ನವದೆಹಲಿ:ಕೋಮು ಸೌಹಾರ್ದತೆ ಮರುಸ್ಥಾಪಿಸುವುದೇ ನಮ್ಮ ಮೊದಲ ಆದ್ಯತೆ ಎಂದು ದೆಹಲಿ ಪೊಲೀಸ್​ ಆಯುಕ್ತರಾದ ಎಸ್​.ಎನ್​. ಶ್ರೀವಾತ್ಸವ ಅವರು ಭಾನುವಾರ ಕರೆ ನೀಡಿದರು.
ಸಿಎಎ ಪರ-ವಿರೋಧ ಬಣದಿಂದ ಈಶಾನ್ಯ ದೆಹಲಿಯಲ್ಲಿ ಉಂಟಾದ ಗಲಭೆ ಹಿಂಸಾಚಾರಕ್ಕೆ ತಿರುಗಿ 42 ಮಂದಿ ಸಾವಿಗೀಡಾಗಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಭಾನುವಾರದಂದು ಈಶಾನ್ಯ ದೆಹಲಿಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಶಾಂತಿಯ ವಾತಾವರಣ ನೆಲೆಸಿದೆ. ಸದ್ಯ ಗಲಭೆ ಉಂಟಾದ ಪ್ರದೇಶಗಳಲ್ಲಿ ಭಾರಿ ಪೊಲೀಸ್​ ನಿಯೋಜಿಸಲಾಗಿದೆ.
ರಕ್ಷಣಾ ಸಿಬ್ಬಂದಿಗಳು ಸ್ಥಳೀಯರೊಂದಿಗೆ ಮಾತುಕತೆ ನಡೆಸುವ ಮೂಲಕ ಕೋಮು ಸೌಹಾರ್ದತೆ ಸ್ಥಾಪಿಸಲು ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಅಲ್ಲದೆ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪೊಲೀಸ್​ ಸಿಬ್ಬಂದಿ ಸ್ಥಳೀಯರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತಿದೆ.
ಶನಿವಾರ ದೆಹಲಿ ಪೊಲೀಸ್​ ಮುಖ್ಯಸ್ಥರಾಗಿ ಎಸ್​.ಎನ್​. ಶ್ರೀವಾಸ್ತವ ಅಧಿಕಾರ ಸ್ವೀಕರಿಸಿದರು. ಅಮೂಲ್ಯ ಪಟ್ನಾಯಕ್​ ಅವರು ನಿವೃತ್ತಿಯಾಗುತ್ತಿದ್ದಂತೆ ಭಾನುವಾರದಿಂದಲೇ ಜಾರಿಗೆ ಬರುವಂತೆ ಶ್ರೀವಾಸ್ತವ ಅವರಿಗೆ ಹೆಚ್ಚುವರಿ ದೆಹಲಿ ಪೊಲೀಸ್​ ಆಯುಕ್ತರಾಗಿ ಅಧಿಕಾರ ನೀಡಲಾಯಿತು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಮಾತನಾಡಿದ ಅವರು ಕೋಮು ಸೌಹಾರ್ದತೆ ಮರುಸ್ಥಾಪಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.
ಈಶಾನ್ಯ ದೆಹಲಿಯ ಜಾಫರಾಬಾದ್​, ಮೌಜ್​ಪುರ್​, ಬಾಬರ್​ಪುರ್​, ಚಾಂದ್​ ಬಾಘ್​, ಶಿವವಿಹಾರ್​, ಭಜನ್​ಪುರ, ಯಮುನಾ ವಿಹಾರ ಏರಿಯಾದಲ್ಲಿ ಗಲಭೆ ನಡೆದಿತ್ತು. ಇದರಿಂದ ಪ್ರಾಣ ಹಾನಿಯಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ಆಸ್ತಿ ಹಾನಿಯು ಆಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
