ನವದೆಹಲಿ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ ಕೇಂದ್ರ ಬಜೆಟ್​ನಲ್ಲಿ ಉದ್ಯೋಗಿಗಳಿಗೆ ವಿಶೇಷ ಒತ್ತನ್ನು ನೀಡಲಾಗಿದೆ. ಸರ್ಕಾರದ ಒಂಬತ್ತು ಆದ್ಯತೆಗಳಲ್ಲಿ ಒಂದಾದ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಅಡಿಯಲ್ಲಿ ಎಂಪ್ಲಾಯ್ಮೆಂಟ್​ ಲಿಂಕ್ಡ್​ ಇನ್ಸೆಂಟಿವ್​ಗಾಗಿ 3 ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ.
ಮೂರು ಯೋಜನೆಗಳನ್ನು ಸ್ಕೀಮ್​ ಎ (ಹೊಸದಾಗಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟ ಉದ್ಯೋಗಿಗಳಿಗೆ), ಸ್ಕೀಮ್​-ಬಿ (ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿ) ಮತ್ತು ಸ್ಕೀಮ್​-ಸಿ (ಉದ್ಯೋಗಿಗಳಿಗೆ ಬೆಂಬಲ) ಎಂದು ವಿಂಗಡಿಸಲಾಗಿದೆ.
* ಸ್ಕೀಮ್​-ಎ:ಈ ಯೋಜನೆಯ ಪ್ರಕಾರ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಅಡಿಯಲ್ಲಿ ಮೊದಲ ಬಾರಿಗೆ ನೋಂದಾಯಿಸಲಾದ ಎಲ್ಲ ವಲಯದ ಉದ್ಯೋಗಿಗಳಿಗೆ 15,000 ರೂ. ವರೆಗೆ 3 ಕಂತುಗಳಲ್ಲಿ 1 ತಿಂಗಳ ಸಂಬಳವನ್ನು ಕೊಡಗೆ ನೀಡಲಾಗುತ್ತದೆ. ನೇರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ತಿಂಗಳಿಗೆ 1 ಲಕ್ಷ ರೂ.ವರೆಗೂ ಸಂಬಳ ಪಡೆಯುವವರಿಗೆ ಇದು ಅನ್ವಯಿಸುತ್ತದೆ. ಈ ಸ್ಕೀಮ್​ನಿಂದ 2.1 ಕೋಟಿ ಯುವಕರಿಗೆ ಲಾಭವಾಗಲಿದೆ.
* ಸ್ಕೀಮ್​-ಬಿ:ಉದ್ಯೋಗಕ್ಕೆ ಸೇರಿದ ಮೊದಲ 4 ವರ್ಷಗಳಲ್ಲಿ ಅವರ ಇಪಿಎಫ್​ಒ ​​ಕೊಡುಗೆ ಆಧಾರದ ಮೇಲೆ ಉದ್ಯೋಗಿ ಮತ್ತು ಉದ್ಯೋಗದಾತರಿಗೆ ನೇರವಾಗಿ ಪ್ರೋತ್ಸಾಹ ಒದಗಿಸಲಾಗುವುದು. ಇದರಿಂದ 30 ಲಕ್ಷ ಯುವಕರು ಮತ್ತು ಉದ್ಯೋಗದಾತರಿಗೆ ಅನುಕೂಲವಾಗಲಿದೆ.
* ಸ್ಕೀಮ್​-ಸಿ:ತಿಂಗಳಿಗೆ 1 ಲಕ್ಷ ರೂ. ಸಂಬಳದೊಳಗಿನ ಎಲ್ಲಾ ವಲಯಗಳಲ್ಲಿರುವ ಹೆಚ್ಚುವರಿ ಉದ್ಯೋಗಕ್ಕೆ 2 ವರ್ಷಗಳವರೆಗೆ ಇಪಿಎಫ್‌ಒ ಶುಲ್ಕಗಳನ್ನು ಸರಿದೂಗಿಸಲು ತಿಂಗಳಿಗೆ ರೂ 3,000 ಒದಗಿಸಲಾಗುತ್ತದೆ. ಇದು 50 ಲಕ್ಷ ಜನರಿಗೆ ಹೆಚ್ಚುವರಿ ಉದ್ಯೋಗವನ್ನು ಉತ್ತೇಜಿಸುತ್ತದೆ.
Prime Minister’s Package for employment and skilling: 3 schemes announced for ‘Employment Linked Incentive’
🔆Scheme A: First Timers🔆Scheme B: Job Creation in manufacturing🔆Scheme C: Support to employerspic.twitter.com/NYDLNjEaea
— Ministry of Finance (@FinMinIndia)July 23, 2024

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ತನ್ನ ಮೊದಲ ಪೂರ್ಣ ಬಜೆಟ್ ಮಂಡನೆಯಾಗುತ್ತಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. (ಏಜೆನ್ಸೀಸ್​)
ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೂ ಸಾಲ: ನಿರ್ಮಲಾ ಸೀತಾರಾಮನ್​ ಘೋಷಣೆ

ಭಾರತದ ಆರ್ಥಿಕ ಬೆಳವಣಿಗೆ ಉಜ್ವಲವಾಗಿದೆ; ಮಧ್ಯಮ ವರ್ಗ, ಉದ್ಯೋಗಗಳ ಮೇಲೆ ಹೆಚ್ಚಿನ ಗಮನ: ನಿರ್ಮಲಾ ಸೀತಾರಾಮನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
