ನವದೆಹಲಿ:ಕೇಂದ್ರ ಸರ್ಕಾರದ ಆತ್ಮ ನಿರ್ಭರ್​ ಭಾರತ್​ ಪರಿಕಲ್ಪನೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಕರೊನಾ ಮಹಾಮಾರಿಯಿಂದ ತತ್ತರಿಸುವ ಇಂದಿನ ದಿನಗಳಲ್ಲಿ ಈ ಪರಿಕಲ್ಪನೆ ಜನರಿಗೆ ಉತ್ತೇಜನ ನೀಡುತ್ತಿದೆ.
ಇದೇ ಪರಿಕಲ್ಪನೆಯಿಂದ ಸ್ಫೂರ್ತಿಗೊಂಡ 211 ಭಾರತೀಯ ಗಾಯಕರ ಹಕ್ಕುಗಳ ಸಂಘ (ಇಸ್ರಾ) ಸದಸ್ಯರು ಒಟ್ಟಿಗೆ ಸೇರಿ ‘ಜಯತು ಜಯತು ಭಾರತಂ – ವಸುದೇವ್ ಕುಟುಂಬಕಂ’ ಎಂಬ ಹೊಸ ಹಾಡಿನ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋ ನೋಡಿದ ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಾಯಕಿ ಗಾಯಕಿ ಲತಾ ಮಂಗೇಶ್ಕರ್ ಅವರು ಪೋಸ್ಟ್ ಮಾಡಿದ ವೀಡಿಯೋ ಅನ್ನು ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಮ್ಮನ ಬಳಿ ಹೋಗುವಂತಿಲ್ಲ, ಅಪ್ಪ ಯಾರು ಗೊತ್ತೇ ಇಲ್ಲ- ತಾಯಿಯ ಸ್ಪರ್ಶಕ್ಕೆ ಕಾದಿವೆ ಸಾವಿರಾರು ಕಂದಮ್ಮಗಳು…
ಪ್ರಸಿದ್ಧ ಗಾಯಕರಾದ ಎಸ್​.ಪಿ, ಬಾಲಸುಬ್ರಹ್ಮಣ್ಯಂ, ಲತಾ ಮಂಗೇಶ್ಕರ್​, ಸೋನು ನಿಗಮ್, ಶಂಕರ್ ಮಹಾದೇವನ್​, ಆಶಾ ಭೋಸ್ಲೆ, ಉಷಾ ಉತ್ತುಪ, ಚಿತ್ರಾ, ಪ್ರಸೂನ್ ಜೋಶಿ, ವಸುಂಧರಾ ದಾಸ್​ ಸೇರಿದಂತೆ, ಕನ್ನಡದ ಖ್ಯಾತ ಹಿನ್ನೆಲೆ ಗಾಯಕರಾಗಿರುವ ಬಿ ಆರ್ ಛಾಯಾ, ವಿಜಯ್ ಪ್ರಕಾಶ್, ಸಂಗೀತಾ ಕಟ್ಟಿ, ಶಮಿತಾ ಮಲ್ನಾಡ್ ಸೇರಿದಂತೆ ಅನೇಕ ಮಂದಿ ಇದಕ್ಕೆ ದನಿಗೂಡಿಸಿದ್ದಾರೆ.
ಲಾಕ್​ಡೌನ್​ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಮನೆಯಲ್ಲಿಯೇ ಕುಳಿತು ರೆಕಾರ್ಡಿಂಗ್​ ಮಾಡಿ ಕಳುಹಿಸಿರುವುದು ವಿಶೇಷ. ಈ ಹಾಡನ್ನು ಪ್ರಸೂನ್ ಜೋಶಿ ಬರೆದಿದ್ದು, ಶಂಕರ್ ಮಹಾದೇವನ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ:ಭಾರತದ ಕೆಂಪು ದೀಪದ ಹಿಂದಿದೆ ಕರೊನಾ ಭಯಂಕರ ರಹಸ್ಯ- ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಎಂದಿದೆ ಅಮೆರಿಕಈ ಹಾಡು ಎಲ್ಲರನ್ನೂ ರೋಮಾಂಚನಪಡಿಸುವುದು ಮಾತ್ರವಲ್ಲದೇ ಕರೊನಾ ವೈರಸ್​ನ ಈ ದಿನಗಳಲ್ಲಿ ಜನರಲ್ಲಿ ಆತ್ಮವಿಶ್ವಾಸವನ್ನೂ ಮೂಡಿಸುತ್ತದೆ. ಇದು ‘ಆತ್ಮ ನಿರ್ಭರ್’ ಭಾರತಕ್ಕೆ ಒಂದು ಸುಮಧುರ ಸಂದೇಶವನ್ನೂ ನೀಡುತ್ತದೆ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.
ಲತಾ ಮಂಗೇಶ್ಕರ್ ಅವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಭಾರತದ ‘ಆತ್ಮ ನಿರ್ಭರ್’ ಭಾರತದ ಸ್ಫೂರ್ತಿಯಿಂದ ಪ್ರೇರೇಪಿತರಾಗಿ ನಮ್ಮ ಇಸ್ರಾದ ಪ್ರತಿಭಾನ್ವಿತ ಗಾಯಕರು ಒಗ್ಗೂಡಿ ಈ ಹಾಡನ್ನು ರಚಿಸಿದ್ದಾರೆ. ಈ ಹಾಡನ್ನು ಭಾರತದ ಜನರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಲಾಗಿದೆ ಎಂದು ಹೇಳಿದ್ದಾರೆ.

‘ಇಸ್ರಾ’ ಸದಸ್ಯರು ಒಟ್ಟಿಗೆ ಸೇರಿ ಆತ್ಮ ನಿರ್ಭರ್ ಭಾರತದ ಸ್ಫೂರ್ತಿಗೆ ಸುಮಧುರ ಗೀತೆಯ ಮೂಲಕ ವಂದನೆಗಳನ್ನು ಸಲ್ಲಿಸಿರುವ ಅತಿದೊಡ್ಡ ಗೀತೆ ಎನ್ನಲಾಗಿದೆ. ಈ ವಿಡಿಯೊದಲ್ಲಿ ಆರೋಗ್ಯ ಕಾರ್ಯಕರ್ತರಾದ ಕೋವಿಡ್-19 ಯೋಧರ ಕೆಲ ದೃಶ್ಯ ತುಣುಕುಗಳೂ ಇವೆ. ಕೊನೆಯಲ್ಲಿ ನರೇಂದ್ರ ಮೋದಿ ದೀಪ ಬೆಳಗಿಸುತ್ತಿರುವ ಕ್ಲಿಪ್ ಸೇರಿಸಲಾಗಿದೆ. (ಏಜೆನ್ಸೀಸ್​)
यह गीत हर किसी को उत्साहित और प्रेरित करने वाला है। इसमें आत्मनिर्भर भारत के लिए सुरों से सजा उद्घोष है।https://t.co/N6qy4BaCfI
— Narendra Modi (@narendramodi)May 17, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × five =
Remember me
