ನವದೆಹಲಿ:ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಅನ್ನು ಖಾಸಗೀಕರಣಗೊಳಿಸುವ ಯೋಜನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಪುರಿ, ಹೆಚ್ಚಿನ ಆದಾಯ ಗಳಿಸುವ ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರಾಟ ಮಾಡಬೇಕಾಗಿಲ್ಲ ಎಂದಿದ್ದಾರೆ.
“ಬಿಪಿಸಿಲ್​ ಮೊದಲ 3 ತ್ರೈಮಾಸಿಕಗಳಲ್ಲಿ ಷೇರು ಮಾರಾಟದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿದೆ” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡ ಪುರಿ ಹೇಳಿದರು. 2024ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಬಿಪಿಸಿಲ್​ ರೂ 19,000 ಕೋಟಿಗೂ ಹೆಚ್ಚು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
2023-24 ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬಿಪಿಸಿಲ್​ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ 82% ಏರಿಕೆಯನ್ನು ದಾಖಲಿಸಿ 3,181.42 ಕೋಟಿ ರೂ.ಗೆ ತಲುಪಿದೆ. 2022-23 ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು 1,747.01 ಕೋಟಿ ರೂ. ಇತ್ತು. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 1.31 ಲಕ್ಷ ಕೋಟಿ ರೂಪಾಯಿಗಳಿಂದ 2023-24ರ ಆರ್ಥಿಕ ವರ್ಷದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಕಂಪನಿಯ ಒಟ್ಟು ವೆಚ್ಚಗಳು 1.26 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿದೆ ಎಂದು ತೈಲ ಮಾರುಕಟ್ಟೆ ಕಂಪನಿ ತಿಳಿಸಿದೆ.
2023-24 ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ರೂ 4,789.57 ಕೋಟಿಗಳ ಏಕೀಕೃತ ನಿವ್ವಳ ಲಾಭವನ್ನು ಬಿಪಿಸಿಎಲ್​ ವರದಿ ಮಾಡಿದೆ. ಇದು ಕಳೆದ ವರ್ಷಕ್ಕಿಂತ 30% ನಷ್ಟು ಕುಸಿತವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದರ ಲಾಭ 6,870.47 ಕೋಟಿ ರೂ. ಇತ್ತು. ತ್ರೈಮಾಸಿಕದಲ್ಲಿ ಕಚ್ಚಾ ತೈಲ ಬೆಲೆಗಳಲ್ಲಿನ ದುರ್ಬಲ ಲಾಭ ಮತ್ತು ಚಂಚಲತೆಯ ನಡುವೆ ಕಂಪನಿಯ ಲಾಭದಲ್ಲಿ ಕುಸಿತವಾಗಿದೆ.
ಏರ್ ಇಂಡಿಯಾದ ಜತೆಗೆ ಬಿಪಿಸಿಲ್​ನ ಖಾಸಗೀಕರಣವು 2021-22ರ ಹಣಕಾಸು ವರ್ಷದಲ್ಲಿ ಎನ್​ಡಿಎ ಸರ್ಕಾರದ ಬಂಡವಾಳ ಹಿಂತೆಗೆತದ ಕಾರ್ಯಕ್ರಮವಾಗಿತ್ತು. ಇಂಡಿಯನ್ ಆಯಿಲ್ ನಂತರ ಭಾರತದ ಎರಡನೇ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿಯಾಗಿದೆ ಬಿಪಿಸಿಲ್​. ಮುಂಬೈ, ಕೊಚ್ಚಿ ಮತ್ತು ಮಧ್ಯಪ್ರದೇಶದಲ್ಲಿ ಸಂಸ್ಕರಣಾಗಾರಗಳೊಂದಿಗೆ, ರಿಲಯನ್ಸ್ ಮತ್ತು ಇಂಡಿಯನ್ ಆಯಿಲ್ ನಂತರ ಇದು ಮೂರನೇ ಅತಿದೊಡ್ಡ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ.
ಬಿಪಿಸಿಲ್​ನಲ್ಲಿ ತನ್ನ ಸಂಪೂರ್ಣ ಪಾಲನ್ನು (52.98%) ಮಾರಾಟ ಮಾಡಲು ಕೇಂದ್ರವು ಯೋಜಿಸಿತ್ತು, ಇದು ಹಣಕಾಸು ವರ್ಷ 2021-22 ರಲ್ಲಿ ಅಂದಾಜು 45,000 ಕೋಟಿ ರೂ. ಮೊತ್ತ ಆಗಿತ್ತು. ಸರ್ಕಾರವು ಮಾರ್ಚ್ 2020 ರಲ್ಲಿ ಇವುಗಳಿಗೆ ಆಸಕ್ತಿಯ ಅಭಿವ್ಯಕ್ತಿ ಅಥವಾ ಆರಂಭಿಕ ಬಿಡ್‌ಗಳನ್ನು ಆಹ್ವಾನಿಸಿದ್ದು, ಮಾರ್ಚ್ 2021 ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಯೋಜಿಸಿತ್ತು.
ಸೌದಿ ಅರಾಮ್ಕೊ, ಅಬುಧಾಬಿ ನ್ಯಾಶನಲ್ ಆಯಿಲ್ ಕಂ, ಮತ್ತು ಎಕ್ಸಾನ್ ಮೊಬಿಲ್‌ನಂತಹ ಜಾಗತಿಕ ದೈತ್ಯ ಕಂಪನಿಗಳು ಮೊದಲಿಗೆ ಬಿಪಿಸಿಲ್​ ಖರೀದಿಸಲು ಆಸಕ್ತಿ ತೋರಿಸಿದ್ದವು, ಆದರೆ, ಇವುಗಳಲ್ಲಿ ಯಾವುದೇ ಕಂಪನಿಯು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರವನ್ನು ಖರೀದಿಸಲು ಆರಂಭಿಕ ಬಿಡ್‌ಗಳನ್ನು ಸಲ್ಲಿಸಲಿಲ್ಲ.
2023-24ರಲ್ಲಿ ವಿಶೇಷ ಆರ್ಥಿಕ ವಲಯಗಳಿಂದ ರಫ್ತು 4% ಹೆಚ್ಚಳ

ಪ್ರಯಾಣಿಕ ವಾಹನಗಳ ಮಾರಾಟ ಮೇ ತಿಂಗಳಲ್ಲಿ 4% ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 6 =
Remember me
