ಚೆನ್ನೈ:ಮೈಸೂರು ಮೂಲದ ಖಾಸಗಿ ಜೆಟ್ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಪತ್ತೆಹಚ್ಚಿದ ಪರಿಣಾಮವಾಗಿ ಸೂಪರ್​ ಸ್ಟಾರ್​ ರಜಿನಿಕಾಂತ್​ ಸೇರಿಂದತೆ 47 ಪ್ರಯಾಣಿಕರು ಸಂಭಾವ್ಯ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ​
ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನ ತಾಂತ್ರಿಕ ದೋಷದಿಂದ ಸುಮಾರು 2 ಗಂಟೆಗಳ ಕಾಲ ರಜಿನಿಕಾಂತ್​ ಅವರು ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು.
ಚೆನ್ನೈ ವಿಮಾನ ನಿಲ್ದಾಣದಿಂದ ಜೆಟ್​ ವಿಮಾನ ಹೊರಡಬೇಕಾಗಿತ್ತು. ಟೇಕಾಫ್​ ತಯಾರಿಗೂ ಮುನ್ನವೇ ವಿಮಾನದಲ್ಲಿನ ತಾಂತ್ರಿಕ ದೋಷವನ್ನು ಪತ್ತೆಹಚ್ಚಿ ಸಮಯಪ್ರಜ್ಞೆ ಮೆರೆದ ಇಂಜಿನಿಯರ್​ಗಳು, ಬಳಿಕ ಅದನ್ನು ಸರಿಪಡಿಸಿ ಮುಂದೆ ಆಗಬಹುದಾಗಿದ್ದ ಅನಾಹುತದಿಂದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಅನಿರೀಕ್ಷಿತ ವಿಳಂಬದಿಂದ ಕೆಲವರು ತೊಂದರೆಗೆ ಒಳಗಾದರೆ, ತಲೈವಾ ರಜಿನಿಕಾಂತ್​ ಇದೇ ಸಮಯದಲ್ಲಿ ಅಭಿಮಾನಿಗಳೊಂದಿಗೆ ಸಮಯ ಕಳೆದರು. ಈ ವೇಳೆ ಅನೇಕರು ರಜಿನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + ten =
Remember me
