ತಿರುವನಂತಪುರಂ:ಕೇರಳದ ವಯನಾಡು ಜಿಲ್ಲೆಯ ಭೂಕುಸಿತದಿಂದ ಧ್ವಂಸಗೊಂಡ ಪ್ರದೇಶಗಳಿಗೆ ಶನಿವಾರ (ಆಗಸ್ಟ್​​ 10) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು 1979 ರ ಮೋರ್ಬಿ ಅಣೆಕಟ್ಟು ದುರಂತವನ್ನು ನೆನಪಿಸಿಕೊಂಡರು. ಹಾಗೂ ಕೇರಳಕ್ಕೆ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ. ಹಾಗೂ ಹಣದ ಕೊರತೆಯಿಂದ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನು ಓದಿ:ನಾಲ್ವರು ಉಗ್ರರ ಸ್ಕೆಚ್​​​ ಬಿಡುಗಡೆ ಮಾಡಿದ ಕಥುವಾ ಪೊಲೀಸರು; ಸುಳಿವು ನೀಡಿದವರಿಗೆ ಸಿಗುತ್ತೆ ಭಾರೀ ಬಹುಮಾನ
ವಯನಾಡಿಗೆ ಒಂದು ದಿನದ ಭೇಟಿಯಲ್ಲಿದ್ದ ಪ್ರಧಾನಿ ಅವರು ಪೀಡಿತ ಪ್ರದೇಶಗಳ ವೈಮಾನಿಕ ಮತ್ತು ನೆಲದ ಸಮೀಕ್ಷೆಯನ್ನು ಕೈಗೊಂಡರು. ನಂತರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮೋದಿ ಅವರು, ಭಾರತದ ಇತಿಹಾಸದಲ್ಲಿ ಅತ್ಯಂತ ಭೀಕರ ಅಣೆಕಟ್ಟು ವೈಫಲ್ಯಗಳಲ್ಲಿ ಒಂದಾದ ಮೋರ್ಬಿ ದುರಂತದ ಅನುಭವವನ್ನು ನೆನಪಿಸಿಕೊಂಡರು.
ನಾನು ದುರಂತವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಸುಮಾರು 45-47 ವರ್ಷಗಳ ಹಿಂದೆ ಗುಜರಾತ್‌ನ ಮೋರ್ಬಿಯಲ್ಲಿದ್ದ ಅಣೆಕಟ್ಟು ಭಾರಿ ಮಳೆಗೆ ಸಂಪೂರ್ಣವಾಗಿ ನಾಶವಾಯಿತು. 10 ರಿಂದ 12 ಅಡಿ ನೀರು ಮೋರ್ಬಿ ನಗರಕ್ಕೆ ನುಗ್ಗಿತು. ಇಡೀ ನಗರದಲ್ಲಿ 2,500 ಕ್ಕೂ ಹೆಚ್ಚು ಜನರು ಸತ್ತರು. ನಾನು ಸುಮಾರು 6 ತಿಂಗಳುಗಳ ಕಾಲ ಈ ಸಂದರ್ಭಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದರು.
#WATCH| Kerala | Wayanad landslide: Prime Minister Narendra Modi says "I have seen and experienced a disaster very closely. About 45-47 years ago there was a dam in Morbi, Gujarat. Heavy rains occurred and the dam was completely destroyed and water entered Morbi city. There was…pic.twitter.com/OInF8l1rlt
ರಾಜ್ಯ ಸರ್ಕಾರದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ. ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಮಾಹಿತಿ ಬಂದ ಕೂಡಲೇ ರಾಜ್ಯ ಸಚಿವರೊಬ್ಬರನ್ನು ರಾಜ್ಯಕ್ಕೆ ಕಳುಹಿಸಿ ಪರಿಸ್ಥಿತಿ ಅವಲೋಕಿಸಲಾಯಿತು. ಎನ್‌ಡಿಆರ್‌ಎಫ್, ಸೇನೆ ಮತ್ತು ವಾಯುಪಡೆಯ ತಂಡಗಳನ್ನು ಸಹ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
#WATCH| Kerala | Wayanad landslide: Prime Minister Narendra Modi says "I had a conversation with CM Pinarayi Vijayan the morning when the incident took place and assured him that we will provide assistance and try to reach the spot as soon as possible. NDRF, SDRF, Army, Police,…pic.twitter.com/CaLZnnDbhO
ಈ ಅನಾಹುತ ಸಾಮಾನ್ಯವಲ್ಲ. ಸಾವಿರಾರು ಕುಟುಂಬಗಳ ಕನಸುಗಳು ಭಗ್ನಗೊಂಡಿವೆ. ನಾನು ಸ್ಥಳದಲ್ಲೇ ಪರಿಸ್ಥಿತಿಯನ್ನು ನೋಡಿದ್ದೇನೆ. ಈ ದುರಂತವನ್ನು ಎದುರಿಸಿದ ಸಂತ್ರಸ್ತರನ್ನು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಿದ್ದೇನೆ. ನಾನು ಆಸ್ಪತ್ರೆಯಲ್ಲಿ ಗಾಯಗೊಂಡ ರೋಗಿಗಳನ್ನು ಭೇಟಿ ಮಾಡಿದ್ದೇನೆ. ಮೃತರ ಕುಟುಂಬಗಳು ಒಬ್ಬಂಟಿಯಾಗಿಲ್ಲ, ನಾವೆಲ್ಲರೂ ಅವರೊಂದಿಗೆ ನಿಂತಿದ್ದೇವೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ತಿಳಿಸಿದರು. (ಏಜೆನ್ಸೀಸ್​​)
ನಮ್ಮ ಮಿಲಿಟರಿಗೆ ಭಾರತೀಯರನ್ನು ಸೇರಿಸಿಕೊಳ್ಳುತ್ತಿಲ್ಲ; ರಷ್ಯಾ ರಾಯಭಾರ ಕಚೇರಿ ಸ್ಪಷ್ಟನೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + four =
Remember me
