ಚೆನ್ನೈ:ಎರಡು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ನಡೆದ ಆತಂಕವಾದಿಗಳ ಆಕ್ರಮಣವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೂಯಿಸೈಡ್ ಬಾಂಬಿಂಗ್​ನಿಂದಾಗಿ ಪ್ರಾಣ ಕಳೆದುಕೊಂಡ 40 ಯೋಧರಿಗೆ ಪ್ರಧಾನಿ ಗೌರವ ಸಲ್ಲಿಸಿದ್ದಾರೆ.
2019 ರಲ್ಲಿ ಇದೇ ದಿನ (ಫೆಬ್ರವರಿ 14), ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಆತಂಕವಾದಿ ಗುಂಪು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದ ಸಿಆರ್​ಪಿಎಫ್​ನ ಕಾನ್ವಾಯ್​ ಮೇಲೆ ಆಕ್ರಮಣ ನಡೆಸಿತ್ತು. ಒಟ್ಟು 78 ಬಸ್ಸುಗಳಲ್ಲಿ 2,500 ಸಿಆರ್​ಪಿಎಫ್​ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು. ಹೀಗೆ ಸಾಲಾಗಿ ಹೋಗುತ್ತಿದ್ದ ವಾಹನಗಳಿಗೆ ಸೂಯಿಸೈಡ್ ಬಾಂಬರ್ ಎಕ್ಸ್​ಪ್ಲೋಸೀವ್ಸ್​ ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ್ದ. ಭಾರತದ 40 ಸೈನಿಕರು ಮರಣ ಹೊಂದಿದ್ದರು.
ಇದನ್ನೂ ಓದಿ:ಮದುವೆಗು ಮುನ್ನ ಡಿಕೆಶಿ ಪುತ್ರಿ ಹಠ ಹಿಡಿದಿದ್ದೇಕೆ? ಕೊನೆಗೂ ತನ್ನ ಹಠ ಸಾಧಿಸಿದ ಐಶ್ವರ್ಯಾ!
ಈ ಆಕ್ರಮಣದ ಕೆಲವೇ ದಿನಗಳ ನಂತರ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಜೈಶ್ ಆತಂಕವಾದಿ ತರಬೇತಿ ಶಿಬಿರಗಳ ಮೇಲೆ ಏರ್​ ಸ್ಟ್ರೈಕ್ ನಡೆಸಿದ್ದವು.
ಚೆನ್ನೈನಲ್ಲಿ ಭಾನುವಾರ ಭಾರತೀಯ ಸೇನೆಯ ಚೀಫ್ ಜನರಲ್ ಎಂ.ಎಂ.ನರವಣೆ ಅವರಿಗೆ ಭಾರತದಲ್ಲೇ ಅಭಿವೃದ್ಧಿ ಪಡಿಸಿರುವ ಅರ್ಜುನ್ ಮೇನ್ ಬ್ಯಾಟಲ್ ಟ್ಯಾಂಕ್(ಮಾರ್ಕ್ 1ಎ)​ಗಳನ್ನು ಹಸ್ತಾಂತರಿಸಿದ ಪ್ರಧಾನಿ ಮೋದಿ, “ಯಾವ ಭಾರತೀಯನೂ ಈ ದಿನವನ್ನು ಮರೆಯಲಾಗುವುದಿಲ್ಲ. ಎರಡು ವರ್ಷಗಳ ಹಿಂದೆ ಪುಲ್ವಾಮ ಘಟನೆ ನಡೆಯುತು. ನಾವು ಕಳೆದುಕೊಂಡ ಎಲ್ಲ ಹುತಾತ್ಮರಿಗೆ ನಮ್ಮ ನಮನ. ನಮ್ಮ ರಕ್ಷಣಾ ಪಡೆಗಳು ಮತ್ತು ಅವರ ಶೌರ್ಯವು ಸದಾ ಪ್ರೇರಣಾದಾಯಕ” ಎಂದಿದ್ದಾರೆ.(ಏಜೆನ್ಸೀಸ್)
ರೈತ ಪ್ರತಿಭಟನೆ ಸ್ಥಳಕ್ಕೆ ಮಹಾತ್ಮ ಗಾಂಧಿ ಮೊಮ್ಮಗಳ ಭೇಟಿ
ಭಾರತಕ್ಕೆ ಮಸಿಬಳಿಯಲು ಗುಟ್ಟಾಗಿ ತಯಾರಿಸಿದ್ದ ‘ಟೂಲ್‌ಕಿಟ್‌’ ವಿವಾದ: ಗ್ರೇಟಾಳಿಂದ ಸಿಕ್ಕಿಬಿದ್ದ ದಿಶಾ ಅರೆಸ್ಟ್‌


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
