ನ್ಯೂಯಾರ್ಕ್​:ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸಿನಿಮಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾಗಿದೆ. ಇದೀಗ ಹೊಸದೊಂದು ಸಾಹಸಕ್ಕೆ ಕೈ ಹಾಕಿರುವ ಪ್ರಿಯಾಂಕಾ ದೂರದ ನ್ಯೂಯಾರ್ಕ್​ನಲ್ಲೂ ಭಾರತದ ಹೆಸರನ್ನು ಬೆಳಗಿಸಲು ಹೊರಟಿದ್ದಾರೆ.
ಹೌದು. ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್​ನಲ್ಲಿ ಇಂಡಿಯನ್​ ರೆಸ್ಟೋರೆಂಟ್​ ಒಂದನ್ನು ತೆರೆದಿದ್ದಾರೆ. ಸೋನಾ ಹೆಸರಿನ ರೆಸ್ಟೋರೆಂಟ್​ನಲ್ಲಿ ಭಾರತದ ವಿಶೇಷ ಖಾದ್ಯಗಳನ್ನು ಜನರಿಗೆ ಉಣಬಡಿಸಲು ಸಿದ್ಧರಾಗಿದ್ದಾರೆ. ಸೋನಾ ರೆಸ್ಟೋರೆಂಟ್​ನ ವೆಬ್​ಸೈಟ್​ ಮತ್ತು ಇನ್​ಸ್ಟಾಗ್ರಾಂ ಖಾತೆಯನ್ನು ಶುಭ ಶುಕ್ರವಾರದಂದು ಆರಂಭಿಸಲಾಗಿದೆ.
ಪ್ರಿಯಾಂಕಾ ಅವರು ತಮ್ಮ ಸೋನಾ ರೆಸ್ಟೋರೆಂಟ್​ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನ್ಯೂಯಾರ್ಕ್​ನಲ್ಲಿ ಹೃದಯ ಭಾಗದಲ್ಲಿ ರೆಸ್ಟೋರೆಂಟ್​ ತೆರೆದಿದ್ದೇವೆ. ಖ್ಯಾತ ಚೆಫ್​ ಹರಿನಾಯಕ್​ ರೆಸ್ಟೋರೆಂಟ್​ನ ಕಿಚನ್​ನಲ್ಲಿ ತರೇವಾರಿ ಅಡುಗೆ ಮಾಡಲಿದ್ದಾರೆ. ಖಾಸಗಿತನ ಬಯಸುವವರಿಗಾಗಿ ಮಿಮಿ ಹೆಸರಿನ ಪ್ರೈವೇಟ್​ ರೂಮನ್ನೂ ನಿರ್ಮಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಅಲ್ಲಿ ತಯಾರಿಸಲಾಗುವ ಕೆಲ ಖಾದ್ಯಗಳ ಫೋಟೋಗಳನ್ನೂ ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

A post shared by SONA (@sonanewyork)

ಹುಟ್ಟಿಸಿದ್ದು ತಾಯಿಯೇ ಆದರೂ ಲಿಂಗ ನೀಡುವುದು ಮರಳು! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

VIDEO| ‘ಮನೆಗೆ ಬಾ ನೋಡ್ಕೋತೀನಿ’ ಮುಂದುವರಿದ ಭಾಗ ರಿಲೀಸ್​! ಮನೆಗೆ ಬಂದ್ಮೇಲೆ ಹೀಗೆ ಮಾಡ್ತಾರಂತೆ ಜೆನೆಲಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 1 =
Remember me
