ನವದೆಹಲಿ:ಹಿಂದುಗಳ ಹೊಸವರ್ಷ ಯುಗಾದಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶುಭಾಶಯ ಕೋರಿದ್ದಾರೆ. ಈ ಯುಗಾದಿಯನ್ನು ದೇಶದ ವಿವಿಧ ಭಾಗಗಳಲ್ಲಿ ಬೇರೆಬೇರೆ ಹೆಸರುಗಳಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ಗುಡಿ ಪಡ್ವಾ, ನವ್ರೇಹ್​, ಸಜಿಬು, ಚಿರೋಬಾ ಮತ್ತಿತರ ಹೆಸರುಗಳಿಂದ ಹೊಸವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.
ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾ.24ರ ರಾತ್ರಿ 12ಗಂಟೆಯಿಂದಲೇ ಇಡೀ ಭಾರತ ಲಾಕ್​​ಡೌನ್​ ಆಗಿದೆ. ಹಾಗಾಗಿ ಪ್ರತಿವರ್ಷದಷ್ಟು ಸಂಭ್ರಮದಿಂದ ಯುಗಾದಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮೂಲಕ ದೇಶದ ಎಲ್ಲರಿಗೂ ಯುಗಾದಿ ಶುಭಾಶಯ ಕೋರಿದ್ದಾರೆ.
ದೇಶದಾದ್ಯಂತ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಹೊಸವರ್ಷ ಪ್ರಾರಂಭವಾಗಿದೆ. ಈ ಹಬ್ಬಗಳು ದೇಶದ ಎಲ್ಲ ಜನರಿಗೆ ಆರೋಗ್ಯ, ಸಂತೋಷ, ಸಂಪತ್ತನ್ನು ನೀಡಲಿ ಎಂದು ಮೋದಿ ಹೇಳಿದ್ದಾರೆ.
ಇಂದಿನಿಂದ ನವರಾತ್ರಿ ಪ್ರಾರಂಭವಾಗಿದೆ. ಮಾರಕ ಕಾಯಿಲೆ ಕರೊನಾ ವಿರುದ್ಧ ಹೋರಾಡುತ್ತ ರೋಗಿಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್​​ಗಳು, ನಾಗರಿಕರ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಪೊಲೀಸರು, ಮಾಧ್ಯಮ ಸಿಬ್ಬಂದಿಗಳ ಆರೋಗ್ಯಕ್ಕಾಗಿ, ಯಶಸ್ಸಿಗಾಗಿ ನಾನು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಆಯಾ ರಾಜ್ಯಗಳಲ್ಲಿ ಯಾವ ಹೆಸರಿನಿಂದ ಆಚರಿಸುತ್ತಾರೋ ಅದೇ ಹೆಸರನ್ನು ಉಲ್ಲೇಖಿಸಿ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿಯವರು, ಕರ್ನಾಟಕದ ಜನರಿಗೆ ಕನ್ನಡದಲ್ಲಿಯೇ ಯುಗಾದಿಯ ಶುಭಾಶಯ ತಿಳಿಸಿದ್ದಾರೆ.
ಯುಗಾದಿ ಹೊಸವರ್ಷ ಬಂದಿದೆ. ಈ ವರ್ಷ ಆಕಾಂಕ್ಷೆಗಳೆಲ್ಲ ಈಡೇರಲಿ. ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯವನ್ನು ನೀಡಿ ದೇವರು ಆಶೀರ್ವಾದ ಮಾಡಲಿ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.
ಯುಗಾದಿ ಹೊಸ ವರ್ಷ ಬಂದಿದೆ!
ಈ ವರ್ಷ ಆಕಾಂಕ್ಷೆಗಳನ್ನು ಈಡೇರಿಸಲಿ, ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ.ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯದ ಆಶಿರ್ವಾದವಿರಲಿ.
— Narendra Modi (@narendramodi)March 25, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + 14 =
Remember me
