ಬೆಂಗಳೂರು:ನಿಮ್ಮ ಮನೆಯಲ್ಲಿ ಏನ್​ ಸಾಂಬಾರ್​ ಎಂದು ಕೇಳಿದರೆ ಬಹುತೇಕರು ಬೇಳೆ ಸಾಂಬಾರ್​ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ, ಇನ್ನು ಮುಂದೆ ಈ ಮಾತು ಕೇಳುವುದು ತುಂಬಾ ವಿರಳವಾಗಬಹುದು. ಏಕೆಂದರೆ, ಮಾರುಕಟ್ಟೆಯಲ್ಲಿ ತೊಗರಿ ಬೇಳೆಯ ಬೆಲೆ ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸುವಂತಿದೆ. ಕಳೆದ ಆರು ತಿಂಗಳಲ್ಲಿ ಬರೋಬ್ಬರಿ ಮೂರು ಬಾರಿ ಬೆಲೆ ಏರಿಕೆಯಾಗಿದೆ.
ಕಳೆದ ಅಕ್ಟೋಬರ್​ ತಿಂಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಕೆಜಿಗೆ 120 ರೂ.ನಿಂದ 160 ರೂ.ವರೆಗೂ ಮಾರಾಟವಾಗುತ್ತಿದ್ದ ತೊಗರಿ ಬೇಳೆ ಇದೀಗ 160 ರೂ.ನಿಂದ 210 ರೂ.ಗೆ ಏರಿಕೆಯಾಗಿದೆ. ಅನಿಯಮಿತ ಮಳೆ ಮತ್ತು ಮಣ್ಣಿನ ತೇವಾಂಶದ ಸವಕಳಿಯಿಂದ ಉತ್ಪಾದನೆಯ ಮೇಲೆ ಪರಿಣಾಮ ಬೀರಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ರಾಜ್ಯದ ಕಲಬುರಗಿ, ವಿಜಯಪುರ, ಬೀದರ್​, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಮುಖವಾಗಿ ತೊಗರಿ ಬೇಳೆಯನ್ನು ಬೆಳೆಯಲಾಗುತ್ತಿದೆ. ತೊಗರಿಯು ರಾಬಿ ಸೀಸನ್​ ಬೆಳೆ ಆಗಿದ್ದು, ಚಳಿಗಾಲದಲ್ಲಿ ಅಕಾಲಿಕ ಮಳೆಯು ಕೊಯ್ಲಿನ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಶೇ.50ರಷ್ಟು ಬೆಳೆ ನಷ್ಟವಾಗಿದೆ ಎನ್ನುತ್ತಾರೆ ರೈತರು. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತೊಗರಿ ಬೆಳೆಗಾರ ಭಾಸ್ಕರ್‌ರಾವ್‌ ಮಾತನಾಡಿ, ಮೊದಲು ಮಳೆ ಬಾರದೆ ಹೂ ಬಿಡುವುದು ನಿಧಾನವಾಗಿತ್ತು. ಬಳಿಕ ಅತಿವೃಷ್ಟಿಯಾಗಿ ಸಣ್ಣಪುಟ್ಟ ಹೂವಿನ ಗಿಡಗಳಿಗೆ ಹಾನಿಯಾಗಿ ಶೇ.50ರಷ್ಟು ಬೆಳೆ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಇನ್ನು ಜನವರಿಯ ಹೊಸ ವರ್ಷದ ವೇಳೆಗೆ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಆರ್ಗೋ ಅರ್ಥಶಾಸ್ತ್ರಜ್ಞ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ಬರ, ಬೆಳೆ ರೋಗಗಳು ಮತ್ತು ಅತಿವೃಷ್ಟಿಯಂತಹ ಅಂಶಗಳು ಒಟ್ಟಾರೆಯಾಗಿ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗಿವೆ. ತೊಗರಿ ಬೇಳೆ ನಿರಂತರವಾಗಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಇದರ ಜೊತೆಗೆ ಮಧ್ಯವರ್ತಿಗಳ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ್ದು, ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಲು ಸರ್ಕಾರದ ಅಸಮರ್ಥತೆ ಎದ್ದು ಕಾಣುತ್ತಿರುವುದು ಬೆಲೆಯ ಏರಿಕೆಗೆ ಕಾರಣ ಎಂದು ಹೇಳಿದ್ದಾರೆ.
ಕಲಬುರಗಿಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಮಣ್ಣೂರ ಡಿಎಂ ಮಾತನಾಡಿ, ಸಾಕಷ್ಟು ಮಳೆ ಇಲ್ಲದ ಪರಿಣಾಮ ವಾಡಿಕೆಗಿಂತ ಈ ಬಾರಿ ತೊಗರಿ ಬೇಳೆ ಉತ್ಪಾದನೆ ಕಡಿಮೆಯಾಗಿದೆ. ಪ್ರತಿ ಕ್ವಿಂಟಾಲ್‌ಗೆ 5,000 ರೂಪಾಯಿಗೆ ಸಂಗ್ರಹಿಸಲಾಗಿದ್ದ ಸ್ಟಾಕ್​ ಈಗ 12,000 ರೂ.ಗೆ ಮಾರಾಟವಾಗುತ್ತಿದ್ದು, ಜನವರಿ ಅಂತ್ಯದ ವೇಳೆಗೆ 15,000 ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಬರ ಸ್ನೇಹಿ ಎಂದು ಪರಿಗಣಿಸಲಾದ ತೊಗರಿ ಬೇಳೆ, ನಿರಂತರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಹೂಬಿಡುವ ಹಂತದಲ್ಲಿ ಗಮನಾರ್ಹ ನಷ್ಟ ಉಂಟುಮಾಡುತ್ತದೆ ಎಂದು ಮಣ್ಣೂರ ಡಿಎಂ ವಿವರಿಸಿದರು.
ತೊಗರಿ ಬೆಳೆಯಲು ರೈತರು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳಿಂದಾಗಿ, ಹತ್ತಿ, ಹಸಿ ಕಡಲೆ ಮತ್ತು ಜೋಳದಂತಹ ಪರ್ಯಾಯ ಬೆಳೆಗಳತ್ತ ಮುಖ ಮಾಡುತ್ತಿದ್ದು, ತೊಗರಿ ಬೇಳೆ ಪೂರೈಕೆ ಕೊರತೆ ಇನ್ನಷ್ಟು ಉಲ್ಬಣಗೊಂಡಿದೆ. ಜನವರಿ ವೇಳೆಗೆ 250 ರೂ. ತಲುಪಿದರು ಅಚ್ಚರಿ ಪಡಬೇಕಾಗಿಲ್ಲ ಎಂದು ಮಣ್ಣೂರ ಡಿಎಂ ಹೇಳಿದರು.(ಏಜೆನ್ಸೀಸ್​)
ಕೆಜಿಗೆ 400 ರೂ. ಮುಟ್ಟಿದ ಬೆಳ್ಳುಳ್ಳಿ! ಒಗ್ಗರಣೆ ಬಲು ದುಬಾರಿ, ಸದ್ಯಕ್ಕಿಲ್ಲ ದರ ಇಳಿಕೆ, ಕಾರಣ ಹೀಗಿದೆ…

ಇದೇ 18ರಂದು ಹೈದರಾಬಾದ್‌ಗೆ ಎರಡನೇ ಬಾರಿಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

ಆಗಂತುಕರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಅಡಿ ಕೇಸು ದಾಖಲು: ಇಂದು ಕೋರ್ಟ್​ಗೆ ಹಾಜರು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nine + 15 =
Remember me
