ಮುಂಬೈ:ನಟಿ ಪ್ರಿಯಾಂಕಾ ಚೋಪ್ರಾ,  ನಿಕ್ ಜೋನಾಸ್ ತಮ್ಮ ಲಾಸ್ ಏಂಜಲೀಸ್ ಮನೆಯಿಂದ ಹೊರಬಂದಿದ್ದಾರೆ. 166 ಕೋಟಿ ರೂ. ಬೆಲೆಬಾಳುವ ಮನೆ ನೀರು ಸೋರುತ್ತಿದೆ ಎಂದು ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಈ ಜೋಡಿಯ ಲಾಸ್ ಏಂಜಲೀಸ್‌ನಲ್ಲಿರುವ ಬರೋಬ್ಬರಿ 166 ಕೋಟಿ ರುಪಾಯಿ ಮೌಲ್ಯದ ಮನೆಯಲ್ಲಿ ಕೂಡಾ ಈ ನೀರು ಸೋರೋ, ಬೂಸ್ಟ್ ಹಿಡಿಯೋ ಸಮಸ್ಯೆ ತಲೆ ಚಿಟ್ಟು ಹಿಡಿಸಿದೆಯಂತೆ. ಎಷ್ಟರ ಮಟ್ಟಿಗೆ ಅಂದ್ರೆ ಇವರಿಬ್ರೂ ಮನೆಯಿಂದನೇ ಹೊರ ಬರೋ ಲೆವೆಲ್ಗೆ. ಈದೀಗ ಈ ಜೋಡಿ ಮನೆ ಸೋರುತ್ತಿರುವ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಮೇ 2023ರಲ್ಲಿ  ಪೂಲ್ ಮತ್ತು ಸ್ಪಾಗೆ ಸಂಬಂಧಿಸಿದ ಸಮಸ್ಯೆಗಳು ಏಪ್ರಿಲ್ 2020 ರ ಸುಮಾರಿಗೆ ಪ್ರಾರಂಭವಾಯಿತು. ನೀರು ಸೋರುವ ಸಮಸ್ಯೆ ಇದೆ. ಇದು ಪಾಚಿ ಬೆಳೆಯಲು ಕಾರಣವಾಯಿತು ಮತ್ತು ಇತರ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಿತು. ಡೆಕ್‌ನಲ್ಲಿರುವ ಬಾರ್ಬೆಕ್ಯೂ ಪ್ರದೇಶದಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿತು. ಈ ಸೋರಿಕೆಯು ಡೆಕ್‌ನ ಕೆಳಗಿರುವ ಆಂತರಿಕ ವಾಸದ ಪ್ರದೇಶದ ಒಂದು ಭಾಗವನ್ನು ಹಾನಿಗೊಳಿಸಿತು. ಇದರಿಂದ ಈ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ.
ನೀರು ಸೋರುವ ಸಮಸ್ಯೆ ಸರಿಪಡಿಸಲು ಏನಿಲ್ಲ ಎಂದರೂ 12 ಕೋಟಿ ರೂ. ಬೆೇಕಾಗುತ್ತದೆ. ಆಗಿರುವ ಹಾನಿ ಸರಿಪಡಿಸಲು 20 ಕೋಟಿ ರೂ.ಗೂ ಹೆಚ್ಚು ಖರ್ಚಾಗುತ್ತದೆ ಎಂದು ವಿವರಿಸಲಾಗಿದೆ. ಮನೆಯನ್ನು ತಮಗೆ ಮಾರಿದವರ ವಿರುದ್ಧ ಈ ಕೇಸ್ ಫೈಲ್ ಮಾಡಲಾಗಿದೆ.
ಮೊಕದ್ದಮೆಯು ಹೀಗೆ ಹೇಳುತ್ತದೆ, “ಇದು ವೈಫಲ್ಯದ ಜತೆಗೆ ಗಣನೀಯ ಮತ್ತು ಗಮನಾರ್ಹವಾದ ಹಾನಿಯನ್ನುಂಟುಮಾಡಿದೆ, ಇದು ಖರೀದಿ ಮತ್ತು ಮಾರಾಟವನ್ನು ರದ್ದುಗೊಳಿಸಬೇಕಾದ ಅಗತ್ಯವಿರುತ್ತದೆ. ಪರ್ಯಾಯವಾಗಿ, ಫಿರ್ಯಾದಿಯು ಎಲ್ಲಾ ದುರಸ್ತಿ ವೆಚ್ಚಗಳಿಗೆ ಮರುಪಾವತಿ ಮಾಡಬೇಕು ಮತ್ತು ನಷ್ಟಕ್ಕೆ ಪರಿಹಾರವನ್ನು ನೀಡಬೇಕು.
ವಿದ್ಯುತ್ ಶಾಕ್ ನೀಡಿ ಕುಡಿತದ ಚಟ ಬಿಡಿಸ್ತಾರೆ!; ನಂತ್ರ ಒಂದು ಪೆಗ್ ಹಾಕೋಕು ಭಯವಾಗುತ್ತೆ..


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
