ಶಿಮ್ಲಾ:ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಗುರುವಾರ ಚಾಲನೆ ನೀಡಿದರು. ಹಿಮಾಚಲ ಪ್ರದೇಶದ ಅಂಬ್ ಅಂಡೌರಾ ಮತ್ತು ನವದೆಹಲಿ ನಡುವೆ ಈ ರೈಲು ಸಂಚರಿಸಲಿದೆ. ಇದರಿಂದ ಚಂಡೀಗಢ-ದೆಹಲಿ ಮಾರ್ಗದ ಪ್ರಯಾಣದಲ್ಲಿ 3 ತಾಸು ಕಡಿಮೆಯಾಗಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳ ಕಾಲ ಸಂಚರಿಸುವ ಈ ರೈಲು ಅಂಬಾಲಾ, ಚಂಡೀಗಢ, ಆನಂದ್​ಪುರ, ಸಾಹಿಬ್ ಮತ್ತು ಉನಾದಲ್ಲಿ ನಿಲುಗಡೆ ನೀಡುತ್ತದೆ.
ಕೇವಲ 52 ಸೆಕೆಂಡ್​ಗಳಲ್ಲಿ ಗಂಟೆಗೆ 100 ಕಿ.ಮೀ. ವೇಗಕ್ಕೆ ತಲುಪಬಹುದು. ಉನಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ರೈಲಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ‘ಶೇರ್ ಆಯಾ ಶೇರ್ ಆಯಾ’ ಘೋಷಣೆಯೊಂದಿಗೆ ಸ್ವಾಗತಿಸಲಾಯಿತು.
ವಂದೇ ಭಾರತ್ ಎಕ್ಸ್​ಪ್ರೆಸ್​ನ ಸರಕು ಸಾಗಣೆ ರೈಲು ಡಿಸೆಂಬರ್ ವೇಳೆ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಮೊದಲ ಸರಕು ಸಾಗಣೆ ರೈಲು ದೆಹಲಿ-ಎನ್​ಸಿಆರ್ ಮತ್ತು ಮುಂಬಯಿ ಪ್ರದೇಶದ ನಡುವೆ ಸಂಚರಿಸಲಿದೆ. ಸರಕು ಇಯುಎಂ ಎಂದು ಕರೆಯಲ್ಪಡುವ ಈ ರೈಲುಗಳು ಸೂಪರ್​ಫಾಸ್ಟ್ ಪಾರ್ಸೆಲ್ ಸೇವೆ ನೀಡಲಿದೆ. ವಂದೇ ಭಾರತ್ ಸರಕು ಸಾಗಣೆ ರೈಲುಗಳನ್ನು ಪ್ಯಾಲಟೈಸ್ ಕಂಟೈನರ್ ಸಾರಿಗೆಗಾಗಿ 160 ಕಿಮೀ/ಗಂಟೆ ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಉನಾ ಜಿಲ್ಲೆಯ ಹರೋಲಿಯಲ್ಲಿ 1,900 ಕೋಟಿ ರೂ. ಗೂ ಹೆಚ್ಚು ಮೊತ್ತದ ಬಲ್ಕ್ ಡ್ರಗ್ ಪಾರ್ಕ್​ಗೆ ಪ್ರಧಾನಿ ಶಂಕು ಸ್ಥಾಪನೆ ನೆರವೇರಿಸಿದರು. ಈ ಪಾರ್ಕ್ ನಿರ್ವಣದಿಂದ 20 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಇದೇ ವೇಳೆ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಇನ್ಪಾಮೇಶನ್ ಟೆಕ್ನಾಲಜಿ (ಐಐಐಟ)-ಉನಾ ಸೇರಿದಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
20ನೇ ಶತಮಾನದಲ್ಲಿ ಪ್ರಪಂಚದ ಬೇರೆಡೆ ಲಭ್ಯವಿದ್ದ ಸೌಲಭ್ಯಗಳನ್ನು ಹಿಂದಿನ ಸರ್ಕಾರಗಳು ಜನರಿಗೆ ಒದಗಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಉನಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾವು ನಿಮಗೆ 20, 21ನೇ ಶತಮಾನದ ಸೌಲಭ್ಯ ಒದಗಿಸುತ್ತೇವೆ. ದೇವಭೂಮಿ ಹಿಮಾಚಲಕ್ಕೆ ಪ್ರಕೃತಿಯ ಕೃಪೆ ಇದೆ. ಆದರೆ ಹಿಂದಿನ ಸರ್ಕಾರಗಳು ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದ್ದವು ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದು ಚುನಾವಣಾ ಗಿಮಿಕ್. ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್​ನ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − three =
Remember me
