ನವದೆಹಲಿ:ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಇತ್ತೀಚೆಗಷ್ಟೇ ಬ್ಯಾಂಕ್ ಸಿಬ್ಬಂದಿ ಎರಡು ದಿನದ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದರು. ಆದರೆ, ‘ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬೇಕೆನ್ನುವ ಮಾತುಕತೆ ಕೇಂದ್ರ ಸರ್ಕಾರದೊಂದಿಗೆ ಆರ್​ಬಿಐ ನಿರಂತರವಾಗಿ ನಡೆಸಿದೆ’ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಹೇಳಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಬ್ಯಾಂಕುಗಳನ್ನು ಖಾಸಗೀಕರಣ ಮಾಡಬೇಕು ಎನ್ನುವ ಸರ್ಕಾರದೊಂದಿಗಿನ ಚರ್ಚೆ ಆಶಾದಾಯಕ ಬೆಳವಣಿಗೆ ಸಾಧಿಸಿದೆ’ ಎಂದು ದಾಸ್ ಹೇಳಿದ್ದಾರೆ. ಸಾರ್ವಜನಿಕ ವಲಯದ ಎರಡು ಪ್ರಮುಖ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬೇಕು ಎನ್ನುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇದೆ.
ಇದನ್ನೂ ಓದಿ:ನನ್ ತಂಗಿಯ ಮೇಲೆ ಗಂಡನ ಕಣ್ಣುಬಿದ್ದಿದೆ, ಬೇರೆ ಮದ್ವೆಯಾಗಲೂ ಬಿಡುತ್ತಿಲ್ಲ- ಕಾನೂನಡಿ ಪರಿಹಾರವೇನು?
ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಖಾಸಗೀಕರಣಗೊಳ್ಳುವ ಬ್ಯಾಂಕುಗಳ ಸಿಬ್ಬಂದಿಯ ಹಿರರಕ್ಷಣೆಯನ್ನು ಖಂಡಿತವಾಗಿಯೂ ಕೇಂದ್ರ ಸರ್ಕಾರ ಮಾಡುತ್ತದೆ ಎಂದು ಹೇಳಿದ್ದರು.
ಖಾಸಗೀಕರಣಕ್ಕೆ ಒಳಗಾಗಿರುವ ಹಾಗೂ ಒಳಗಾಗುತ್ತಿರುವ ಬ್ಯಾಂಕುಗಳ ಸಿಬ್ಬಂದಿಯ ಸಂಬಳ, ಪಿಂಚಣಿ, ಸೇವಾ ಭದ್ರತೆ ಸೇರಿದಂತೆ ಇನ್ನಿತರ ಪ್ರಮುಖ ಅಗತ್ಯಗಳನ್ನು ಖಂಡಿತವಾಗಿಯೂ ನೋಡಿಕೊಳ್ಳಲಾಗುವುದು. ಈ ವಿಷಯದಲ್ಲಿ ಬ್ಯಾಂಕ್​ ನೌಕರರಿಗೆ ಯಾವುದೇ ಸಂದೇಹ ಬೇಡ ಎಂದು ಸೀತಾರಾಮನ್ ಮನವಿ ಮಾಡಿದ್ದರು.
ನಾವು ಎಲ್ಲ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೋಗುತ್ತಿಲ್ಲ. ಆರ್​ಬಿಐ ವರದಿ ಅನುಸಾರ ಕ್ರಮ ಕೈಗೊಳ್ಳುತ್ತೇವೆ. ಆದರೆ, ಬ್ಯಾಂಕ್ ನೌಕರರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. (ಏಜೇನ್ಸಿಸ್).
ನಾನು ಗೆದ್ರೆ ಚಂದ್ರನಲ್ಲಿಗೆ ಟ್ರಿಪ್‌, ಹೆಲಿಕಾಪ್ಟರ್‌-ಮೂರಂತಸ್ತಿನ ಬಂಗ್ಲೆ ಕೊಡುವೆ… ಪ್ರಣಾಳಿಕೆ ನೋಡಿ ಹುಬ್ಬೇರಿಸಿದ್ರು, ಕಾರಣ ಕೇಳಿ ಭೇಷ್ ಎಂದ್ರು!

‘ದೀದಿ ಡೆಂಗ್ಯು-ಮಲೇರಿಯಾದೊಂದಿಗೆ ಸ್ನೇಹ ಹೊಂದಿದ್ದಾರೆ’ ಎಂದ ಷಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − ten =
Remember me
