ನವದೆಹಲಿ:ಜೂನ್ 23ರಿಂದ ಆರಂಭವಾಗಬೇಕಾಗಿದ್ದ ಜಮ್ಮು ಕಾಶ್ಮೀರದ ಅಮರನಾಥ ಯಾತ್ರೆಯನ್ನು ಕರೊನಾ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಪ್ರಕಟಿಸಿದ ದೇವಸ್ಥಾನ ಆಡಳಿತ ಮಂಡಳಿ ನಂತರ ಕೆಲವೇ ನಿಮಿಷಗಳಲ್ಲೇ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.
ಒಟ್ಟು 42 ದಿನಗಳ ಈ ಜಗತ್ಪ್ರಸಿದ್ಧ ಯಾತ್ರೆ ಕಾಶ್ಮೀರದ ಎರಡು ಸ್ಥಳಗಳಿಂದ ಜೂನ್ 23ರಂದು ಏಕಕಾಲಕ್ಕೆ ಆರಂಭವಾಗುತ್ತದೆ. ‘‘ಲೆಫ್ಟಿನೆಂಟ್ ಗವರ್ನರ್ ಜಿ.ಸಿ. ಮುರ್ಮು ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಅಮರನಾಥ ದೇವಸ್ಥಾನ ಮಂಡಳಿಯ ಆಡಳಿತ ಸದಸ್ಯರ 38ನೇ ಸಭೆಯಲ್ಲಿ, ಕರೊನಾ ಹಾವಳಿಯ ಕಾರಣ ಯಾತ್ರೆಯನ್ನು ರದ್ದುಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಅದೇ ದಿನದಂದು ವಿಧಿವಿಧಾನಗಳ ಪ್ರಕಾರ ಪೂಜೆಯು ಸರಳವಾಗಿ ನಡೆಯಲಿದೆ’’ ಎಂದು ಬುಧವಾರ ಪ್ರಕಟಣೆ ಹೊರಡಿಸಲಾಗಿತ್ತು.
ಇದಾದ ಅರ್ಧ ಗಂಟೆಯಲ್ಲೇ ಇನ್ನೊಂದು ಅಧಿಕೃತ ಪ್ರಕಟಣೆ ಹೊರಬಿತ್ತು. ‘‘ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲು ಕೈಗೊಳ್ಳಲಾಗಿದ್ದ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಗಿದೆ’’ ಎಂದಷ್ಟೇ ಆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​)
ಅಮೆರಿಕ ಸಂಸ್ಥೆಯ ಸಮೀಕ್ಷೆ ಹೇಳಿರುವ ವಿಷಯ ಇದು- ‘ಕೊವಿಡ್​​-19ನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ವಿಶ್ವನಾಯಕರಲ್ಲಿ ಮೋದಿಯವರಿಗೇ ಅಗ್ರಸ್ಥಾನ’; ಟ್ರಂಪ್​ಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 3 =
Remember me
