ಬೆಂಗಳೂರು: “ಎವೆರಿ ಡಾಗ್ ಹ್ಯಾಸ್​ ಇಟ್ಸ್​ ಡೇ..” ಎಂಬ ಮಾತು ಎಲ್ಲ ನಾಯಿಗಳ ವಿಷಯದಲ್ಲೂ ನಿಜವಾಗುತ್ತದೋ ಇಲ್ಲವೋ, ಖಚಿತವಾಗಿ ಹೇಳಲಾಗದು. ಆದರೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಸಾಕುನಾಯಿಯ ವಿಷಯದಲ್ಲಂತೂ ಇದು ಅಕ್ಷರಶಃ ನಿಜವಾಗಿದೆ.
ನೆಚ್ಚಿನ ಸಿನಿಮಾ ತಾರೆಯರ ಜತೆ ಒಂದು ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬೀಳುತ್ತಾರೆ. ಅವರೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳಲು ಹರಸಾಹಸ ಪಡುತ್ತಿರುತ್ತಾರೆ. ಅಂಥದ್ದೊಂದು ಅವಕಾಶಕ್ಕಾಗಿ ಅದೆಷ್ಟೋ ಮಂದಿ ಕಾಯುತ್ತಿರುತ್ತಾರೆ. ಇನ್ನು ದೊಡ್ಡ ಸ್ಟಾರ್ ನಟ-ನಟಿಯರೊಂದಿಗೆ ಕೋ-ಆರ್ಟಿಸ್ಟ್​ ಅಥವಾ ಕೋ-ವರ್ಕರ್ ಆಗಿ ಕಾಣಿಸಿಕೊಳ್ಳಬೇಕು ಎಂದುಕೊಂಡವರಿಗೇನೂ ಕಡಿಮೆ ಇಲ್ಲ. ಆದರೆ ಅಂಥವರೆಲ್ಲರ ಹೊಟ್ಟೆ ಉರಿಸುವಂಥ ಅವಕಾಶ ಡಯಾನಾದ್ದಾಗಿದೆ.
ಅಂದಹಾಗೆ ಡಯಾನಾ ಎಂಬುದು ನಟಿ ಪ್ರಿಯಾಂಕಾ ಚೋಪ್ರಾ ಅವರ ನಾಯಿಯ ಹೆಸರು. ಡಯಾನಾ ಜತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಪ್ರಿಯಾಂಕಾ, ತಮ್ಮ ನಾಯಿಯನ್ನು ಉಲ್ಲೇಖಿಸಿ “ಮೈ ಫೇವರಿಟ್​ ಕೋ-ವರ್ಕರ್” ಎಂಬ ಕ್ಯಾಪ್ಷನ್​ನೊಂದಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ಪೋಸ್ಟ್ ಹಾಕಿದ ಸುಮಾರು ಒಂದು ಗಂಟೆಯಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.
https://www.instagram.com/p/CGXNEnvD5mT/?utm_source=ig_web_copy_link
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + twelve =
Remember me
