ನವದೆಹಲಿ:ಕರೊನಾ ಲಾಕ್​ಡೌನ್​ನಿಂದ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಹೊಟ್ಟೆ, ಬಟ್ಟೆಗಿಲ್ಲದೆ ಪರದಾಡುತ್ತಿದ್ದಾರೆ. ಇದೀಗ ದೇಶ ಅನ್​ಲಾಕ್​ ಮೊದಲನೇ ಹಂತದಲ್ಲಿದ್ದು, ವಲಸೆ ಕಾರ್ಮಿಕರ ಹಿತರಕ್ಷಣೆ, ಉದ್ಯೋಗವನ್ನು ಕೇಂದ್ರ ಸರ್ಕಾರ ಮೊದಲ ಆದ್ಯತೆಯಾಗಿ ಪರಿಗಣಿಸಿದೆ.
ಅದರ ಅಂಗವಾಗಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಗರೀಬ್​ ಕಲ್ಯಾಣ್​ ರೋಜ್​ಗಾರ್​ ಅಭಿಯಾನ್’ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಕೆಲಸ ಕಳೆದುಕೊಂಡು ತಮ್ಮ ಊರುಗಳಿಗೆ ವಾಪಸ್ ಆಗಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ಇದು. ಇದಕ್ಕಾಗಿ 50,000 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮೀಸಲಾಗಿಟ್ಟಿದೆ.ಇದನ್ನೂ ಓದಿ:ಪಾಕಿಸ್ತಾನದ ಕಳ್ಳಾಟ ಬಯಲು; ಏನೇನೆಲ್ಲಾ ಇತ್ತು ಗೊತ್ತಾ ನೆಲಕ್ಕುರುಳಿದ ಡ್ರೋನ್​ನಲ್ಲಿ?!
ಇಂದು ಯೋಜನೆಯ ಉದ್ಘಾಟನೆ ಮಾಡಿದ ಮೋದಿಯವರು ಮಾತನಾಡಿ, ಒಂದೊಂದು ಪಟ್ಟಣಗಳ ಅಭಿವೃದ್ಧಿಯಲ್ಲೂ ವಲಸೆ ಕಾರ್ಮಿಕರ ಕೊಡುಗೆ ಅಪಾರ. ಆದರೆ ಲಾಕ್​ಡೌನ್​ ಅವಧಿಯಲ್ಲಿ ಅವರು ತುಂಬ ಕಷ್ಟಪಟ್ಟಿದ್ದಾರೆ. ವಲಸೆ ಹೋಗಿದ್ದ ಊರಿನಲ್ಲಿ ಕೆಲಸವಿಲ್ಲದೆ, ವಾಪಸ್​ ತಮ್ಮ ಊರಿಗೆ ಬಂದಿದ್ದಾರೆ. ಇದೀಗ ಅವರು ಇರುವಲ್ಲಿಯೇ ಉದ್ಯೋಗ ಸೃಷ್ಟಿಸಲು ಗರೀಬ್​ ಕಲ್ಯಾಣ್​ ರೋಜ್​ಗಾರ್​ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬಡಜನರ ಜೀವನ, ಕಲ್ಯಾಣಕ್ಕಾಗಿ ಯೋಜನೆಯೊಂದು ಶುರುವಾದ ಈ ದಿನ ಒಂದು ಐತಿಹಾಸಿಕ ದಿನವಾಗಿದೆ. ನನ್ನ ಕಾರ್ಮಿಕ ಸ್ನೇಹಿತರ ಅಗತ್ಯಗಳನ್ನು, ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.ಗರೀಬ್​ ಕಲ್ಯಾಣ್​ ರೋಜ್​ಗಾರ್​ ಅಭಿಯಾನವು ಬಿಹಾರದಿಂದ ಪ್ರಾರಂಭವಾಗಲಿದೆ. ಇಷ್ಟು ದಿನ ಬೇರೆ ರಾಜ್ಯ, ಊರುಗಳಿಗೆ ಹೋಗಿ, ಅಲ್ಲಿನ ಪಟ್ಟಣಗಳ ಅಭಿವೃದ್ಧಿಗೆ ಕಾರಣರಾಗುತ್ತಿದ್ದ ವಲಸಿಗರು, ಇನ್ನು ಮುಂದೆ ಅವರದ್ದೇ ಹಳ್ಳಿ, ನೆರೆಯ ಊರುಗಳ ಕಲ್ಯಾಣಕ್ಕಾಗಿ ಶ್ರಮಿಸಲಿದ್ದಾರೆ ಎಂದಿದ್ದಾರೆ.ಇದನ್ನೂ ಓದಿ:ಡಿಸೆಂಬರ್​​ನಲ್ಲೇ ವಕ್ಕರಿಸಿದೆ ಕರೊನಾ…ಒಳಚರಂಡಿಯ ತ್ಯಾಜ್ಯದಲ್ಲಿ ಅಡಗಿ ಕುಳಿತಿತ್ತು !
ಈ ಯೋಜನೆ ಅತಿ ಹೆಚ್ಚು ವಲಸೆ ಕಾರ್ಮಿಕರು ಇರುವ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ, ಒಡಿಶಾ ಮತ್ತು ರಾಜಸ್ಥಾನಗಳ 116 ಜಿಲ್ಲೆಗಳಲ್ಲಿ 125 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)
ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ರಾಹುಲ್​ ಗಾಂಧಿಗೆ ಎರಡು ಅನುಮಾನ; ಪ್ರಧಾನಿಗೆ ಪ್ರಶ್ನೆ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:20 − 13 =
Remember me
