ನವದೆಹಲಿ:ತ್ವರಿತ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗು ತ್ತಿರುವ ಭಾರತದತ್ತ ಇಡೀ ಜಗತ್ತು ನೋಡುತ್ತಿದೆ. ಹೀಗಾಗಿ ಕರ್ತವ್ಯಗಳು ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು. ಈ ಅಮೃತ ಕಾಲ ನಮಗೆ ಕರ್ತವ್ಯಗಳ ಯುಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂವಿಧಾನ ದಿನದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನವು ಮುಕ್ತ, ಪ್ರಗತಿಪರ ಮತ್ತು ಭವಿಷ್ಯದ ದೃಷ್ಟಿಕೋನಗಳಿಂದಲೇ ಹೆಸರುವಾಸಿಯಾಗಿದೆ. ಗಛಿ ಠಿಜಛಿ ಟಛಿಟಟ್ಝಛಿ (ನಾವು ಜನರು) ಎಂಬ ಪದಗಳು ಕೇವಲ ಮೂರು ಪದಗಳಲ್ಲ. ಸಂವಿಧಾನದ ಮೂಲತತ್ವ ಮತ್ತು ಪ್ರಜಾಪ್ರಭುತ್ವವನ್ನು ಅವು ವ್ಯಾಖ್ಯಾನಿಸುತ್ತದೆ. ಹೀಗಾ ಗಿಯೇ ವಿಶ್ವದ ಎಲ್ಲಾ ಪ್ರಜಾಪ್ರಭುತ್ವಗಳ ತಾಯಿ ಭಾರತದ ಸಂವಿಧಾನ ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.
ನ್ಯಾಯಾಂಗವು ಸಕಾಲಕ್ಕೆ ನ್ಯಾಯವನ್ನು ಖಚಿತಪಡಿಸಿ ಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರು ವುದು ಶ್ಲಾಘನೀಯ. ಜನಪರ ನೀತಿಗಳು ದೇಶದ ಬಡ, ಮಹಿಳೆಯರ ಸಬಲೀಕರಣಕ್ಕೆ ನೆರವಾಗುತ್ತದೆ. ಸಾಮಾನ್ಯ ಜನರಿಗೆ ಕಾನೂನುಗಳನ್ನು ಸರಳಗೊಳಿಸಲಾಗುತ್ತಿದೆ ಎಂದರು. ಇ-ಕೋರ್ಟ್ ಯೋಜನೆ ಯಡಿಯಲ್ಲಿ ಪ್ರಾರಂಭಿ ಸಲಾದ ವಿವಿಧ ಹೊಸ ಉಪಕ್ರಮಗಳಿಗೆ ಪ್ರಧಾನಿ ಚಾಲನೆ ನೀಡಿ, ಈ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಾತನಾಡಿ, ಶಾಸಕಾಂಗ ವಿಭಾಗ 65,000 ಕಾನೂನು ಪದಗಳ ಪದಕೋಶ ಸಿದ್ಧಪಡಿಸಿದೆ. ನಾವದನ್ನು ಡಿಜಿಟೈಸ್ ಮಾಡಿ, ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಿದ್ದೇವೆ. ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾದ ಕಾನೂನು ಪದಕೋಶಗಳ ಸಂಗ್ರಹ, ಡಿಜಿಟಲೀಕರಣ ಮತ್ತು ಸುಲಭದಲ್ಲಿ ಹುಡುಕಬಹುದಾದ ರೂಪದಲ್ಲಿ ಲಭ್ಯಗೊಳಿಸಲು ಯತ್ನಿಸಲಿದ್ದೇವೆ ಎಂದರು.
ಕೋರ್ಟ್ ಜನರಿಗೆ ಹತ್ತಿರವಾಗಲಿ:ನ್ಯಾಯಾಂಗವು ಜನರನ್ನು ತಲುಪಬೇಕೆ ವಿನಾ ಜನರು ನಮ್ಮ ಬಳಿ ಬರಬೇಕು ಎಂದು ನಿರೀಕ್ಷಿಸುವುದಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ. ಚಂದ್ರಚೂಡ್ ಹೇಳಿದರು. ವೈವಿಧ್ಯ ಮಯ ದೇಶದಲ್ಲಿ ಎಲ್ಲರಿಗೂ ನ್ಯಾಯ ಲಭ್ಯವಾಗುವಂತೆ ಮಾಡುವುದೇ ನಮ್ಮೆದುರಿರುವ ಪ್ರಮುಖ ಸವಾಲಾಗಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ಪರಿಪೂರ್ಣ ವಾಗಿರಲು ಸಾಧ್ಯವಿಲ್ಲ. ಪ್ರತಿಯೊಂದು ಸಂಸ್ಥೆಗಳು ಒಂದೊಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುವುದೇ ಪ್ರಜಾತಂತ್ರದ ಸೊಬಗು ಎಂದರು.
ಸುಪ್ರೀಂಕೋರ್ಟ್ ದೆಹಲಿಯ ತಿಲಕ್ ಮಾರ್ಗ್​ನಲ್ಲಿ ನೆಲೆಗೊಂಡಿದ್ದರೂ, ಆನ್​ಲೈನ್ ವೇದಿಕೆ ಮೂಲಕ ವಕೀಲರಿಗೆ ತಾವಿದ್ದ ಸ್ಥಳದಿಂದ ವಾದ ಮಂಡನೆ ಮಾಡಲು ಸಾಧ್ಯವಾಗಿದೆ. ವಕೀಲ ವೃತ್ತಿಯಲ್ಲೂ ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳ ಪ್ರಾತಿನಿಧ್ಯ ಹೆಚ್ಚಬೇಕು. ನಮ್ಮ ನ್ಯಾಯಾಲಯಗಳಿಂದ ಹೊರ ಹೊಮ್ಮಿದ ನ್ಯಾಯಶಾಸ್ತ್ರವು ದಕ್ಷಿಣ ಆಫ್ರಿಕಾ, ಕೀನ್ಯಾ, ಆಸ್ಟ್ರೇಲಿಯಾ, ಜಮೈಕಾ, ಉಗಾಂಡಾ, ಬಾಂಗ್ಲಾದೇಶ, ಸಿಂಗಾಪುರ, ಫಿಜಿ ಸೇರಿ ಹಲವು ದೇಶಗಳ ನೀತಿ-ನಿರ್ಧಾರಗಳ ಮೇಲೆ ಪ್ರಭಾವ ಬೀರಿದೆ ಎಂದರು.
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ಗಳಿಗೆ ನ್ಯಾಯಮೂರ್ತಿಯನ್ನು ನೇಮಿಸುವ ಕೊಲಿಜಿಯಂ ಕಾರ್ಯವಿಧಾನದ ಮೇಲೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಕೊಲಿಜಿಯಂ ವ್ಯವಸ್ಥೆಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದರು.
ನ್ಯಾಯಾಲಯದ ತೀರ್ಪಿನ ಮೂಲಕ ಕೊಲಿಜಿಯಂ ವ್ಯವಸ್ಥೆ ರಚನೆಯಾಯಿತು. 1991ಕ್ಕಿಂತ ಮೊದಲು ಎಲ್ಲಾ ನ್ಯಾಯಾಧೀಶರನ್ನು ಸರ್ಕಾರ ನೇಮಕ ಮಾಡುತ್ತಿತ್ತು. ಕೇವಲ ನ್ಯಾಯಾಲಯಗಳು ಅಥವಾ ಕೆಲವು ನ್ಯಾಯಾಧೀಶರು ತೆಗೆದು ಕೊಳ್ಳುವ ನಿರ್ಧಾರವನ್ನು ಇಡೀ ದೇಶ ಬೆಂಬಲಿಸುತ್ತದೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ ಎಂದು ಪ್ರಶ್ನಿಸಿದರು. ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೊಲಿಜಿಯಂ ವ್ಯವಸ್ಥೆ ಬದಲಾವಣೆಯಾಗುವವರೆಗೆ ಹಾಲಿ ವ್ಯವಸ್ಥೆಯನ್ನು ಸರ್ಕಾರ ಗೌರವಿಸುತ್ತಲೇ ಇರುತ್ತದೆ ಆದರೆ, ಸರ್ಕಾರ ಮತ್ತು ನ್ಯಾಯಾಂಗ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಗೊಳಿಸಲು ಸಂಸತ್ತು ಸರ್ವಾನುಮತದಿಂದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆ ಅಂಗೀಕರಿಸಿತು. ಆದರೆ ಈ ಕಾನೂನನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಕೊಲಿಜಿಯಂ ಶಿಫಾರಸು ಮಾಡಿದ ಕಾರಣದಿಂದ ಅವರು ಸೂಚಿಸಿದ ನ್ಯಾಯಾಧೀಶರ ಹೆಸರಿಗೆ ಸಹಿ ಹಾಕಬೇಕು ಎಂದು ನಿರೀಕ್ಷಿಸಿದರೆ, ಆಗ ಸರ್ಕಾರದ ಪಾತ್ರವೇನಿರುತ್ತದೆ. ಕೊಲಿಜಿಯಂ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದು, ವ್ಯವಸ್ಥೆ ಪಾರದರ್ಶಕವಾಗಿಲ್ಲ ಎಂದು ಜನ ಧ್ವನಿ ಎತ್ತುತ್ತಿದ್ದಾರೆ ಎಂದು ರಿಜಿಜು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + six =
Remember me
