ನವದೆಹಲಿ:ಈ ಹಿಂದೆ ಯುಪಿಎ ಅಂತಿದ್ದ ವಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಇಂಡಿಯಾ ಎಂದು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಭಾರತದ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತಹ ಕೆಲವು ಬೆಳವಣಿಗೆಗಳು ಸಹ ಇದೀಗ ನಡೆಯುತ್ತಿವೆ.
ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇಂಡಿಯಾ ಎನ್ನುವ ಬದಲು ಭಾರತ ಎಂಬ ಹೆಸರನ್ನು ಮುಂಚೂಣಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಷ್ಟ್ರಪತಿ ಭವನದ ಆಹ್ವಾನ ಪತ್ರದಲ್ಲಿ ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:VIDEO| ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕಾಗಿ 7,200 ವಜ್ರಗಳೊಂದಿಗೆ ವಿಶೇಷ ಭಾವಚಿತ್ರ ತಯಾರಿಸಿದ ಸೂರತ್ ವಾಸ್ತುಶಿಲ್ಪಿ..
ಸೆ. 9 ಮತ್ತು 10ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ G-20 ದೇಶಗಳ ಸಮಾವೇಶ ನಡೆಯಲಿದ್ದು, ರಾಷ್ಟ್ರಪತಿ ಭವನದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್​ ಆಫ್​ ಭಾರತ್​ ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕಾಂಗ್ರೆಸ್​ ಹಿರಿಯ ಮುಖಂಡ ಜೈರಾಮ್​ ರಮೇಶ್​ ಟ್ವೀಟ್​ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸುದ್ದಿ ನಿಜಕ್ಕೂ ನಿಜ. ಸೆ. 9ರ ಔತಣಕೂಟಕ್ಕೆ ಜಿ-20 ದೇಶದ ನಾಯಕರುಗಳಿಗೆ ಸಾಮಾನ್ಯವಾಗಿ ಪ್ರೆಸಿಡೆಂಟ್​ ಆಫ್​ ಇಂಡಿಯಾ ಎಂಬ ಹೆಸರಿನ ಬದಲು ಪ್ರೆಸಿಡೆಂಟ್​ ಆಫ್​ ಭಾರತ್ ಹೆಸರಿನಲ್ಲಿ ರಾಷ್ಟ್ರಪತಿ ಭವನ ಆಹ್ವಾನ ಪತ್ರಿಕೆಯನ್ನು ಕಳುಹಿಸಿದೆ. ಇದೀಗ ನಾವು ಸಂವಿಧಾನದ ಆರ್ಟಿಕಲ್​ 1ನ್ನು ಓದಬಹುದು. ಅದರಲ್ಲಿ ಭಾರತವು ಇಂಡಿಯಾ ಆಗಿತ್ತು, ಅದು ರಾಜ್ಯಗಳ ಒಕ್ಕೂಟವಾಗಿರುತ್ತದೆ. ಆದರೆ, ಇದೀಗ ರಾಜ್ಯಗಳ ಒಕ್ಕೂಟವು ಕೂಡ ಆಕ್ರಮಣಕ್ಕೆ ಒಳಗಾಗಿದೆ ಎಂದು ಟೀಕಿಸಿದ್ದಾರೆ.
So the news is indeed true.
Rashtrapati Bhawan has sent out an invite for a G20 dinner on Sept 9th in the name of 'President of Bharat' instead of the usual 'President of India'.
Now, Article 1 in the Constitution can read: “Bharat, that was India, shall be a Union of States.”…
— Jairam Ramesh (@Jairam_Ramesh)September 5, 2023

ಇದರ ನಡುವೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಮಾಡಿರುವ ಟ್ವೀಟ್​ ಸಹ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ರಿಪಬ್ಲಿಕ್ ಆಫ್ ಭಾರತ್ ಎಂದು ಶರ್ಮ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಇದೆ ಎಂದಿದ್ದಾರೆ.
ಇದನ್ನೂ ಓದಿ:ಪಂಚೆ, ಧೋತಿ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್‌ ಖಾನ್; ಮಗಳು ಸುಹಾನಾ, ನಟಿ ನಯನತಾರಾ ಸಾಥ್
REPUBLIC OF BHARAT – happy and proud that our civilisation is marching ahead boldly towards AMRIT KAAL
— Himanta Biswa Sarma (@himantabiswa)September 5, 2023

ಸೆ.18ರಿಂದ 5 ದಿನ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ರಿಪಬ್ಲಿಕ್​ ಆಫ್​ ಭಾರತ್​ ಎಂಬ ಪ್ರಸ್ತಾವ ಸ್ವೀಕಾರ ಸಾಧ್ಯತೆ ಇದೆ. ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಹ್ವಾನ ಪತ್ರಿಕೆ ಮುದ್ರಣವಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಈ ಹೊಸ ಚರ್ಚೆಯ ಬಗ್ಗೆ ಈಗಾಗಲೇ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ದೇಶದ ಹೆಸರನ್ನು ‘ಇಂಡಿಯಾ’ ಬದಲು ಭಾರತ ಎನ್ನಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಬೇಡಿಕೆ ಇಟ್ಟಿದ್ದಾರೆ.(ಏಜೆನ್ಸೀಸ್​)
ಪಂಚೆ, ಧೋತಿ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್‌ ಖಾನ್; ಮಗಳು ಸುಹಾನಾ, ನಟಿ ನಯನತಾರಾ ಸಾಥ್

71 ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 15 =
Remember me
