋದಿಯವರನ್ನು ವ್ಯಂಗ್ಯಭರಿತವಾಗಿ ಟೀಕಿಸಿದೆ. ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವಂತೆ, ಮಾನ್ಯ ಮೋದಿಯವರು ಟ್ರಂಪ್ ಭೇಟಿಯ ಸಮಯದಲ್ಲಿ ರೋಡ್ ಶೋಗೆ ಸುಮಾರು ಎಪ್ಪತ್ತು ಲಕ್ಷ ಜನರನ್ನು ಸೇರಿಸುವ ಭರವಸೆ ನೀಡಿದ್ದಾರಂತೆ. ಇದು ಸಾಧ್ಯವೇ? ಇದು ಅಗತ್ಯವೇ? ಜನತೆಯ ಹಣವನ್ನು ವ್ಯರ್ಥ ಮಾಡುವುದೇಕೆ?’ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ. ಏನಿದು ಡೊನಾಲ್ಡ್ ಟ್ರಂಪ್ ನಾಗರಿಕ ಅಭಿನಂದನಾ ಸಮಿತಿ? ಈ ಸಮಿತಿಯನ್ನು ನಡೆಸುತ್ತಿರುವ ಮುಖ್ಯಸ್ಥ ಯಾರು? ಖಾಸಗಿ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಜನತೆಯ ತೆರಿಗೆಯ 120 ಕೋಟಿ ರೂ. ಪೋಲು ಮಾಡುತ್ತಿರುವುದೇಕೆ? ಎಂದು ಟೀಕಿಸಿದೆ.
ಕೇಜ್ರಿವಾಲ್-ಸಿಸೋಡಿಯಾಗೆ ಕೊಕ್
ಟ್ರಂಪ್ ಪತ್ನಿ ಮೆಲನಿಯಾ ದೆಹಲಿಯ ಕೆಲವು ಸರ್ಕಾರಿ ಶಾಲೆಗಳಿಗೆ ನೀಡಲಿರುವ ಭೇಟಿ ಕಾರ್ಯಕ್ರಮ ಪಟ್ಟಿಯಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾರನ್ನು ಕೈಬಿಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್) ಆಪಾದಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
