ಬರೇಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಕಲ್ಪ ಸಪ್ತಾಹಕ್ಕೆ ಶನಿವಾರ ಚಾಲನೆ ನೀಡಿದರು. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜನರೊಂದಿಗೆ ಸಂವಾದ ನಡೆಸಿದರು. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದ ಜನರನ್ನು ಶ್ಲಾಘಿಸಿದರು. ದೇಶದ ಭವಿಷ್ಯಕ್ಕೆ ಉತ್ತಮ ಶಿಕ್ಷಣ ನೀಡುವ ಶಿಕ್ಷಕರೊಂದಿಗೆ ಅಂದರೆ ಯುವಜನತೆಯೊಂದಿಗೆ ಪ್ರಧಾನಿ ಮೋದಿ ಅವರು ಸಂವಾದ ನಡೆಸಿದರು.
ಶನಿವಾರ ಸಂಕಲ್ಪ ಸಪ್ತಾಹದ ಪ್ರಾರಂಭದಲ್ಲಿ ದೇಶದ ವಿವಿಧ ಭಾಗಗಳ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಮೋದಿಯವರು ಈ ಶಿಕ್ಷಕರ ಪೈಕಿ ಉತ್ತರ ಪ್ರದೇಶದ ಬರೇಲಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಂಜನಾ ಅಗರ್ವಾಲ್ ಅವರೊಂದಿಗೆ ಮಾತನಾಡಿದರು.

ರಂಜನಾ ಅವರು ಶಿಕ್ಷಣದ ಕುರಿತು ವಿಶಿಷ್ಟ ವಿಧಾನವನ್ನು ಹೇಳಿದರು. ಈ ಸಂವಾದದಲ್ಲಿ ರಂಜನಾ ಅವರು ಸಾಂಪ್ರದಾಯಿಕ ಬೋಧನಾ ವಿಧಾನಗಳ ಬದಲಿಗೆ ಚಟುವಟಿಕೆ ಆಧಾರಿತ ಕಲಿಕೆಯ ಆಯ್ಕೆಯನ್ನು ಪ್ರಸ್ತಾಪಿಸಿದರು. ಬಾಲ ಸಭೆಗಳು, ಸಂಗೀತ ಪಾಠಗಳು, ಕ್ರೀಡೆಗಳು ಮತ್ತು ದೈಹಿಕ ತರಬೇತಿ ಇತ್ಯಾದಿಗಳನ್ನು ಆಯೋಜಿಸುವ ಉದಾಹರಣೆಗಳನ್ನು ನೀಡಿದರು. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ತಂತ್ರಜ್ಞಾನದ ಬಳಕೆಯನ್ನು ಪ್ರಸ್ತಾಪಿಸಿದರು. ತನ್ನ ಜಿಲ್ಲೆಯ ಎಲ್ಲಾ 2,500 ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳ ಲಭ್ಯತೆಯ ಬಗ್ಗೆ ಅವರು ಮಾಹಿತಿ ನೀಡಿದರು.

ರಂಜನಾ ನೇಮಕಗೊಂಡಿರುವ ಶಹಪುರದ ಶಾಲೆಯಲ್ಲಿ ಸರಾಸರಿ 95 ಪ್ರತಿಶತ ವಿದ್ಯಾರ್ಥಿಗಳು ಇದ್ದಾರೆ. ಅವರ ಪ್ರಯೋಗಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರ ಪ್ರಯತ್ನವನ್ನು ಶ್ಲಾಘಿಸಿದರು.
‘ಯಾವುದೇ ಹಣ, ಮದ್ಯ ಸಿಗುವುದಿಲ್ಲ’; ಲೋಕಸಭಾ ಚುನಾವಣಾ ಅಜೆಂಡಾ ಸ್ಪಷ್ಟಪಡಿಸಿದ ನಿತಿನ್ ಗಡ್ಕರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − two =
Remember me
