ದಕ್ಷ ಆಡಳಿತಗಾರ, ಸಮರ್ಥ ನಾಯಕ, ಸ್ಪಂದನಶೀಲ ಪ್ರಧಾನಿಯಾಗಿ ಗಮನ ಸೆಳೆದಿರುವ ನರೇಂದ್ರ ಮೋದಿ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಸಾಮಾಜಿಕ ಮಾಧ್ಯಮಗಳಲ್ಲಿ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ಅವರು ಸ್ಟೈಲ್ ಐಕಾನ್ ಕೂಡ ಹೌದು. ದಣಿವರಿಯದೆ ದಿನಕ್ಕೆ 18 ಗಂಟೆ ಕೆಲಸ ಮಾಡುವ ಮೋದಿ ಸದಾ ಕ್ರಿಯಾಶೀಲ. ಇಂದು (ಸೆ.17) ಅವರ 70ನೇ ಜನ್ಮದಿನದ ನಿಮಿತ್ತ ದೇಶಾದ್ಯಂತ ಹಲವು ಕಾರ್ಯಕ್ರಮಗಳು ಏರ್ಪಾಡಾಗಿವೆ. ನಮೋ ಬದುಕಿನ ಹಾದಿ ಮತ್ತು ಅವರ ಸಾಧನೆಗಳ ಅವಲೋಕನವನ್ನು ಗಣ್ಯರ ಲೇಖನದ ಮೂಲಕ ‘ವಿಜಯವಾಣಿ’ ಇಲ್ಲಿ ಕಟ್ಟಿಕೊಟ್ಟಿದೆ.
ರೈತರಿಗೆ ನೆರವು:ಬೇವು ಲೇಪಿತ ಯೂರಿಯಾ, ಮಣ್ಣಿನ ಆರೋಗ್ಯ ಕಾರ್ಡ್, ಫಸಲ್ ಬೀಮಾ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಮಧ್ಯಮ ಮತ್ತು ಸಣ್ಣ ರೈತರಿಗೆ ವಾರ್ಷಿಕ ಸಮಾನ ಮೂರು ಕಂತುಗಳಲ್ಲಿ 6 ಸಾವಿರ  ರೂ. ಸಹಾಯಧನ ಪಾವತಿ.
ಭ್ರಷ್ಟಾಚಾರ ಈಗಲೂ ವ್ಯವಸ್ಥೆಯನ್ನು ಕಾಡುತ್ತಿದೆ. ಈ ಹಳೆಯ ಕಾಯಿಲೆ ವಾಸಿ ಆಗಲು ದೀರ್ಘಾವಧಿ ಸಮಯ ತೆಗೆದುಕೊಳ್ಳುತ್ತಿದೆ. ಸಾಮಾಜಿಕ ಜೀವನದಲ್ಲಿ ಬದಲಾವಣೆ ಆಗಲೇ ಬೇಕು, ಪಾರದರ್ಶಕ ವ್ಯವಸ್ಥೆ ರೂಪಗೊಳ್ಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಭ್ರಷ್ಟ ಅಧಿಕಾರಿಗಳನ್ನು ಮನೆಗೆ ಕಳಿಸಿದ್ದೇವೆ. ಎಲ್ಲ ರಂಗಗಳಲ್ಲಿ ಇಂಥ ಶುದ್ಧೀಕರಣ ಆಗಬೇಕಿದೆ.
| ನರೇಂದ್ರ ಮೋದಿಪ್ರಧಾನ ಮಂತ್ರಿ
2018ರ ಸೆ. 23ರಂದು ಚಾಲನೆಗೊಂಡ ಆರೋಗ್ಯ ಯೋಜನೆ. 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಮಾರಣಾಂತಿಕವಾದ ಕ್ಯಾನ್ಸರ್, ಹೃದಯಾಘಾತ ಸೇರಿ ಹಲವು ರೋಗಗಳಿಗೆ ಉಚಿತ ಚಿಕಿತ್ಸೆ ಒದಗಿಸಲು 5 ಲಕ್ಷದವರೆಗೆ ಕೇಂದ್ರ ಸರ್ಕಾರದ ನೆರವು ದೊರೆಯಲಿದೆ.
ಅಧಿಕ ಮುಖಬೆಲೆಯ ಹಳೆಯ (-ಠಿ; 1000, -ಠಿ; 500) ನೋಟುಗಳ ಅಮಾನ್ಯೀಕರಣವನ್ನು 2016ರ ನವೆಂಬರ್ 8ರಂದು ಮೋದಿ ಘೋಷಿಸಿದರು. ಆರಂಭದಲ್ಲಿ ಶ್ರೀಸಾಮಾನ್ಯರಿಗೆ ಕೊಂಚ ಅಡಚಣೆಯಾದರೂ, ನಕಲಿ ನೋಟು ಹಾವಳಿ, ಉಗ್ರರಿಗೆ ಆರ್ಥಿಕ ನೆರವು ಮುಖ್ಯವಾಗಿ ಭ್ರಷ್ಟಾಚಾರ, ಕಾಳಧನಕ್ಕೆ ಕಡಿವಾಣ ತರಲು ಇದು ಸಹಕಾರಿ ಆಯಿತು.
ದೇಶದ ಬ್ಯಾಂಕ್​ಗಳಿಗೆ ದೊಡ್ಡ ಪ್ರಮಾಣದಲ್ಲಿ ವಂಚಿಸಿ ವಿದೇಶಕ್ಕೆ ಪರಾರಿಯಾಗುವವರನ್ನು ಅಪರಾಧಿ ಎಂದು ಘೋಷಿಸುವ ಕಾಯ್ದೆಯನ್ನು 2018ರ ಏಪ್ರಿಲ್​ನಲ್ಲಿ ರೂಪಿಸಲಾಯಿತು. ಇದರಿಂದ ಆರ್ಥಿಕ ವಂಚಕರ ಆಸ್ತಿ ಜಪ್ತಿ, ವಿಲೇವಾರಿ ಮಾಡಿ ಸಾಲ ಚುಕ್ತಾ ಮಾಡಿಕೊಳ್ಳುವ ಕಾನೂನು ಜಾರಿಗೆ ಬಂತು.
ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ಭಾರತ ಜಾಗತಿಕವಾಗಿ ಹೆಚ್ಚು ಮನ್ನಣೆಗೆ ಪಾತ್ರವಾಗಿದೆ. ಸ್ಪಷ್ಟ ವಿದೇಶಾಂಗ ನೀತಿ, ಎಲ್ಲ ರಾಷ್ಟ್ರಗಳ ಜತೆ ಸಹಾಯಹಸ್ತ, ತಂಟೆ- ತಕರಾರು ಮಾಡುವ ದೇಶಗಳಿಗೆ ತಕ್ಕಪಾಠ ಮೋದಿ ವಿದೇಶಾಂಗ ನೀತಿಯ ವಿಶೇಷ. ಭಾರತವನ್ನು ಅಮೆರಿಕ ರಕ್ಷಣಾ ವಿಷಯದಲ್ಲಿ ಪರಮಾಪ್ತ ರಾಷ್ಟ್ರವೆಂದು ಹೇಳಿದೆ. ಮಾಲ್ದೀವ್ಸ್, ಶ್ರೀಲಂಕಾ ಜತೆಗೆ ಆರ್ಥಿಕ, ಭೌಗೋಳಿಕ ಸಂಬಂಧ ಗಟ್ಟಿ, ಪೂರ್ವ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಗೆಳೆಯರನ್ನು ಸಂಪಾದಿಸಿದೆ.
ಪ್ರಧಾನಿ ನರೇಂದ್ರ ಮೋದಿ 70ನೇ ಜನ್ಮದಿನ ಪ್ರಯುಕ್ತ ತಮಿಳುನಾಡಿನ ಕೊಯಮತ್ತೂರಿನ ಬಿಜೆಪಿ ಕಾರ್ಯಕರ್ತರು 70 ಕೆ.ಜಿ ತೂಕದ ಲಾಡುವನ್ನು ಬುಧವಾರವೇ ವಿತರಿಸಿದ್ದಾರೆ. ಶಿವನ್ ಕಮಾಚಿ ಅಮ್ಮನ್ ದೇವಸ್ಥಾನದಲ್ಲಿ ನೈವೇದ್ಯ ಮಾಡಿದ ನಂತರ ಹಂಚಿದ್ದಾರೆ. ಅಲ್ಲದೆ, ನಗರದ ಹಲವು ಕಡೆಗಳಲ್ಲಿ ದಿನಸಿ ವಿತರಣೆ ಸೇರಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಗುರುವಾರ ಹಮ್ಮಿಕೊಂಡಿದ್ದಾರೆ. ಅಲ್ಲದೆ, ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರು ಸೆ.14ರಿಂದ ‘ಸೇವಾ ಸಪ್ತಾಹ’ ಆರಂಭಿಸಿದ್ದು. 20ರವರೆಗೆ ನಡೆಯಲಿದೆ.
ಈಗ ಕೇರಳದಲ್ಲೊಬ್ಬ ಮೋದಿ ಬೇಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
