ಭುವನೇಶ್ವರ್:ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ, ತಿದ್ದಿ ಬುದ್ದಿ ಹೇಳಿ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಿ ಮಾದರಿಯಾಗಬೇಕಾಗಿರುವ ಶಿಕ್ಷಕರೇ ಹಾದಿ ತಪ್ಪಿದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಈ ಪ್ರಕರಣವೇ ಜೀವಂತ ಸಾಕ್ಷಿಯಾಗಿದೆ. ಓಡಿಶಾದ ನುವಾಟಿಪಿಲೆಯ ಭುವನ್ ಬ್ಲಾಕ್‌ನ ಧೆಂಕನಲ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಸರ್ಕಾರಿ ಶಾಲೆಯ ಮುಖ್ಯ ಪ್ರಾಂಶುಪಾಲ ಸ್ಕೂಲ್​ಗೆ ಪಾನಮತ್ತನಾಗಿ ಬಂದಿದ್ದು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಪ್ರಜ್ಞಾಹೀನನಾಗಿ ಮಲಗಿದ್ದು, ವಿದ್ಯಾರ್ಥಿಗಳು ಆತನ ಮುಖಕ್ಕೆ ನೀರು ಚಿಮುಕಿಸಿ ಆತನನ್ನು ಎದ್ದೇಳಿಸಲು ಪ್ರಯತ್ನಿಸುತ್ತಾರೆ. ಬೇರೆ ಶಿಕ್ಷಕರು ತರಗತಿಯ ಹೊರಗೆ ನಿಂತಿರುವುದನ್ನ ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
#ViralVideo|#WATCH: Students of Govt UP school at Nuatipilei under Bhuban block in#Dhenkanaltry to wake a teacher up after he fell asleep in the classroom allegedly in an inebriated condition.The teacher is said to be the headmaster of the school, Rabindranath Murmu.…pic.twitter.com/7w24tBR5ZH
ಇದನ್ನೂ ಓದಿ:ದೆಹಲಿಗೂ ಬರಲಿದೆ ನಂದಿನಿ ಹಾಲು
ಕೆಲಸದ ಸಮಯದಲ್ಲಿ ಪಾನಮತ್ತನಾಗಿ ಶಾಲೆಗೆ ಬಂದ ಮುಖ್ಯ ಪ್ರಾಂಶುಪಾಲನ ಹೆಸರು ರವೀಂದ್ರನಾಥ್​ ಮುರ್ಮು ಎಂದು ಹೇಳಲಾಗಿದ್ದು, ವಿಡಿಯೋ ವೈರಲ್​ ಆಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದು, ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ಈ ಹಿಂದೆಯೂ ಕೂಡ ರವೀಂದ್ರನಾಥ್​ ಮುರ್ಮು ಅವರು ಹಲವು ಬಾರಿ ಶಾಲೆಗೆ ಈ ರೀತಿ ಪಾನಮತ್ತರಾಗಿ ಬಂದಿದ್ದು, ಅಮಾನತುಗೊಂಡಿದ್ದಾರೆ. ಇತ್ತೀಚಿಗೆ ಕೂಡ ಅಮಾನತು ಶಿಕ್ಷೆ ಮುಗಿಸಿ ಸೇವೆಗೆ ಮರಳಿದ್ದರು. ಈಗ ಮತ್ತೊಮ್ಮೆ ಈ ರೀತಿ ಮಾಡಿದ್ದು, ಅವರನ್ನು ಶಾಶ್ವತವಾಗಿ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 5 =
Remember me
