ಅಹಮದಾಬಾದ್:ಗುಜರಾತ್ ವಿಧಾನಸಭೆಗೆ ಡಿ.5ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರವೂ ರಾಜ್ಯದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿ, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಗುಜರಾತ್​ನ ಆನಂದ್ ಜಿಲ್ಲೆಯ ಸೋಜಿತ್ರಾ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರೊಂದಿಗೆ ಕೆಲಸ ಮಾಡಿದ ಕಾಂಗ್ರೆಸ್ ಗುಲಾಮ ಮನಸ್ಥಿತಿಯನ್ನು ಅಳವಡಿಸಿಕೊಂಡಿದೆ. ಹಾಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ತಮ್ಮವರೆಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್​ಗೆ ಸರ್ದಾರ್ ಪಟೇಲ್ ಮಾತ್ರವಲ್ಲ, ಭಾರತದ ಏಕತೆ ಯೊಂದಿಗೂ ಸಮಸ್ಯೆ ಇದೆ. ಏಕೆಂದರೆ ಅವರ ರಾಜಕೀಯವು ಒಡೆದು ಆಳುವ ನೀತಿಯನ್ನು ಆಧರಿಸಿದೆ. ಆದರೆ ಪಟೇಲ್ ಎಲ್ಲರ ಒಗ್ಗೂಡುವಿಕೆಯಲ್ಲಿ ನಂಬಿಕೆ ಇಟ್ಟಿದ್ದರು. ಈ ಕಟುವಾದ ವ್ಯತ್ಯಾಸದಿಂದಾಗಿ ಕಾಂಗ್ರೆಸ್ ಇಂದಿಗೂ ಪಟೇಲ್ ಅವರನ್ನು ತಮ್ಮವರೆಂದು ಪರಿಗಣಿಸಲಿಲ್ಲ ಎಂದು ಟೀಕಿಸಿದರು.
ನರ್ಮದಾ ಜಿಲ್ಲೆಯಲ್ಲಿರುವ ಏಕತಾ ಪ್ರತಿಮೆ ಮತ್ತು ಪಟೇಲ್ ಸ್ಮಾರಕಕ್ಕೆ ಭೇಟಿ ನೀಡುವುದನ್ನು ವಿರೋಧ ಪಕ್ಷದ ನಾಯಕರು ತಪ್ಪಿಸಿಕೊಳ್ಳುತ್ತಿದ್ದಾರೆ. ಮೋದಿ ಪ್ರತಿಮೆ ನಿರ್ವಿುಸಿದ ಮಾತ್ರಕ್ಕೆ ಪಟೇಲ್ ನಿಮಗೆ ಅಸ್ಪಶ್ಯರಾದರೆ? ಸರ್ದಾರ್ ಪಟೇಲ್ ಅವರನ್ನು ಅವಮಾನಿಸಿದ ಕಾಂಗ್ರೆಸ್​ಗೆ ಆನಂದ್ ಜಿಲ್ಲೆಯ ಜನರು ಶಿಕ್ಷೆ ನೀಡುತ್ತಾರೆ ಎಂಬುದು ನನಗೆ ಖಾತ್ರಿಯಿದೆ ಎಂದು ಹೇಳಿದರು.
ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ:ಉತ್ತರ ಗುಜರಾತ್​ನ ಪಟಾಣ್ ಪಟ್ಟಣದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕಛ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್​ನಲ್ಲಿ ಗುರುವಾರ ಮತದಾನ ನಡೆದ ನಂತರ ಕಾಂಗ್ರೆಸ್ ಇವಿಎಂಗಳನ್ನು ದೂಷಿಸಲು ಪ್ರಾರಂಭಿಸಿದೆ. ಇದನ್ನು ನೋಡಿದರೆ ವಿರೋಧ ಪಕ್ಷವು ತನ್ನ ಸೋಲನ್ನು ಹಾಗೂ ಬಿಜೆಪಿ ಗೆಲುವನ್ನು ಒಪ್ಪಿಕೊಂಡಿರುವ ಸೂಚನೆಯಾಗಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಕಡಿಮೆ ಮತದಾನ:ಗುಜರಾತ್​ನಲ್ಲಿ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆಯ ಮೊದಲ ಹಂತದಲ್ಲಿ ಕಡಿಮೆ ಮತದಾನವಾಗಿದ್ದು, ಶೇ.63.14ರಷ್ಟು ಪ್ರಮಾಣ ದಾಖಲಾಗಿದೆ. 2017ರ ಚುನಾವಣೆಯಲ್ಲಿ ಇದೇ 89 ಕ್ಷೇತ್ರಗಳಿಗೆ ನಡೆದ ಮೊದಲ ಹಂತದಲ್ಲಿ ಶೇ.66.75ರಷ್ಟು ಮತದಾನವಾಗಿತ್ತು. ಎರಡೂ ಹಂತದ ಮತದಾನದ ಪ್ರಮಾಣವು ಶೇ. 68.41ರಷ್ಟಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.
ಮೆಗಾ ರೋಡ್ ಷೋ:ಗುಜರಾತ್​ನಲ್ಲಿ ಆಡಳಿತಾರೂಢ ಬಿಜೆಪಿ ಪರವಾಗಿ ಮತದಾರರನ್ನು ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರವೂ ಅಮಹದಾಬಾದ್​ನಲ್ಲಿ ಮೆಗಾ ರೋಡ್ ಷೋ ನಡೆಸಿದರು. 10 ಕಿ.ಮೀ ರೋಡ್ ಷೋನಲ್ಲಿ ಮೋದಿ ಅವರನ್ನು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅಹಮದಾಬಾದ್​ನ ಮಾ ಭದ್ರಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
10 ಲಕ್ಷಕ್ಕೂ ಹೆಚ್ಚು ಜನ ಭಾಗಿ:ಗುಜರಾತ್​ನ ಅಹಮದಾಬಾದ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ನಡೆಸಿದ ಮೆಗಾ ರೋಡ್ ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎಂದು ಅಂದಾಜು ಮಾಡಲಾಗಿದೆ. ಸುಮಾರು 50 ಕಿ.ಮೀ ದೂರದವರೆಗೆ 14 ವಿಧಾನಸಭಾ ಕ್ಷೇತ್ರಗಳನ್ನು ಕ್ರಮಿಸಿದ್ದರು.
ಯಾವ ‘ಕೈ ’ ಕಾರಣ:ಕೇಂದ್ರ ಕಳುಹಿಸುವ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಬಡವರಿಗೆ ತಲುಪುತ್ತದೆ ಎಂದು ಕಾಂಗ್ರೆಸ್​ನ ಮಾಜಿ ಪ್ರಧಾನಿ ಹೇಳುತ್ತಿದ್ದರು’ ಎಂದು ದಿವಂಗತ ಪ್ರಧಾನಿ ರಾಜೀವ್​ಗಾಂಧಿಯವರ ಪ್ರಸಿದ್ಧ ಮಾತನ್ನು ಮೋದಿ ಉಲ್ಲೇಖಿಸಿದರು. ಆ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿತ್ತು. ಬಿಜೆಪಿ ಇರಲಿಲ್ಲ. ಹಾಗಿದ್ದಾಗ ಉಳಿದ 85 ಪೈಸೆ ಹರಿದಾಡಲು ಯಾವ ‘ಕೈ’ ಕಾರಣ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದರು.
ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..

ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
