ನವದೆಹಲಿ: 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮದ ಕುರಿತು ವ್ಯಂಗ್ಯವಾಡಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸಂಸತ್​ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.
ದೆಹಲಿಯ ತುಘಲಕ್​ ಲೇನ್​ನಲ್ಲಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿರುವ ರಾಹುಲ್​ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸಕ್ಕೆ ಶಿಫ್ಟ್​ ಆಗಿದ್ದಾರೆ.
ಕಳೆದ 18 ವರ್ಷಗಳಿಂದ ಈ ಬಂಗಲೆಯಲ್ಲಿ ವಾಸಿಸಲು ದೇಶದ ಜನತೆ ನನಗೆ ಅವಕಾಶ ನೀಡಿದ್ದಾರೆ. ನಾನು ಅವರಿಗೆ ಅಭಾರಿಯಾಗಿರುತ್ತೇನೆ. ನಾನು ಸತ್ಯವನ್ನು ಮಾತನಾಡಲು ಯಾವುದೇ ರೀತಿಯ ಬೆಲೆ ತೆರಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
सच्चाई बोलने की कीमत है आज कल!वो जो भी कीमत होगी, मैं चुकाता जाऊंगा।pic.twitter.com/1ZN6rbGFIu
ಇದನ್ನೂ ಓದಿ:ಕೊನೆಗೂ ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ; ಸಂಸದ ಸ್ಥಾನದಿಂದ ಅನರ್ಹಗೊಂಡ ತಿಂಗಳ ಬಳಿಕ ತೆರವು
ನನ್ನ ಸಹೋದರ ಮಾತನಾಡಿರುವುದು ನಿಜ. ಯಾವ ಸರ್ಕಾರದಿಂದ ಜನರು ನರಳುತ್ತಿದ್ಧಾರೋ ಅದರ ವಿರುದ್ಧ ಧ್ವನಿ ಎತ್ತಿದ್ದಾರೆ ನಾವು ಯಾವುದ್ದಕ್ಕೂ ಹೆದರುವುದಿಲ್ಲ ಎಂದು ಕಾಂಗ್ರೆಸ್​ ಪ್ರದಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದ್ಧಾರೆ.
#WATCH| "Whatever my brother is saying is truth. He spoke truth about the govt for which he is suffering. But we are not afraid..," says Congress leader Priyanka Gandhi Vadra as Rahul Gandhi finally vacates his official residence after disqualificationpic.twitter.com/ZcRbuTm5eT
ಈಗ ಈ ಮನೆಯನ್ನು ಅವರು ಯಾರಿಗೆ ಬೇಕಾದರೂ ನೀಡಬಹುದು. ರಾಹುಲ್​ ಗಾಂಧಿ ವಿರುದ್ಧ ಮೋದಿ ಹಾಗೂ ಅಮಿತ್​ ಷಾ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಮುಮದಿನ ದಿನಗಳಲ್ಲಿ ಜನತೆ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ಹೇಳಿದ್ದಾರೆ.
#WATCH| Delhi: They can give this house to anyone now. The way the Modi government & Amit Shah is targeting Rahul Gandhi is completely a political vendetta: AICC General Secretary KC Venugopal on Congress leader Rahul Gandhi vacates his official bungalow at Tughlak Lanepic.twitter.com/ZAFBv842vs
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 8 =
Remember me
