ಕಾನ್ಪುರ :“ನನ್ನಂಥ ಸಾಮಾನ್ಯ ಹಳ್ಳಿ ಹುಡುಗ ದೇಶದ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸುವ ಗೌರವ ಹೊಂದಬಹುದೆಂದು ನಾನೆಂದೂ ಯೋಚಿಸಿರಲಿಲ್ಲ. ಆದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅದನ್ನು ಸಾಧ್ಯಗೊಳಿಸಿದೆ” ಎಂದು ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ಹೇಳಿದ್ದಾರೆ. ಅವರು, ತಮ್ಮ ಹುಟ್ಟೂರಾದ ಉತ್ತರಪ್ರದೇಶದ ಕಾನ್ಪುರ ದೆಹಾತ್​ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು.
“ನಾನು ಇಂದು ಎಲ್ಲಿಗೆ ತಲುಪಿದ್ದೇನೋ ಅದರ ಶ್ರೇಯಸ್ಸು ನನ್ನ ಈ ಹಳ್ಳಿಯ ಪ್ರಾಂತ್ಯದ ಮಣ್ಣಿಗೆ ಹಾಗೂ ನಿಮ್ಮ ಪ್ರೀತಿ-ಆಶೀರ್ವಾದಗಳಿಗೆ ಸಲ್ಲುತ್ತದೆ” ಎಂದ ರಾಷ್ಟ್ರಪತಿ ಕೋವಿಂದ್​ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನದ ರಚನಾಕಾರರನ್ನು ಸ್ಮರಿಸಿದರು. ತಮ್ಮ ಹಳ್ಳಿಯ ಪ್ರತೀತಿಗಳ ಬಗ್ಗೆ, ಕುಟುಂಬದ ಸಂಸ್ಕಾರದ ಬಗ್ಗೆ ಮಾತಾಡಿದ ಅವರು, ಪರೌಂಖ್​ ಕೇವಲ ತಮ್ಮ ಹಳ್ಳಿಯಲ್ಲ, ‘ಮಾತೃಭೂಮಿ’ಯಾಗಿದೆ. ದೇಶಕ್ಕಾಗಿ ದುಡಿಯಲು ಪ್ರೇರಣೆಯಾಗಿದೆ ಎಂದರು.
Some moments of President Kovind visiting his native village Paraunkh in Kanpur Dehat. The President paid tributes to Babasaheb Dr B.R. Ambedkar, visited Milan Kendra & Veerangana Jhalkari Bai Inter College and addressed a Jan Sambodhan Samorah.pic.twitter.com/FQkuh7Aqy7
— President of India (@rashtrapatibhvn)June 27, 2021

ತಮ್ಮ ಹುಟ್ಟೂರಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿಗಳು ಇಂದು ಬೆಳಿಗ್ಗೆ ಪರೌಂಖ್​ ಗ್ರಾಮ ತಲುಪಿದರು. ಉ.ಪ್ರ. ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೋವಿಂದ್ ಅವರನ್ನು ಸ್ವಾಗತಿಸಿದರು. ನಂತರ ಗ್ರಾಮದ ಸುತ್ತ ಓಡಾಡಿದ ಅವರು, ಪತ್ನಿ ಮತ್ತು ಪುತ್ರಿಯೊಂದಿಗೆ ಪಾತ್ರಿ ದೇವಿ ಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದರು ಎನ್ನಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
