ವಾರಾಣಸಿ:ಪ್ರಧಾನಿ ನರೇಂದ್ರ ಮೋದಿ ಫೆ.16ರಂದು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ವಾರಾಣಸಿಗೆ ಒಂದು ದಿನದ ಮಟ್ಟಿಗೆ ಭೇಟಿ ನೀಡಿದ್ದ ಮೋದಿ ತನಗೆ ತನ್ನ ಮಗಳ ಮದುವೆಗೆ ಬನ್ನಿ ಎಂದು ಆಮಂತ್ರಣ ನೀಡಿದ್ದ ಸೈಕಲ್​ ರಿಕ್ಷಾ ಚಾಲಕನನ್ನು ಭೇಟಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ದತ್ತು ಪಡೆದ ದೊಮ್ರಿ ಗ್ರಾಮದ ನಿವಾಸಿ ಮಂಗಲ್​ ಕೇವತ್​ ತಮ್ಮ ಮಗಳ ಮದುವೆಯ ಮೊದಲ ಆಮಂತ್ರಣ ಪತ್ರವನ್ನು ಫೆ.8ರಂದು ಪ್ರಧಾನಿ ಕಚೇರಿಗೆ ಕೊಟ್ಟು ಬಂದಿದ್ದರು. ಅದಕ್ಕೆ ಪ್ರಧಾನಿಯವರು ಫೆ.12ರಂದು ಅಭಿನಂದನಾ ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಪ್ರಧಾನಿಯು ಫೆ.16ರಂದು ವಾರಾಣಸಿಗೆ ಬಂದ ಸಮಯದಲ್ಲಿ ಮಂಗಲ್​ ಕೇವತ್​ರನ್ನು ಭೇಟಿ ಮಾಡಿ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸಿ ಬಂದಿದ್ದಾರೆ.
ಮಂಗಲ್​ ಕೇವತ್​ನ ಬಗ್ಗೆ ಪ್ರಧಾನಿ ಇಷ್ಟೊಂದು ಕಾಳಜಿ ತೋರುವುದಕ್ಕೆ ಒಂದು ಕಾರಣವಿದೆ. ಪ್ರಧಾನಿ ಮೋದಿ ನಡೆಸಿದ ಗಂಗಾ ಸ್ವಚ್ಛತಾ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದುಕೊಂಡ ಮಂಗಲ್​ ತನ್ನ ಊರಿನಲ್ಲಿ ಹರಿಯುವ ಗಂಗಾ ನದಿಯನ್ನು ಸ್ವತಃ ತಾನೇ ಮುಂದೆ ನಿಂತು ಸ್ವಚ್ಛ ಮಾಡಿದ್ದ. ಈ ವಿಚಾರ ಪ್ರಧಾನಿಯವರೆಗೂ ತಲುಪಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
