ನವದೆಹಲಿ: ಯಾವುದೇ ವಿಕೋಪ ಮೊದಲಿಗೆ ಬಡವರ ಉದ್ಯೋಗ, ಆಹಾರ ಮತ್ತು ಉಳಿತಾಯದ ಮೇಲೆ ಪರಿಣಾಮ ಬೀರುತ್ತದೆ. ಬಹುತೇಕ ಬಡ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಿದ್ದು ಸಂಕಷ್ಟ ಎದುರಿಸತೊಡಗಿದ್ದಾರೆ. ಸರ್ಕಾರ ಮೊದಲ ದಿನದಿಂದಲೂ ಬಡವರು ಮತ್ತು ಕೆಳ ಮಧ್ಯಮವರ್ಗದವರು ಸಾಂಕ್ರಾಮಿಕದ ಕಾರಣ ವಿಧಿಸಲಾದ ಲಾಕ್ ಡೌನ್ ನಿಂದಾಗಿ ಎದುರಿಸಿದ ಸಂಕಷ್ಟದ ಪ್ರಮಾಣವನ್ನು ತಗ್ಗಿಸಲು ಕಟಿಬದ್ಧವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಏನಿದು ಕಾರ್ಯಕ್ರಮ
ಕೋವಿಡ್ 19ರಿಂದ ಬಾಧಿತರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಜೀವನೋಪಾಯ ಪುನಾರಂಭಿಸಲು ನೆರವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು 2020ರ ಜೂನ್ 1ರಂದು ಆರಂಭಿಸಿದೆ. 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳು ಮಧ್ಯಪ್ರದೇಶದಲ್ಲಿ ನೋಂದಾಯಿಸಿಕೊಂಡಿದ್ದು, ಸುಮಾರು 1.4 ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ಅನುಮೋದಿಸಿ ಒಟ್ಟು 140 ಕೋಟಿ ರೂ. ಮಂಜೂರು ಮಾಡಲಾಗಿದೆ.
ಅವರು ಇಂದು ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ‘ಸ್ವನಿಧಿ ಸಂವಾದ’ ನಡೆಸಿದ್ದು, ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ರೋಜ್ಗಾರ್ ಯೋಜನೆ ಅಭಿಯಾನದಡಿ ಉದ್ಯೋಗ ನೀಡುವುದರ ಜೊತೆಗೆ ಉಚಿತ ಅಡುಗೆ ಅನಿಲ ಸಿಲಿಂಡರ್, ಉಚಿತ ಆಹಾರಧಾನ್ಯ ಮತ್ತು ಆಹಾರ ಒದಗಿಸಲು ಸರ್ವ ಪ್ರಯತ್ನ ಮಾಡಿತು. ಅದೇ ರೀತಿ, ಮತ್ತೊಂದು ದುರ್ಬಲ ವರ್ಗವಾದ ಬೀದಿ ಬದಿ ವ್ಯಾಪಾರಿಗಳ ಬಗ್ಗೆಯೂ ಸರ್ಕಾರ ಗಮನಹರಿಸಿದ್ದು, ಆ ಮಾರಾಟಗಾರರಿಗೆ ಅಗ್ಗದ ಬಡ್ಡಿ ದರದಲ್ಲಿ ಬಂಡವಾಳವನ್ನು ಒದಗಿಸುವ ಸಲುವಾಗಿ ಪ್ರಧಾನಿ ಸ್ವನಿಧಿ ಯೋಜನೆಯನ್ನು ಘೋಷಿಸಲಾಗಿದೆ, ಇದರಿಂದ ಅವರು ತಮ್ಮ ಜೀವನೋಪಾಯ ವ್ಯವಹಾರಗಳನ್ನು ಪುನರಾರಂಭಿಸಬಹುದು ಎಂದು ಪ್ರಧಾನಮಂತ್ರಿ ತಿಳಿಸಿದರು. ಇದೇ ಮೊದಲ ಬಾರಿಗೆ ಲಕ್ಷಾಂತರ ಬೀದಿಬದಿ ವ್ಯಾಪಾರಿಗಳು ವ್ಯವಸ್ಥೆಯೊಂದಿಗೆ ನೇರವಾಗಿ ಸಂಪರ್ಕಕ್ಕೆ ಬಂದಿದ್ದು, ಇದರಿಂದ ಅವರು ಪ್ರಯೋಜನ ಪಡೆಯಲು ಪ್ರಾರಂಭಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಕ್ರಿಮಿನಲ್ ಗ್ಯಾಂಗ್‌ಗಳ ಹೆಡೆಮುರಿ ಕಟ್ಟಿ- ಸತೀಶ ಜಾರಕಿಹೊಳಿ
ಯೋಜನೆಯ ಪ್ರಯೋಜನಈ ಯೋಜನೆ ಶೇ.7ರವರೆಗೆ ಬಡ್ಡಿ ವಿನಾಯಿತಿ ನೀಡಲಿದ್ದು, ಬ್ಯಾಂಕ್ ನಿಂದ ಪಡೆದ ಸಾಲವನ್ನು ಯಾರಾದರೂ ಒಂದು ವರ್ಷದೊಳಗೆ ಮರು ಪಾವತಿ ಮಾಡಿದರೆ, ಅವರಿಗೆ ಬಡ್ಡಿ ವಿನಾಯಿತಿ ಸೌಲಭ್ಯ ಸಿಗಲಿದೆ. ಡಿಜಿಟಲ್ ವಹಿವಾಟಿನಲ್ಲಿ ಹಣ ಮರಳುವುದೂ (ಕ್ಯಾಷ್ ಬ್ಯಾಕ್) ಇರುತ್ತದೆ ಎಂದರು. ಈ ರೀತಿ, ಒಟ್ಟು ಉಳಿತಾಯವು ಒಟ್ಟು ಬಡ್ಡಿಗಿಂತ ಹೆಚ್ಚಾಗಿರುತ್ತದೆ. ದೇಶದಲ್ಲಿನ ಡಿಜಿಟಲ್ ವಹಿವಾಟಿನ ಪ್ರವೃತ್ತಿ 3-4 ವರ್ಷಗಳಿಂದ ತ್ವರಿತವಾಗಿ ಹೆಚ್ಚಾಗುತ್ತಿದೆ. ಈ ಯೋಜನೆ ಜನರಿಗೆ ಹೊಸದಾಗಿ ವ್ಯಾಪಾರ ಆರಂಭಿಸಲು ಸುಲಭ ಬಂಡವಾಳ ಒದಗಿಸುತ್ತದೆ. ಇದೇ ಮೊದಲ ಬಾರಿಗೆ ಲಕ್ಷಾಂತರ ಬೀದಿ ಬದರಿ ವ್ಯಾಪಾರಿಗಳ ಜಾಲವನ್ನು ವ್ಯವಸ್ಥೆಯೊಂದಿಗೆ ಸಂಪರ್ಕಿಸಲಾಗಿದ್ದು, ಅವರಿಗೆ ಒಂದು ಮಾನ್ಯತೆ ದೊರೆತಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.
ಇದನ್ನೂ ಓದಿ:ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ
ಬಡ್ಡಿ ಸಾಲದಿಂದ ಮುಕ್ತಿಯೋಜನೆ ಅವರಿಗೆ ಬಡ್ಡಿಯಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ನೆರವಾಗುತ್ತದೆ. ಈ ಯೋಜನೆ ಅಡಿಯಲ್ಲಿ ಶೇ.7ರವರೆಗೆ ಬಡ್ಡಿ ವಿನಾಯಿತಿ ದೊರಕಲಿದೆ. ನಮ್ಮ ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ಅಂಗಡಿ ನಿರ್ವಹಣೆಯಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಲು ಬ್ಯಾಂಕುಗಳು ಮತ್ತು ಡಿಜಿಟಲ್ ಪಾವತಿ ಸೌಲಭ್ಯಗಳ ಸಹಯೋಗದೊಂದಿಗೆ ಹೊಸ ಆರಂಭವನ್ನು ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು.
ಪಡಿತರ ಅಕ್ರಮ ತಡೆಯೋಕೆ ರಾಜ್ಯಮಟ್ಟದ ಜಾಗೃತ ದಳ ರಚನೆ ಶೀಘ್ರ ಎಂದ ಸಚಿವ ಗೋಪಾಲಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + four =
Remember me
