ನವದೆಹಲಿ:ತೀವ್ರ ವಿರೋಧದ ನಡುವೆಯೂ ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಇಂದು ಸಹಿ ಹಾಕಿದರು.
ಕೃಷಿ ಸುಧಾರಣಾ ಮಸೂದೆಗಳು ಸಂಸತ್ತಿನಲ್ಲಿ ಮಂಡನೆಯಾದಾಗಿನಿಂದ..ಅಂಗೀಕಾರವಾಗುವವರೆಗೂ ತೀವ್ರ ವಿರೋಧವೇ ವ್ಯಕ್ತವಾಗುತ್ತಿದೆ. ಇದೇ ವಿಚಾರಕ್ಕೆ ಶಿರೋಮಣಿ ಅಕಾಲ್ ದಳ ಎನ್​ಡಿಎ ಮೈತ್ರಿಕೂಟವನ್ನೇ ತೊರೆದಿದೆ. ರೈತ ವಿರೋಧಿ ಕಾಯ್ದೆ ಎಂದಿಗೂ ಜಾರಿಯಾಗಬಾರದು ಎಂದು ಆಗ್ರಹಿಸಿರುವ ಎಸ್​ಎಡಿ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಬಿಲ್​ಗೆ ಅಂಕಿತ ಹಾಕಬಾರದು ಎಂದೂ ಒತ್ತಾಯಿಸಿತ್ತು. ಛತ್ತೀಸ್​ಗಢ ಸಿಎಂ ಭೂಪೇಶ್ ಬಾಗೆಲ್ ಕೂಡ ರಾಷ್ಟ್ರಪತಿಯನ್ನು ಒತ್ತಾಯಿಸಿದ್ದರು.
ಸೆ.20ರಂದು ರಾಜ್ಯಸಭೆಯಲ್ಲಿ ಮೂರು ಕೃಷಿ ಸುಧಾರಣಾ ಮಸೂದೆಗಳು ಅಂಗೀಕಾರ ಆದಾಗಿನಿಂದಲೂ ದೇಶಾದ್ಯಂತ ರೈತರು ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆಯೂ ‘ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ-2020, ರೈತರ ಉತ್ಪಾದನಾ ವ್ಯಾಪಾರ-ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020, ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020ಕ್ಕೆ ರಾಷ್ಟ್ರಪತಿಯವರಿಂದ ಅನುಮೋದನೆ ಸಿಕ್ಕಿದೆ.
ಕೃಷಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಸೆ. 20ರಂದು ಧ್ವನಿಮತದಿಂದ ಅಂಗೀಕರಿಸಲಾಗಿದೆ. ಆದರೆ ಇದರಲ್ಲಿ ಕೆಲ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿರೋಧ ಪಕ್ಷಗಳು ಮತವಿಭಜನೆಗೆ ಕೋರಿದ ವೇಳೆ ಎಲ್ಲ ಸಂಸದರು ಅವರ ಆಸನದಲ್ಲಿ ಇದ್ದರು ಎಂಬುದು ಕಲಾಪದ ವಿಡಿಯೋ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಆದರೆ, ಮಸೂದೆ ಮೇಲಿನ ಚರ್ಚೆ ವೇಳೆಯಲ್ಲೇ ಸದನದಲ್ಲಿ ಗದ್ದಲವಾಯಿತು. ಪ್ರತಿಪಕ್ಷ ಸಂಸದರು ಪ್ರತಿಭಟನೆ ನಡೆಸಿದ್ದರು ಎಂದು ಸರ್ಕಾರ ಹೇಳಿತ್ತು. ಗದ್ದಲ ನಡುವೆಯೇ ಧ್ವನಿ ಮತಕ್ಕೆ ಹಾಕಲು ಸಭಾಧ್ಯಕ್ಷ ಪೀಠದಲ್ಲಿದ್ದ ಉಪಾಧ್ಯಕ್ಷ ಹರಿವಂಶ ಸಿಂಗ್ ಅನುಮತಿ ನೀಡಿದರು. ನಂತರ ಗದ್ದಲದ ಮಧ್ಯದಲ್ಲೇ ಧ್ವನಿಮತದಿಂದ ಅಂಗೀಕಾರವಾಗಿದೆ ಎಂದು ರೂಲಿಂಗ್ ನೀಡಿದರು.
ಕೃಷಿ ಮಸೂದೆಗಳು ಅನುಮೋದನೆಗೊಂಡ ಬೆನ್ನಲ್ಲೇ ಪ್ರಧಾನಿಯಿಂದ ಭರವಸೆ; ಎಂಎಸ್​ಪಿಗೆ ಇಲ್ಲ ನಿರ್ಬಂಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eighteen =
Remember me
