ನವದೆಹಲಿ:ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ವಿರುದ್ಧ ನೇಪಾಳದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗುತ್ತಿದೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಸಹಕರಿಸಿದರು ಎಂಬ ಕಾರಣಕ್ಕಾಗಿ ಪಕ್ಷ ಮತ್ತು ದೇಶವನ್ನು ಚೀನಾಕ್ಕೆ ಒತ್ತೆ ಇಡುವಂಥ ಕೆಲಸಗಳನ್ನು ಮಾಡಿರುವುದು ಇದಕ್ಕೆ ಕಾರಣ.
ಸೋಮವಾರ ನಿಗದಿಯಾಗಿದ್ದ ನೇಪಾಳ ಕಮ್ಯುನಿಸ್ಟ್​ ಪಕ್ಷದ ಸ್ಥಾಯಿ ಸಮಿತಿ ಸಭೆಯಲ್ಲಿ ಕೆ.ಪಿ. ಶರ್ಮ ಓಲಿ ಪಾಲ್ಗೊಂಡಿದ್ದರು. ಆದರೆ, ಪಕ್ಷದ ಉಪಾಧ್ಯಕ್ಷ ಪುಷ್ಪಾ ಕಮಲ್​ ದಹಾಲ್​ ಮತ್ತಿತರ ಹಿರಿಯ ಮುಖಂಡರು ತಕ್ಷಣವೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಓಲಿ ಅವರನ್ನು ಆಗ್ರಹಿಸಿದರು.
ಇದನ್ನೂ ಓದಿ:ಚೀನಾ ವಸ್ತುಗಳ ಆಮದು ಪ್ರಮಾಣ ಹೆಚ್ಚಿದ್ದೇ ಎನ್​ಡಿಎ ಸರ್ಕಾರದ ಅವಧಿಯಲ್ಲಿ: ರಾಹುಲ್​ ಗಾಂಧಿ
ದೇಶದಲ್ಲಿನ ನಾನಾ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಲು ವಿಫಲರಾಗಿರುವ ಕಾರಣವನ್ನು ನೀಡಿದ್ದಲ್ಲದೆ, ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಭಾರತದೆಡೆಗೆ ಬೊಟ್ಟು ಮಾಡುತ್ತಿರುವ ಕಾರಣ ನೀಡಿ ರಾಜೀನಾಮೆ ನೀಡುವಂತೆ ಅವರನ್ನು ಒತ್ತಾಯಿಸಿದರು.
ಆದರೆ ತಮ್ಮೆಲ್ಲ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳಲು ಮತ್ತೊಮ್ಮೆ ಪ್ರಯತ್ನಿಸಿದ ಕೆ.ಪಿ. ಶರ್ಮ ಓಲಿ, ತಮ್ಮ ರಾಜೀನಾಮೆಗೆ ಒತ್ತಡ ಹೆಚ್ಚಾಗಲು ಭಾರತ ಕಾರಣ ಎಂದು ಮತ್ತೊಮ್ಮೆ ಆರೋಪಿಸಿದರು. ಆದರೆ, ಭಾರತದ ಮಾತ್ರ ಇದು ನೇಪಾಳದ ಆಂತರಿಕ ವಿಷಯ. ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಈಗಾಗಲೆ ಸ್ಪಷ್ಟಪಡಿಸಿದೆ.
ತರಕಾರಿ ಮಾರುತ್ತಿದ್ದ ಅಥ್ಲೀಟ್​ ನೆರವಿಗೆ ಧಾವಿಸಿದ ಮುಖ್ಯಮಂತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
