ನವದೆಹಲಿ:ಕರೊನಾ ವೈರಸ್​ ಪ್ರಸರಣದ ಸಂದರ್ಭದಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಸುಳ್ಳುಸುದ್ದಿಗಳು, ಸಂಬಂಧವೇ ಇಲ್ಲದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.
ಕರೊನಾ ನಿಯಂತ್ರಣದೊಂದಿಗೆ ಅದಕ್ಕೆ ಸಂಬಂಧಿಸಿದ ಫೇಕ್​ ನ್ಯೂಸ್​ಗಳನ್ನು ನಿಯಂತ್ರಿಸುವುದೂ ದೊಡ್ಡ ಸಾಹಸವೇ ಆಗುತ್ತಿದೆ. ಜನರನ್ನು ಪ್ಯಾನಿಕ್​ ಮಾಡುವಂತಹ ಅನೇಕ ವಿಡಿಯೋಗಳು, ಫೋಟೋಗಳು, ಪೋಸ್ಟ್​ಗಳು ನಿರಂತರವಾಗಿ ವೈರಲ್​ ಆಗುತ್ತಲೇ ಇದೆ.
ಈ ಮಧ್ಯ ಕೇಂದ್ರ ಸರ್ಕಾರದ ಪ್ರೆಸ್​ ಇನ್ಫಾರ್ಮೇಶನ್​ ಬ್ಯೂರೋ ಒಂದು ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಕೊವಿಡ್​​-19 ಫ್ಯಾಕ್ಟ್​ಚೆಕ್​ ಘಟಕ (COVID-19 Fact Check Unit)ವನ್ನು ಸ್ಥಾಪಿಸಿದೆ. ಜನಸಾಮಾನ್ಯರೂ ಕೂಡ ಕರೊನಾಕ್ಕೆ ಸಂಬಂಧಪಟ್ಟಂತೆ ವೈರಲ್​ ಆಗುವ ಯಾವುದೇ ವಿಚಾರದ ಬಗ್ಗೆ ಪಿಐಬಿಗೆ ಇ-ಮೇಲ್​ ಮಾಡಿದರೆ ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಲಿದೆ. ಅದು ಸುಳ್ಳೋ, ಸತ್ಯವೋ ಎಂಬುದನ್ನು ಸ್ಪಷ್ಟಪಡಿಸಲಿದೆ.
ಅಷ್ಟೇ ಅಲ್ಲ ಪಿಐಬಿ ಪ್ರತಿದಿನ ರಾತ್ರಿ 8 ಗಂಟೆಗೆ ಆ ದಿನದ ಕರೊನಾ ಹೆಲ್ತ್​ಬುಲೆಟಿನ್​ ಬಿಡುಗಡೆ ಮಾಡಲಿದೆ. ಇದರಲ್ಲಿ ಆಯಾ ದಿನದ ಕರೊನಾ ವೈರಸ್​ ಸೋಂಕು ಪ್ರಸರಣದ ಬಗ್ಗೆ, ನಿಯಂತ್ರಣ ಸೇರಿ ಹಲವು ವಿಚಾರಗಳಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಕುರಿತು ಮಾಹಿತಿ ಇರಲಿದೆ. ಬುಧವಾರದಿಂದಲೇ ಇದು ಕಾರ್ಯರೂಪಕ್ಕೆ ಬಂದಿದ್ದು, ಮೊದಲ ಹೆಲ್ತ್​ ಬುಲೆಟಿನ್​ನ್ನು ನಿನ್ನೆ ಸಂಜೆ 6.30ಕ್ಕೆ ಪಿಐಬಿ ಬಿಡುಗಡೆ ಮಾಡಿದೆ.
ಕೊವಿಡ್​-19 ವೈರಸ್​ಗೆ ಸಂಬಂಧಪಟ್ಟಂತೆ ಯಾವುದೇ ಅನುಮಾನವಿದ್ದರೂ ಪಿಐಬಿಯ ಫ್ಯಾಕ್ಟ್​ಚೆಕ್​ ಯುನಿಟ್​ಗೆ ಮೇಲ್​ ಕಳಿಸಬಹುದು. ಅದನ್ನು ಸೂಕ್ತ ತನಿಖೆಗೆ ಒಡ್ಡಿ, ಸತ್ಯಾಸತ್ಯತೆಯನ್ನು ಪ್ರಸ್ತುತಪಡಿಸಲು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಂತ್ರಜ್ಞರ ತಂಡವೊಂದನ್ನು ರಚಿಸಿದೆ ಎಂದು ಪಿಐಬಿ ಹೇಳಿದೆ. (ಪಿಐಬಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
