ಪಟ್ನ :ಇಬ್ಬರು ಪೂಜಾರಿಗಳ ತಲೆ ತೆಗೆದ ಮೃತ ದೇಹಗಳು ಇಂದು ಬಿಹಾರದ ಮಧುಬಾನಿ ಜಿಲ್ಲೆಯ ಧರೋಹರ ಮಹಾದೇವ ದೇವಸ್ಥಾನದಲ್ಲಿ ಸಿಕ್ಕಿದೆ. ಈ ಕೃತ್ಯ ಎಸಗಿರುವ ದುಷ್ಕರ್ಮಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದು, ಅಪರಾಧದ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.
ಮೃತರನ್ನು ಮಧುಬಾನಿ ಜಿಲ್ಲೆಯ ಸಿರಿಯಾಪುರದ ನಿವಾಸಿ ಹೀರಾನಂದ್​ ದಾಸ್ (65 ವರ್ಷ) ಮತ್ತು ಭಗವಾನ್​ಪುರದ ಆನಂದ್​ ಮಿಶ್ರ (45 ವರ್ಷ) ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಚೂಪಾದ ವಸ್ತುವಿನಿಂದ ಸಾಯಿಸಿದ್ದು, ಅವರ ತಲೆಗಳನ್ನು ದೇಹಗಳಿಂದ ಬೇರ್ಪಡಿಸಲಾಗಿತ್ತು ಎಂದು ಪ್ರಕರಣ ದಾಖಲಿಸಿರುವ ಖಿರ್​ಹರ್​ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಅಂಜೇಶ್ ಕುಮಾರ್ ತಿಳಿಸಿದ್ದಾರೆ.
ಈ ಬರ್ಬರ ಹತ್ಯೆಗಳು ನಿನ್ನೆ ರಾತ್ರಿ ನಡೆದಿದೆ ಎನ್ನಲಾಗಿದ್ದು, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ವಿವಿಧ ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ವಿರಾಟ್​ ಕೊಹ್ಲಿ ಬಗ್ಗೆ ಅವರ ಶಾಲೆ ಬರೆದ ಪತ್ರ ಆಗುತ್ತಿದೆ ವೈರಲ್ !

ಆಕ್ಸಿಜನ್ ಕೊರತೆ ನೀಗಿಸಲು ಟಾಟಾ ಸಹಾಯ ಹಸ್ತ ! 24 ಕ್ರಯೋಜೆನಿಕ್ ಕಂಟೇನರ್​ಗಳ ಆಮದು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − three =
Remember me
