ನವದೆಹಲಿ:12 ವರ್ಷ ಮೇಲ್ಪಟ್ಟವರಿಗೆ ನೀಡಲು ತುರ್ತು ಬಳಕೆ ಅನುಮೋದನೆ ಪಡೆದಿರುವ ಜೈಡಸ್​ ಕ್ಯಾಡಿಲಾದ ಜೈಕೋವಿ-ಡಿ ಕರೊನಾ ಲಸಿಕೆಯ ಬೆಲೆ ನಿಗದಿ ಕುರಿತಾಗಿ ಕಂಪೆನಿ ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ. ತನ್ನ ಮೂರು ಡೋಸ್​ ಲಸಿಕೆಗೆ 1,900 ರೂ. ಬೆಲೆ ನಿಗದಿ ಮಾಡುವ ಪ್ರಸ್ತಾವನೆಯನ್ನು ಕ್ಯಾಡಿಲಾ ಕಂಪೆನಿ ಸರ್ಕಾರದ ಮುಂದಿರಿಸಿದೆ ಎನ್ನಲಾಗಿದೆ.
ಜಗತ್ತಿನ ಮೊದಲ ಡಿಎನ್​ಎ ಆಧಾರಿತ ಕರೊನಾ ಲಸಿಕೆಯಾದ ಜೈಕೋವಿ-ಡಿಯನ್ನು ಸದ್ಯದಲ್ಲೇ ಲಸಿಕಾ ಅಭಿಯಾನದಲ್ಲಿ ಬಳಸಲು ಆರಂಭಿಸಲಾಗುವುದು ಎಂದು ಕಳೆದ ದಿನಗಳಲ್ಲಿ ಸರ್ಕಾರ ಹೇಳಿಕೆ ನೀಡಿತ್ತು. ಈ ಲಸಿಕೆಯ ಬೆಲೆಯ ಬಗ್ಗೆ ಅದಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದ್ದು, ಈ ವಾರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ಮಹಿಳೆಯ ಜೀವ ತೆಗೆದ ಶಾಸಕ ಕುಮಾರಸ್ವಾಮಿ ಕಾರು- ಸಿಸಿಟಿವಿಯಲ್ಲಿ ಬಯಲಾಯ್ತು ಅಸಲಿಯತ್ತು!
ಜೈಕೋವಿ-ಡಿ ಲಸಿಕೆಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್​ಗಿಂತ ಭಿನ್ನವಾಗಿ ಬೆಲೆ ನಿಗದಿಯಾಗಲಿದೆ. ಏಕೆಂದರೆ ಅದನ್ನು ಸೂಜಿರಹಿತ ಇಂಜೆಕ್ಟರ್​ನಿಂದ ಮೂರು ಡೋಸ್​ಗಳಲ್ಲಿ ನೀಡಲಾಗುವುದು. ಒಂದು ಇಂಜೆಕ್ಟರ್​ನಿಂದ 20,000 ಡೋಸ್​ಗಳನ್ನು ಕೊಡಬಹುದಾಗಿದ್ದು, ಇಂಜೆಕ್ಟರ್​ನ ಬೆಲೆಯೇ 30,000 ರೂ.ಗಳಾಗಿದೆ ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)
ಈ ತಿಂಗಳಲ್ಲೇ ಮಕ್ಕಳಿಗೂ ಕರೊನಾ ಲಸಿಕೆ: ಆರೋಗ್ಯ ಸಚಿವ ಸುಧಾಕರ್

ಅಕ್ಕಿನೇನಿ ಕುಟುಂಬ ನೀಡಲು ಮುಂದಾದ ಜೀವನಾಂಶ ಎಷ್ಟು ಗೊತ್ತಾ?! ಏನೆಂದರು ಸಮಂತಾ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen − 7 =
Remember me
