ರಾಂಚಿ:ಪ್ರತಿಯೊಬ್ಬ ಜನಸಾಮಾನ್ಯನೂ ವಿಮಾನದಲ್ಲಿ ಸಂಚರಿಸಬೇಕೆಂಬುದೇ ಕೇಂದ್ರ ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ದೇಶೀಯ ವಿಮಾನ ಹಾರಾಟವನ್ನು ಬಲಪಡಿಸಲು ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಬಹುನಿರೀಕ್ಷಿತ ದಿಯೋಘರ್​ ವಿಮಾನ ನಿಲ್ದಾಣವನ್ನು  ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು,  ಜಾರ್ಖಂಡ್​​ನಲ್ಲಿ ಇದು ಎರಡನೇ ವಿಮಾನ ನಿಲ್ದಾಣವಾಗಿದ್ದು, ಡುಮ್ಕಾ ಮತ್ತು ಬೊಕರೊದಲ್ಲಿ ಮತ್ತೆರಡು ವಿಮಾನ ನಿಲ್ದಾಣಗಳು ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಿದರು.ಈ ವೇಳೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಹೇಮಂತ್​ ಸೋರೆನ್, ​ಜಾರ್ಖಂಡ್​ನಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕೆಂಬ ಬೇಡಿಕೆ 2010 ರಿಂದ ಇತ್ತು, ಪ್ರಧಾನಿ ಮೋದಿ ಅವರಿಂದ ಇದು ಸಾಕಾರವಾಯಿತು ಎಂದು ಹೇಳಿದರು.
ಇದಷ್ಟೇ ಅಲ್ಲದೇ ಜಾರ್ಖಂಡ್​ನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 16,000 ಕೋಟಿ ರೂ. ಯೋಜನೆಗೆ ಇದೇ ವೇಳೆ ಪ್ರಧಾನಿ ಚಾಲನೆ ನೀಡಿದರು. ಕಳೆದ 8 ವರ್ಷದಲ್ಲಿ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಮಾಡಲಾಗಿದ್ದು, ಇನ್ನೂ 13 ಹೆದ್ದಾರಿಗಳ ಯೋಜನೆಗೆ ಚಾಲನೆ ನೀಡಿದ್ದಾರೆ.(ಏಜೆನ್ಸೀಸ್​)
ಸಲ್ಮಾನ್​​ನನ್ನು ಮುಗಿಸಿಬಿಡಬೇಕಿತ್ತು, ಕೊಲ್ಲಲು ಮಾಡಿದ್ದ ಪ್ರಯತ್ನ ಒಂದೆರಡಲ್ಲ, ಗ್ಯಾಂಗ್​ಸ್ಟರ್ ಹೇಳಿಕೆಯಿಂದ ಪೊಲೀಸರೇ ಶಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 9 =
Remember me
