ಚೆನ್ನೈ:ಬರೋಬ್ಬರಿ 666 ಕೋಟಿ ರೂಪಾಯಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಖಾಸಗಿ ಕಂಟೈನರ್ ಸೋಮವಾರ (ಮೇ 06) ತಡರಾತ್ರಿ ತಮಿಳುನಾಡಿನ ಈರೋಡ್ ಬಳಿಯ ಚಿತೋಡ್​ನಲ್ಲಿ ಮಗುಚಿ ಬಿದ್ದಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.
ಖಾಸಗಿ ಲಾಜಿಸ್ಟಿಕ್ಸ್​ ಸಂಸ್ಥೆಗೆ ಸೇರಿದ ಕಂಟೈನರ್ 810 ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳನ್ನು ತುಂಬಿಕೊಂಡು ಕೊಯಮತ್ತೂರಿನಿಂದ ಸೇಲಂಗೆ ತೆರಳುತ್ತಿತ್ತು. ಸಮತುವಪುರಂ ಬಳಿಯ ತಿರುವಿನಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು, ಪಲ್ಟಿ ಹೊಡೆದು, ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಶಶಿಕುಮಾರ್ ಮತ್ತು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಬಾಲರಾಜ್ ಇಬ್ಬರಿಗೂ ಗಂಭೀರ ಗಾಯಗಳಾಗಿವೆ.
ಘಟನೆಯ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಿತ್ತೋಡ್​ ಪೊಲೀಸರು ಇಬ್ಬರನ್ನು ವಾಹನದಿಂದ ಹೊರತೆಗೆದಿದ್ದಾರೆ ಮತ್ತು ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ವಾಹನದಲ್ಲಿ ಸಂಗ್ರಹಿಸಿಟ್ಟಿದ್ದ ಚಿನ್ನಾಭರಣಗಳು ಸುರಕ್ಷಿತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಭರಣಗಳ ಮಾಲೀಕರಿಗೆ ಮಾಹಿತಿ ನೀಡಲಾಗಿದೆ.
ಜನಸಂದಣಿ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಒಂದು ವೇಳೆ ಚಿನ್ನ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದೆ ಎಂದು ಜನರಿಗೆ ತಿಳಿದಿದ್ದರೆ ಚಿನ್ನವೆಲ್ಲವನ್ನು ದೋಚಿಬಿಡುತ್ತಿದ್ದರು ಪೊಲೀಸರು ಕೂಡ ಏನೂ ಮಾಡಲು ಆಗುತ್ತಿರಲಿಲ್ಲ. ಆದರೆ, ತಡರಾತ್ರಿಯಾದ್ದರಿಂದ ಪೊಲೀಸರ ಕೆಲಸ ಸುಲಭವಾಯಿತು. ಕೂಡಲೇ ಇನ್ನೊಂದು ವಾಹನಕ್ಕೆ ಕರೆ ಮಾಡಿ ಚಿನ್ನಾಭರಣಗಳನ್ನು ವಾಹನಕ್ಕೆ ತುಂಬಿಸಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಮಂಜುಮ್ಮೇಲ್​ ಬಾಯ್ಸ್​: ಇವರೇ ನೋಡಿ ಡೇಂಜರಸ್​ ಗುಣ ಗುಹೆಯಲ್ಲಿ ಬಿದ್ದು ಬದುಕುಳಿದ ನಿಜವಾದ ಸುಭಾಷ್​!

ನಿನಗೆ ಯಾವ ಬೂಟಿನಲ್ಲಿ ಹೊಡೆಯಲಿ ಎಂದು ಕೇಳಿದ ನೆಟ್ಟಿಗನಿಗೆ ನಟಿ ರಶ್ಮಿ ಕೊಟ್ಟ ಉತ್ತರ ವೈರಲ್​!

ಗಂಡನಿಂದ ಡಿವೋರ್ಸ್ ಪಡೆಯಲು​ ಸಲಹೆ ಕೇಳಿದ ಯುವತಿಗೆ ಚಿರಂಜೀವಿ ಪುತ್ರಿ ಕೊಟ್ಟ ಉತ್ತರ ವೈರಲ್​!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:thirteen + 19 =
Remember me
