ನವದೆಹಲಿ:ಬ್ಯಾಂಕುಗಳ ಖಾಸಗೀಕರಣವೂ ದೇಶದ ಕೆಲವೇ ಶ್ರೀಮಂತರಿಗೆ ಲಾಭ ಮಾಡಿ ಕೊಡುವ ಮೋದಿ ಸರ್ಕಾರದ ಮತ್ತೊಂದು ಅಜೆಂಡಾ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ಬಡವರಗೆ, ಜನ ಸಾಮಾನ್ಯರಿಗೆ ಬ್ಯಾಂಕುಗಳ ಲಾಭ ಸಿಗಲಿ ಎಂದು ದೇಶದ 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ಆದರೆ ಇಂದು ಒಂದರ ಹಿಂದೆ ಮತ್ತೊಂದು ಬ್ಯಾಂಕ್​ನ್ನು ಖಾಸಗೀಯವರ ಕೈಗೆ ಒಪ್ಪಿಸುತ್ತಿದ್ದಾರೆ ಮೋದಿ. ಅಂಬಾನಿ, ಅದಾನಿಗೆ ಅನುಕೂಲ ಮಾಡಿ ಕೊಡುವ ಯೋಜನೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರಗಳು ಯಾವಾಗಲೂ ಬಡವರ ಪರ ಇದ್ದವು, ಇದಕ್ಕಾಗಿ ಭೂ ಸುಧಾರಣೆ ಕಾಯ್ದೆ, ಉದ್ಯೋಗ ಖಾತ್ರಿ ಯೋಜನೆ, ಬ್ಯಾಂಕುಗಳ ರಾಷ್ಟ್ರೀಕರಣದಂತಹ ಯೋಜನೆ ತಂದೆವು ಎಂದು ಖರ್ಗೆ ಹೇಳಿದರು. ರಾಜ್ಯಸಭೆಯ ಶೂನ್ಯ ವೇಳೆ ಕಾಂಗ್ರೆಸ್ ಸದಸ್ಯರು, ಬ್ಯಾಂಕ್ ಮುಷ್ಕರದ ಬಗ್ಗೆ ಚರ್ಚಿಸಲು ಒತ್ತಾಯಿಸಿದವು.
ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಎಸ್​ಬಿಐ ನೇತೃತ್ವದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯುನಿಯನ್ಸ್​ ಕರೆ ನೀಡಿರುವ ಬ್ಯಾಂಕ್​ ಮುಷ್ಕರಕ್ಕೆ ರಾಷ್ಟ್ರವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಷ್ಕರದ ಎರಡನೇ ದಿನವಾದ ಇಂದು ಕೂಡ ಅನೇಕ ಬ್ಯಾಂಕುಗಳು ವಹಿವಾಟು ನಡೆಸಲಿಲ್ಲ.
ಇದನ್ನೂ ಓದಿ:ಖಾಸಗಿ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಸುಟ್ಟೇ ಹೋದ್ವು ಬಾಲಕನ ಕಾಲುಗಳು; ಪೊಲೀಸರಿಗೆ ದೂರು
ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್​ ಸಂಘಟನೆಗಳು, ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ದೆಹಲಿಯಲ್ಲಿ ರೈತರು ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯಂತೇ ನಾವು ಕೂಡ ಪ್ರತಿಭಟನೆಗೆ ಕೂರಬೇಕಾಗುತ್ತದೆ ಎಂದು ಎಚ್ಚರಿಸಿವೆ.
ಸೋಮವಾರದ ಮುಷ್ಕರದಲ್ಲಿ ಸುಮಾರು 10 ಲಕ್ಷ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಸಾರ್ವಜನಿಕವಲಯದ ಬ್ಯಾಂಕುಗಳನ್ನು ಉಳಿಸಿ, ಸಾಮಾಜಿಕ ಬ್ಯಾಂಕಿಗ್ ವ್ಯವಸ್ಥೆ ಉಳಿಸಿ, ನಾಗರಿಕರ ಉಳಿತಾಯ ಠೇವಣಿ ರಕ್ಷಿಸಿ ಎಂದು ಸ್ಲೋಗನ್​ಗಳನ್ನು ಮುಷ್ಕರನಿರತರು ಪ್ರದರ್ಶಿಸಿದ್ದಾರೆ. ಪ್ರಮುಖ ಬ್ಯಾಂಕುಗಳ ಈ ಎರಡು ದಿನದ ಮುಷ್ಕರದಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸರ್ಕಾರಕ್ಕೆ ಆದಾಯದ ಹರಿವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಲದ ಬಜೆಟ್​ನಲ್ಲಿ ಖಾಸಗೀಕರಣವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ದಿಸೆಯಲ್ಲಿ ಮತ್ತಷ್ಟು ಬ್ಯಾಂಕುಗಳನ್ನು ಹಾಗೂ ಒಂದು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವ ಮಾತನ್ನಾಡಿದ್ದಾರೆ. ಇದನ್ನು ಖಂಡಿಸಿ ಬ್ಯಾಂಕುಗಳು ದೇಶ ವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. (ಏಜೇನ್ಸಿಸ್)
ಯತ್ನಾಳ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿಯ ಮೂವರು ಶಾಸಕರು!

ಆ ಮಹಾನಾಯಕನ ವಿರುದ್ಧ ಬಿಜೆಪಿ ಕಿಡಿಕಾರಿದ ಬೆನ್ನಲ್ಲೇ ಬಿಎಸ್​ವೈಗೆ ಗುರಿಯಾಗಿಸಿದ ಕಾಂಗ್ರೆಸ್!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 4 =
Remember me
