ನವದೆಹಲಿ:ಎರಡು ದಿನಗಳ ಭಾರತ ಪ್ರವಾಸ ಮುಗಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕುಟುಂಬ ಇಂದು ರಾತ್ರಿ 10:30ರ ಸುಮಾರಿಗೆ ಅಮೆರಿಕಗೆ ಪ್ರಯಾಣ ಬೆಳೆಸಿತು.
ತವರಿಗೆ ತೆರಳುವ ಮುನ್ನ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಏರ್ಪಡಿಸಿದ್ದ ವಿಶೇಷವಾದ ಔತಣಕೂಟದಲ್ಲಿ ಭಾಗಿಯಾಗಿ ಟ್ರಂಪ್​ ಕುಟುಂಬ ಬಗೆ ಬಗೆಯ ಖಾದ್ಯವನ್ನು ಸವಿಯಿತು.
ರಾಷ್ಟ್ರಪತಿ ಭವನದಲ್ಲಿ ಟ್ರಂಪ್ ಕುಟುಂಬ ಹಾಗೂ ಅಮೆರಿಕದ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಔತಣಕೂಟದಲ್ಲಿ ದೇಶಿ ಶೈಲಿಯ ಬಗೆಬಗೆಯ ಖಾದ್ಯಗಳನ್ನು ಬಡಿಸಲಾಗಿತ್ತು. ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳೆರಡನ್ನು ಸಿದ್ಧಪಡಿಸಲಾಗಿತ್ತು.
ಆಲೂ ಟಿಕ್ಕಿ, ಸ್ಪಿನಾಚ್ ಪಾಪಡಿ, ಸಲ್ಮೊನ್ ಫಿಶ್ ಟಿಕ್ಕಾ, ದಾಲ್ ರೈಸಿನಾ ಸೇರಿ ಹಲವು ಪ್ರಮುಖ ಖಾದ್ಯಗಳನ್ನು ತಯಾರಿಸಲಾಗಿತ್ತು. ಇವುಗಳಲ್ಲಿ ದಾಲ್ ರೈಸಿನಾ ತಯಾರಿಸಲು ಲಖನೌದಿಂದ ವಿವಿಧ ಮಸಾಲೆ ಪದಾರ್ಥಗಳನ್ನು ತರಿಸಲಾಗಿದ್ದು, ಇದರ ತಯಾರಿಕೆಗೆ ಸುಮಾರು 48 ಗಂಟೆ ಬೇಕಾಗುತ್ತದೆ ಎಂದು ತಿಳಿದುಬಂದಿದೆ. ಸೋಮವಾರ ಅಹಮದಾಬಾದ್​ನಲ್ಲಿ ಟ್ರಂಪ್ ದಂಪತಿಗೆ ಖಾಮನ್, ಗುಜರಾತ್​ನ ವಿಶೇಷ ಶುಂಠಿ ಚಹ, ಸಮೋಸಾ, ಐಸ್ ಚಹ ಹಾಗೂ ಎಳನೀರು ನೀಡಲಾಗಿತ್ತು.(ಏಜೆನ್ಸೀಸ್​)
Delhi: Menu of the dinner banquet at Rashtrapati Bhavan hosted in the honour of US President Donald Trump.pic.twitter.com/qcnwzWkJDz
— ANI (@ANI)February 25, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eight =
Remember me
