ಮಧ್ಯಪ್ರದೇಶ:ಇತ್ತೀಚೆಗಷ್ಟೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಒಮ್ಮೆ ಎಮ್ಮೆಗೆ ಹಾಗೂ ಇನ್ನೊಮ್ಮೆ ಹಸುವಿಗೆ ಡಿಕ್ಕಿ ಹೊಡೆದು ಹಾನಿಗೊಳಗಾಗಿದ್ದು ನಡೆದಿದೆ. ಇದೀಗ ಪ್ರಯಾಣಿಕರಿಂದ ತುಂಬಿದ್ದ ಬಸ್ಸೊಂದು ಕೋಣಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಸಮಾರಂಭಕ್ಕೆ ಹೋಗಿದ್ದವರು ಪ್ರಯಾಣಿಸುತ್ತಿದ್ದ ಖಾಸಗಿ ಬಸ್​ ಕೋಣವೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಜನರು ರಘೋಪುರ್ ಸಕ್ಕ ಗ್ರಾಮದಿಂದ ಸಕುಲಾಪುರಕ್ಕೆ ಮರಳುವಾಗ ಈ ಅವಘಡ ನಡೆದಿದೆ.
ಈ ಅಪಘಾತದಲ್ಲಿ 34 ಮಂದಿ ಗಾಯಗೊಂಡಿದ್ದು, ಆ ಪೈಕಿ 10 ಜನರ ಪರಿಸ್ಥಿತಿ ಗಂಭೀರವಾಗಿದೆ. ವಾಹನ ಅತಿವೇಗವಾಗಿ ಚಲಿಸುತ್ತಿದ್ದು, ಬಸ್​​ನಲ್ಲಿದ್ದವರು ನಿಧಾನವಾಗಿ ಹೋಗುವಂತೆ ಚಾಲಕನಿಗೆ ಹೇಳಿದ್ದರೂ ಆತ ಅದನ್ನು ಲೆಕ್ಕಿಸಲಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಸಲೈಹ್ ಪ್ರದೇಶದಲ್ಲಿ ಕೋಣ ಅಡ್ಡ ಬಂದಿದ್ದು, ಅದರ ಜೀವ ಉಳಿಸುವ ಸಲುವಾಗಿ ಯತ್ನಿಸಿದ್ದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೋಣಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಅಪಘಾತದ ಬಳಿಕ ಬಸ್ ಚಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

ಪುನೀತ್​ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸಂಗತಿ: ‘ಗಂಧದಗುಡಿ’ ಜೊತೆಗೇ ‘ಅಪ್ಪು ಕಪ್’ ಸಂಭ್ರಮ

ವಾಹನ ಸವಾರರಿಗೆ ವಿಶೇಷ ಸೂಚನೆ, ನಿಮ್ಮ ಜೀವಕ್ಕೆ ನೀವೇ ಹೊಣೆ: ಆಸ್ಪತ್ರೆಗಾಗಿ ಹೀಗೊಂದು ಹೊಸ ಥರದ ಫಲಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
