ನವದೆಹಲಿ:ಮುಂದಿನ ತಿಂಗಳ ಮೊದಲ ದಿನದಿಂದಲೇ ಅನ್ವಯವಾಗುವಂತೆ ದ್ವಿಚಕ್ರ ವಾಹನ, ಕಾರು ಮತ್ತು ಟ್ರಾ್ಯಕ್ಟರ್​ಗಳ ಬೆಲೆ ಏರಿಕೆ ಮಾಡಲು ಕಂಪನಿಗಳು ತೀರ್ಮಾನ ಮಾಡಿಕೊಂಡಿವೆ. ಈ ವರ್ಷ ಇದು ಎರಡನೇ ಬೆಲೆ ಏರಿಕೆ ಕ್ರಮವಾಗಿದೆ. ಇದಕ್ಕೂ ಮುನ್ನ ಜನವರಿಯಲ್ಲಿ ಕಚ್ಚಾವಸ್ತುಗಳ ಮತ್ತು ಲೋಹಗಳ ಬೆಲೆ ಹೆಚ್ಚಳದ ಕಾರಣ ಉತ್ಪಾದನಾ ವೆಚ್ಚ ಹೆಚ್ಚಿದೆ ಎಂದು ಕಂಪನಿಗಳು ವಾಹನಗಳ ಬೆಲೆ ಏರಿಕೆ ಮಾಡಿದ್ದವು. ಈ ಅವಧಿಯಲ್ಲಿ ಕಚ್ಚಾ ವಸ್ತುಗಳ ಪೂರೈಕೆಯೂ ಕಡಿಮೆ ಇತ್ತು.
ದೇಶದ ಮುಂಚೂಣಿ ವಾಹನ ಉತ್ಪಾದಕ ಕಂಪನಿ ಮಾರುತಿ ಸುಜುಕಿ ತನ್ನ ಎಲ್ಲ ಮಾದರಿ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ. ಕಳೆದ ವರ್ಷ ಅನಿರೀಕ್ಷಿತವಾಗಿ ಉತ್ಪಾದನಾ ವೆಚ್ಚ ಹೆಚ್ಚಿದ ಕಾರಣ ಕಂಪನಿಗೆ ಬಹಳ ನಷ್ಟ ಉಂಟಾಗಿತ್ತು. ಆ ನಷ್ಟ ಭರ್ತಿ ಮಾಡಿಕೊಳ್ಳಲು ಈಗ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಇತರೆ ಕಾರು ಉತ್ಪಾದಕ ಕಂಪನಿಗಳೂ ಇದೇ ಹಾದಿ ಅನುಸರಿಸಲು ನಿರ್ಧರಿಸಿವೆ. ನಿಸ್ಸಾನ್ ಮತ್ತು ಡಾಟ್ಸನ್ ಬ್ರಾ್ಯಂಡ್​ನ ವಾಹನಗಳ ಬೆಲೆಯೂ ಏರಿಕೆಯಾಗಲಿದೆ.
ಮುಂಚೂಣಿಯ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಹೀರೋ ಮೋಟೋಕಾರ್ಪ್ ಕೂಡ ಏಪ್ರಿಲ್ 1ರಿಂದ ತನ್ನ ಎಲ್ಲ ಮಾದರಿಯ ದ್ವಿಚಕ್ರವಾಹನಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ. ಆದಾಗ್ಯೂ, ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳುವುದಾಗಿ ಅದು ಹೇಳಿಕೊಂಡಿದೆ. ಇದೇ ರೀತಿ, ರಾಯಲ್ ಎನ್​ಫೀಲ್ಡ್ ಕಂಪನಿ ಹೊಸ ಮಾದರಿಯ ಇಂಟರ್​ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650 ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳ ಬೆಲೆಯಲ್ಲೂ ಶೇಕಡ 2 ಏರಿಕೆಯಾಗಲಿದೆ.
ಟ್ರಾ್ಯಕ್ಟರ್ ಬೆಲೆ ಹೆಚ್ಚಳ:ಕೃಷಿ ಉಪಕರಣಗಳ ಉತ್ಪಾದಕ ಕ್ಷೇತ್ರದಲ್ಲಿ ಮುಂಚೂಣಿ ಕಂಪನಿ ಎಸ್ಕಾರ್ಟ್ಸ್ ಅಗ್ರಿ ಮಷಿನರಿ (ಇಎಎಂ) ಮುಂದಿನ ತಿಂಗಳಿಂದ ಟ್ರಾ್ಯಕ್ಟರ್​ಗಳ ಬೆಲೆಯಲ್ಲಿ ಏರಿಕೆ ಮಾಡುತ್ತಿರುವುದಾಗಿ ಘೋಷಿಸಿದೆ. ಹಣದುಬ್ಬರದ ಪರಿಣಾಮ ಕಚ್ಚಾ ವಸ್ತುಗಳ ಬೆಲೆ ಏರಿದೆ. ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಕಾರಣ ಮಾರಾಟ ದರ ಹೆಚ್ಚಳ ಅನಿವಾರ್ಯ ಎಂದು ಇಎಎಂ ಹೇಳಿದೆ.
PHOTO | ಪುಣೆಯಲ್ಲಿ ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸಲು ಬೆಟ್ಟ ಏರಿದ ಕ್ರಿಕೆಟ್ ಪ್ರೇಮಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + sixteen =
Remember me
