| ಹಿರಣ್ಮಯ್ ಪಾಂಡ್ಯಕೋವಿಡ್ -19 ಸಾಂಕ್ರಾಮಿಕವು ಜಾಗತಿಕ ಸಾರ್ವಜನಿಕ ಆರೋಗ್ಯ ಸ್ಥಿತಿಯಲ್ಲಿನ ಸವಾಲುಗಳು ಮತ್ತು ಅಂತರಗಳ ಬಗ್ಗೆ ನಮ್ಮನ್ನು ಎಚ್ಚರಿಸಿತು. ಸಾಂಕ್ರಾಮಿಕ ರೋಗದಿಂದ ಉಂಟಾದ ಆಘಾತವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಮಾನವಾಗಿ ಅನುಭವಿಸಲಾಯಿತು. ಅಂದಿನಿಂದ, ವೈಜ್ಞಾನಿಕ ಸಮುದಾಯ, ಆರೋಗ್ಯ ಕಾರ್ಯಕರ್ತರು, ನೀತಿ ನಿರೂಪಕರು, ಪ್ರಜ್ಞಾವಂತ ನಾಗರಿಕರ ದಣಿವರಿಯದ ಮತ್ತು ಸಹಕಾರಿ ಪ್ರಯತ್ನಗಳಿಂದಾಗಿ ನಾವು ದೊಡ್ಡ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದೇವೆ. ಆದಾಗ್ಯೂ, ಹಣದುಬ್ಬರದ ಹೆಚ್ಚಿನ ದರ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದಂತಹ ವಿಶ್ವದಾದ್ಯಂತದ ಕೆಲವು ಬೆಳವಣಿಗೆಗಳಿಂದ ಚೇತರಿಕೆಗೆ ಹಿನ್ನಡೆಯಾಗಿದೆ. ಕಾರ್ಮಿಕರ ಮತ್ತು ಸಂಸ್ಥೆಗಳ ಕೆಲವು ಗುಂಪುಗಳ ಮೇಲಿನ ಪರಿಣಾಮದಿಂದಾಗಿ ಕಾರ್ಮಿಕ ಮಾರುಕಟ್ಟೆಗಳಲ್ಲಿ ಅಸಮಾನತೆ ಹೆಚ್ಚಾಗಿದೆ, ಇದು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ನಡುವೆ ಹೆಚ್ಚುತ್ತಿರುವ ವ್ಯತ್ಯಾಸಕ್ಕೆ ಕಾರಣವಾಗಿದೆ. ಅದೇ ಸಮಯದಲ್ಲಿ, ಸರ್ಕಾರಗಳು ಮತ್ತು ನಾಗರಿಕ ಸಮಾಜದ ಸಂಘಟಿತ ಪ್ರಯತ್ನಗಳು ಸಂಪನ್ಮೂಲಗಳ ಸಮಾನ ಹಂಚಿಕೆಗೆ ಸೇತುವೆಯಾಗಿ ಕಾರ್ಯನಿರ್ವಹಿಸಿವೆ. ಉದಾಹರಣೆಗೆ, ಸಾಮಾಜಿಕ ರಕ್ಷಣೆಯ ಮೇಲೆ, ವಿಶೇಷವಾಗಿ ಲಾಕ್ ಡೌನ್ ಅವಧಿಯಲ್ಲಿ, ಈ ಕಠಿಣ ಸಮಯದಲ್ಲಿ ಜನರು ಒಂದಾಗಿ ಕಾರ್ಯನಿರ್ವಹಿಸಲು ನೆರವಾಯಿತು. ಉದ್ಯೋಗಗಳನ್ನು ಕಳೆದುಕೊಂಡ ಅಥವಾ ವೇತನ ಕಡಿತಕ್ಕೆ ಒಳಗಾದ ಕಾರ್ಮಿಕರಿಗೂ ಇದು ನಿಜವಾಗಿತ್ತು. ಸರ್ಕಾರ ಮತ್ತು ನಾಗರಿಕ ಸಮಾಜದ ನಡುವಿನ ಈ ಸಾಮರಸ್ಯವು ಬಿಕ್ಕಟ್ಟಿನ ಸಮಯದಲ್ಲಿ ಸಂಕಷ್ಟ ತಗ್ಗಿಸುವಲ್ಲಿ ಮಾತ್ರವಲ್ಲದೆ, ದೀರ್ಘಕಾಲೀನ ಪರಿಹಾರವನ್ನು ಒದಗಿಸುವಲ್ಲಿ ಯಶಸ್ವಿಯಾದ ನೀತಿ ಕ್ರಮಗಳನ್ನು ರೂಪಿಸಿತು.
ಆದರೆ, ನಾವು ಇನ್ನೂ ಹೆಚ್ಚಿನದನ್ನು ಮಾಡಬಹುದು. ಭಾರತದ ಜಿ 20ರ ಅಧ್ಯಕ್ಷತೆ ಪರಿಸ್ಥಿತಿಯನ್ನು ಅವಲೋಕಿಸಲು, ಈ ಸವಾಲುಗಳ ತೀವ್ರತೆಯನ್ನು ಮೌಲ್ಯಮಾಪನ ಮಾಡಲು ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬದ್ಧತೆಗಳನ್ನು ನವೀಕರಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ದೃಢವಾದ ಚೇತರಿಕೆಯ ಹೊರತಾಗಿಯೂ, ಜಾಗತಿಕವಾಗಿ ಕೆಲಸ ಮಾಡಿದ ಗಂಟೆಗಳ ಸಂಖ್ಯೆ ಕೋವಿಡ್-ಪೂರ್ವ ಮಟ್ಟಕ್ಕಿಂತ ಶೇ.1.5 ಕಡಿಮೆಯಾಗಿದೆ. ಇದು ಸುಮಾರು 40 ದಶಲಕ್ಷ ಪೂರ್ಣಾವಧಿ ಉದ್ಯೋಗಗಳ ಕೊರತೆಗೆ ಸಮನಾಗಿದೆ. ಹೆಚ್ಚುವರಿಯಾಗಿ, ಅಂತಾರಾಷ್ಟ್ರೀಯ ಕಾರ್ಮಿಕ ಮಾರುಕಟ್ಟೆಯಲ್ಲೂ ಹೆಚ್ಚುತ್ತಿರುವ ಭಿನ್ನತೆಗಳಿವೆ. ಉದಾಹರಣೆಗೆ, ಸೇವಾ ಪೂರೈಕೆದಾರರು ಮತ್ತು ಮಾರಾಟ, ಕಾರ್ಮಿಕರಂತಹ“ಕಡಿಮೆ ಮತ್ತು ಮಧ್ಯಮ ಕೌಶಲ್ಯದ” ಉದ್ಯೋಗಗಳಿಗೆ ಹೋಲಿಸಿದರೆ “ಹೆಚ್ಚಿನ ಕೌಶಲ್ಯವುಳ್ಳ, ಹೆಚ್ಚಿನ ವೇತನ ನೀಡುವ” ಉದ್ಯೋಗಗಳು ಬಲವಾದ ಚೇತರಿಕೆಯನ್ನು ಅನುಭವಿಸಿವೆ. ಈ ಬೆಳವಣಿಗೆಗಳು ಗುಂಪುಗಳ ನಡುವೆ ಹೆಚ್ಚುತ್ತಿರುವ ಅಸಮಾನತೆಗೆ ನೇರವಾಗಿ ಕೊಡುಗೆ ನೀಡುತ್ತವೆ, ಬಡ ಮತ್ತು ಅನನುಕೂಲಕರ ವರ್ಗಗಳು ಮತ್ತಷ್ಟು ಬಡವರಾಗುತ್ತವೆ ಹಾಗೂ ಮತ್ತೂ ಮೂಲೆಗುಂಪಾಗುತ್ತವೆ. ಸಾಂಕ್ರಾಮಿಕ ರೋಗವು ಮನೆಗೆಲಸ ಹಾಗೂ ಇತರೆ ಸೇವೆಗಳ ಆರ್ಥಿಕತೆ ಮೇಲೆ ಅವಲಂಬಿತವಾಗಿದೆ. ಅದರ ಹೊರೆ ಮಹಿಳೆಯರ ಮೇಲೆ ಅಸಮಾನವಾಗಿ ಬೀಳುತ್ತದೆ. ಈ ಸಮಸ್ಯೆಗಳನ್ನು ಗುರುತಿಸುವುದು ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ತ್ವರಿತ ಮತ್ತು ಅಂತರ್ಗತ ಚೇತರಿಕೆಗೆ ರಚನಾತ್ಮಕ ಮತ್ತು ವ್ಯವಸ್ಥಿತ ಪರಿಹಾರಗಳಿಗೆ ಚರ್ಚಿಸಲು ಹಾಗೂ ಕಾರ್ಯತಂತ್ರ ರೂಪಿಸಲು ಈ ವೇದಿಕೆ ಅನುವು ಮಾಡಿಕೊಡುತ್ತದೆ. ಈ ಸಂದರ್ಭದ ಅಗತ್ಯವೆಂದರೆ ಎಲ್ಲ ಸಹಭಾಗಿ ರಾಷ್ಟ್ರಗಳು ಕ್ರಿಯಾ-ಆಧಾರಿತ ಗುರಿ ಹೊಂದುವ ಮೂಲಕ ಮುಂದೆ ಬರುವುದು ಹಾಗು ಜಿ-20 ಇದಕ್ಕೆ ಅವಕಾಶ ಒದಗಿಸುತ್ತದೆ.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಅಂತರ್ಗತವಾಗಿರುವ ವಿಷಯಗಳ ಬಗ್ಗೆ ಒಮ್ಮತವನ್ನು ರೂಪಿಸಲು ಮತ್ತು ಒಗ್ಗೂಡಿ ಕೆಲಸ ಮಾಡಲು ಜಿ-20 ಅತ್ಯಂತ ಸೂಕ್ತ ಸಮಯದಲ್ಲಿ ಸಭೆ ಸೇರುತ್ತಿದೆ, ಬದಲಾಗುತ್ತಿರುವ ಸನ್ನಿವೇಶ ಮತ್ತು ಆರ್ಥಿಕ ಅಸ್ಥಿರತೆಯು ಕಾರ್ಮಿಕ ವರ್ಗವನ್ನು ಮತ್ತಷ್ಟು ದುರ್ಬಲಗೊಳಿಸುವ ಜಾಗತಿಕ ಕಾರ್ಮಿಕ ಮಾರುಕಟ್ಟೆಗೆ ಇದು ವಿಶೇಷವಾಗಿ ಮುಖ್ಯವಾಗಿದೆ. ಈ ಧ್ಯೇಯೋದ್ದೇಶಗಳನ್ನು ಗಮನಿಸಿದಾಗ, ಲೇಬರ್-20 (ಎಲ್-20) ಎಲ್ಲ ಕಾರ್ಮಿಕ ಸಂಘಗಳಿಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಮಸ್ಯೆಗಳು ಮತ್ತು ಸಾಮಾಜಿಕ ಕಾರ್ಮಿಕ ಚಳವಳಿಗಳ ಬಗ್ಗೆ ಚರ್ಚಿಸಲು ವೇದಿಕೆಯಾಗುತ್ತದೆ ಮತ್ತು ನಂತರ ಕಾರ್ಯಗತ ಗೊಳಿಸಬಹುದಾದ ಪರಿಹಾರಗಳೊಂದಿಗೆ ಬರುತ್ತದೆ.
ಎಲ್ -20 ಗಾಗಿ ಗಮನ ಹರಿಸುವ ಮತ್ತೊಂದು ಗಮನಾರ್ಹ ಕ್ಷೇತ್ರವೆಂದರೆ ವಿಶ್ವದಾದ್ಯಂತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ರಕ್ಷಣೆಯ ವ್ಯಾಪ್ತಿಯನ್ನು ಹೆಚ್ಚಿಸುವುದು. ಸಾಮಾಜಿಕ ಭದ್ರತೆಯು ಒಂದು ಕ್ರಿಯಾತ್ಮಕ ಪರಿಕಲ್ಪನೆಯಾಗಿದ್ದು, ಅದರ ರೂಪ ಮತ್ತು ವ್ಯಾಖ್ಯಾನವು ಕಾಲಕಾಲಕ್ಕೆ ಬದಲಾಗುತ್ತದೆ. ಕ್ಷಿಪ್ರ ತಾಂತ್ರಿಕ ಬದಲಾವಣೆಗಳು ಸಾಮಾಜಿಕ ಭದ್ರತೆ ಮತ್ತು ರಕ್ಷಣೆಯ ಹೊಸ ಆಯಾಮಗಳನ್ನು ಅನ್ವೇಷಿಸುವುದು ಅಗತ್ಯವಾಗಿದೆ. ‘ಗಿಗ್ ಮತ್ತು ಪ್ಲಾಟ್ ಫಾರ್ಮ್ ವರ್ಕ್’ (ಅರೆಕಾಲಿಕ) ನ ಉದಯದೊಂದಿಗೆ, ಸಂಸ್ಥೆಗಳಲ್ಲಿ ಕೆಲಸದ ಅವಧಿ ಕಿರಿದಾಗುತ್ತಿದೆ ಮತ್ತು ಹೊಸ ರೀತಿಯ ಉದ್ಯೋಗದಾತ-ಉದ್ಯೋಗಿ ಸಂಬಂಧಕ್ಕೆ ಕಾರಣವಾಗುತ್ತಿದೆ, ಈ ಬಾಂಧವ್ಯದ ಬಗೆಗಿನ ತಿಳಿವಳಿಕೆ ಇನ್ನೂ ಆರಂಭಿಕ ಹಂತದಲ್ಲಿದೆ. ಮೊದಲ ಕೈಗಾರಿಕಾ ಕ್ರಾಂತಿಯ ನಂತರ ಹೊರಹೊಮ್ಮಿದ ಮತ್ತು ಎರಡನೇ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಪ್ರಬುದ್ಧಗೊಂಡ ಉದ್ಯೋಗ-ಸಂಬಂಧಿತ ಸಾಮಾಜಿಕ ಭದ್ರತೆಯ ನಿಯಮಗಳಿಗೆ ಕೈಗಾರಿಕೆ 4.0 ಯುಗದಲ್ಲಿ ಮರುಬರಹದ ಅಗತ್ಯವಿದೆ.
ಜಿ-20ರ ವಿವಿಧ ಕಾರ್ಯ ಮತ್ತು ಒಡಂಬಡಿಕೆ ಗುಂಪುಗಳು ಇಲ್ಲಿ ಉಲ್ಲೇಖಿಸಲಾದ ಸಮಸ್ಯೆಗಳನ್ನು ಚರ್ಚಿಸಿವೆ. ಇಂಡೋನೇಷ್ಯಾದ ಬಾಲಿಯಲ್ಲಿನ ಅತ್ಯಂತ ಇತ್ತೀಚಿನ ಘೋಷಣೆ ಸೇರಿದಂತೆ ಜಿ 20 ನಾಯಕರ ಘೋಷಣೆಯಲ್ಲಿ ಮತ್ತು ಇತರ ದಾಖಲೆಗಳಲ್ಲಿ ಅವರು ತಮ್ಮ ಉಲ್ಲೇಖಗಳನ್ನು ಕಂಡುಕೊಳ್ಳುತ್ತಾರೆ. ಪರಿಹಾರ ಅಗತ್ಯವಾದ ಕಾಳಜಿಗಳಿಗೆ ಸಂಬಂಧಿಸಿದಂತೆ ಮತ್ತು ಕ್ರಿಯಾತ್ಮಕ ಗುರಿಗಳನ್ನು ಸಾದಿಸಲು ಜಿ 20ರ ಅಡಿಯಲ್ಲಿ ನೀತಿ ನಿರೂಪಣೆಗಳು ಮತ್ತು ಚೌಕಟ್ಟುಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಹಿನ್ನಡೆಯ ಸನ್ನಿವೇಶದ ಚೇತರಿಕೆಯನ್ನು ಹೆಚ್ಚಿಸಲು ಒಟ್ಟಾರೆ ಕಾರ್ಯತಂತ್ರಗಳನ್ನು ರೂಪಿಸುವ ಉದ್ದೇಶದಿಂದ ಎಲ್-20 ನ ಪ್ರತಿನಿಧಿಗಳು ಭೇಟಿಯಾಗಲಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಡೆತಡೆಗಳ ನಡುವೆಯೂ ಕಾರ್ಮಿಕರನ್ನು ರಕ್ಷಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಇಲ್ಲಿಯವರೆಗೆ ಮಾಡಿದ ಸಾಧನೆಗಳನ್ನು ಪರಿಶೀಲಿಸುವುದು ಮತ್ತು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾದ ಸಮಸ್ಯೆಗಳನ್ನು ಗುರುತಿಸುವುದು ಮುಂದಿನ ಕೆಲಸವಾಗಿದೆ. ತಲಾ ಜಿಡಿಪಿ, ಶಿಕ್ಷಣ ಮತ್ತು ಕೌಶಲ್ಯದ ಮಟ್ಟ, ಮಹಿಳಾ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆ, ಸಾಮಾಜಿಕ ರಕ್ಷಣೆಯ ವ್ಯಾಪ್ತಿ, ಜನಸಂಖ್ಯೆಯ ಪರಿಸ್ಥಿತಿ ಇತ್ಯಾದಿ ವಿಷಯಗಳಲ್ಲಿ ದೇಶಗಳ ನಡುವೆ ಭಾರಿ ವ್ಯತ್ಯಾಸಗಳಿವೆ. ಅದೇನೇ ಇದ್ದರೂ, ನಮ್ಮ ಅನುಭವ ವಿಭಿನ್ನ ಹಾಗೂ ಅದೇ ನಮ್ಮ ಶಕ್ತಿ. ಜಾಗತಿಕ ಕೌಶಲ್ಯ ಅಂತರಗಳು, ಉದ್ಯೋಗದ ಹೊಸ ರೂಪಗಳು, ಗಿಗ್ ಮತ್ತು ವೇದಿಕೆಗಳು (ಅರೆಕಾಲಿಕ ಉದ್ಯೋಗ) ಆರ್ಥಿಕತೆಯ ಹೆಚ್ಚಳ, ಪರಿಣಾಮಕಾರಿ ಸಾಮಾಜಿಕ ರಕ್ಷಣೆಯ ವಿಸ್ತರಣೆ, ಸಾಮಾಜಿಕ ಭದ್ರತೆಯ ಸುಸ್ಥಿರ ಹಣಕಾಸು ಮತ್ತು ಅಂತಾರಾಷ್ಟ್ರೀಯ ಕಾರ್ಮಿಕರ ಸ್ಥಿತಿಗತಿ ಈ ಎಲ್ಲ ಸಮಸ್ಯೆಗಳಂತೆ ನಮ್ಮ ದೇಶದಲ್ಲೂ ಹಲವು ಸಮಸ್ಯೆಗಳು ಇವೆ. ಈ ಸಮಸ್ಯೆಗಳ ನಡುವೆ, ಜಿ-20 ಪ್ರಕ್ರಿಯೆಗಳು ಮತ್ತು ಎಲ್-20 ನಂತಹ ಸಹಭಾಗಿ ತಂಡಗಳ ಪಾಲ್ಗೊಳ್ಳುವಿಕೆಯ ನಡುವಿನ ಸಮಾನ ಅಂಶವು ಕಾರ್ಮಿಕ ಕಲ್ಯಾಣದ ಪ್ರಗತಿಯ ಕಡೆಗೆ ಬದ್ಧತೆಯ ಕುರುಹಾಗಿ ಉಳಿದಿದೆ, ಇದು ಒಂದು ಭವಿಷ್ಯ’. ‘ಒಂದು ಭೂಮಿ. ಒಂದು ಕುಟುಂಬ’ದ ದೃಷ್ಟಿಕೋನದಲ್ಲಿ ಹುದುಗಿರುವ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಂದ ನಿರ್ದೇಶಿಸಲ್ಪಟ್ಟಿದೆ.(ಲೇಖಕರು: ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಅಧ್ಯಕ್ಷರು, ಕಾರ್ಮಿಕ-20 ಮುಖ್ಯಸ್ಥರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 5 =
Remember me
