
ಮುಂಬೈ:ಬಾಲಿವುಡ್​ ನಟಿ, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರ ಫೋಟೋ ಅಂದಾಕ್ಷಣ ಕಣ್ತುಬಿಂಕೊಳ್ಳಲು ಪಡ್ಡೆ ಹುಡುಗರ ಹಾದಿಯಾಗಿ ಅವರ ಅಭಿಮಾನಿಗಳಲ್ಲಿ ಕಾತರ ತುಸು ಹೆಚ್ಚು. ಸಖತ್ ಹಾಟ್​ ಲುಕ್​ನಲ್ಲಿ ಕಾಣಿಸಿಕೊಳ್ಳುವ ಪಿಗ್ಗಿ ಫೋಟೋಗೆ ಲಕ್ಷಾಂತರ ಲೈಕ್ಸ್​, ಕಮೆಂಟ್​ಗಳ ಸುರಿಮಳೆಯೇ ಬರಲಿದೆ. ಕೆಲವೊಮ್ಮೆ ಸಿಕ್ಕಾಪಟ್ಟೆ ಹಾಟ್​ ಆಗಿ ಮಿಂಚುವ ಪಿಗ್ಗಿ ಕಂಡು ಅವರ ಅಭಿಮಾನಿಗಳು ‘ಹಾಕಲು ಬಟ್ಟೆ ಇಲ್ಲವೇ..?’ ಎಂದು ಟೀಕಿಸಿದ್ದೂ ಉಂಟು. ಆದರೀಗ ಇದಕ್ಕೆ ತದ್ವಿರುದ್ಧ ಎಂಬಂತೆ ಮೂರು ಫೋಟೋವನ್ನುಪ್ರಿಯಾಂಕ ತನ್ನ ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್​ ಮಾಡಿಕೊಂಡಿದ್ದು, ಸಖತ್​ ವೈರಲ್​ ಆಗುತ್ತಿದೆ. ‘ಮುದ್ದು ರಾಜಕುಮಾರಿ, ಪುಟ್ಟ ರಾಜಕುಮಾರಿ’ ಎಂದೆಲ್ಲ ಕಮೆಂಟ್ಸ್ ಬರುತ್ತಿವೆ.
ಅರೇ! ಇದೇನಿದು, ಪಿಗ್ಗಿ ಯಾವಾಗ “ರಾಜಕುಮಾರಿ” ಆದಳು. “ರಾಣಿ” ಅಂದರೆ ಒಪ್ಪಬಹುದಪ್ಪ… ವಿದೇಶಿ ಗಾಯಕ ನಿಕ್ ಜೋನಸ್‌ ಜತೆ ಸಪ್ತಪದಿ ತುಳಿದು ಎರಡು ವರ್ಷವಾಯ್ತ ಬಂತು. ಮತ್ತೇಕೆ “ಪುಟ್ಟ ರಾಜಕುಮಾರಿ” ಅನ್ನೋದು… ಎಂಬ ಕುತೂಹಲಕಾರಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡುವುದು ಸಹಜ. ಅದೆಕ್ಕೆಲ್ಲ ಉತ್ತರ ಇಲ್ಲಿದೆ.
ಇದನ್ನೂ ಓದಿಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್ ವರ್ಕೌಟ್​ ನೋಡಿದ್ರೆ, ನೀವು ಖಂಡಿತ ದಂಗಾಗ್ತಿರಾ!
ಹೌದು, ಪಡ್ಡೆ ಹುಡುಗರ ಹಾಟ್​ ಫೇವರಿಟ್​ ಹೀರೋಹಿನ್​ ಪಿಗ್ಗಿ ಈ ಭಾರಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅದೂ ಪುಟ್ಟ ಬಾಲೆಯೊಬ್ಬಳ ಕೈಚಳಕದಲ್ಲಿ. ಆ ಮಗು ಬೇರೆ ಯಾರೂ ಅಲ್ಲ ಪಿಗ್ಗಿಯ ಸೋದರ ಸಂಬಂಧಿಯ ಮಗಳು ‘ಸ್ಕೈ ಕೃಷ್ಣಾ’. ಅಂದಹಾಗೆ ಆ ಮಗು ಪಿಗ್ಗಿಗೆ ಮಾಡಿದ್ದಾದರು ಏನು ಗೊತ್ತಾ? …ಮೇಕಪ್ !

ಲಾಸ್ ಏಂಜಲೀಸ್‌ನಲ್ಲಿ ಪತಿ ನಿಕ್ ಜೋನಸ್ ಜತೆ ಒಂದು ತಿಂಗಳಿಗೂ ಹೆಚ್ಚು ಕಾಲ ಇದ್ದ ಪ್ರಿಯಾಂಕಾ, ಸದ್ಯ ಸ್ಕೈ ಕೃಷ್ಣಾಳ ಜತೆ ಆಟವಾಡುತ್ತ ಕರೊನಾ ಲಾಕ್​ಡೌನ್​ ಸಮಯ ಕಳೆಯುತ್ತಿದ್ದಾರೆ. ಮುದ್ದುಮುದ್ದು ಮಾತಿನ ಲಹರಿ ಜತೆಗೆ ಆಕೆಯ ಪುಟ್ಟ ಕೈಗಳು ತನ್ನ ಮುಖದ ಮೇಲೆ ಅಲಂಕಾರ ಮಾಡುವಲ್ಲಿ ಬಿಜಿಯಾಗಿದ್ದ ಸಮಯವನ್ನು ಪಿಗ್ಗಿ ಎಂಜಾಯ್​ ಮಾಡಿದ್ದಾರೆ. ಪ್ರೀತಿಯ ಪಿಗ್ಗಿ ಮುಖಕ್ಕೆ ಮೇಕಪ್​ ಮಾಡಿದ ಕೃಷ್ಣಾ ಕೂಡ ಸಖತ್​ ಖುಷಿಯಾಗಿದ್ದಾಳೆ.

ಆ ಕ್ಷಣದ ಮೂರು ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಪಿಗ್ಗಿ, “First Monday in May. This year’s theme: Pretty Pretty Princess. Glam and creative direction by: @sky.krishna – @divya_jyoti.” ಎಂದು ಬರೆದುಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಪ್ರಿಯಾಂಕಾಳ ತಲೆಗೆ ಸ್ಕೈ ಕೃಷ್ಣಾಳು ರಾಜಕುಮಾರಿಯ ಕಿರೀಟ ಇಡುತ್ತಿದ್ದು, ಮಿಸ್ ವರ್ಲ್ಡ್ ಸ್ಪರ್ಧೆ ವಿಜೇತಳಂತೆ ಪಿಗ್ಗಿ ಆಶ್ಚರ್ಯ ಭರಿತ ನಗೆ ಬೀರುತ್ತಿದ್ದಾಳೆ. ಎರಡನೇ ಚಿತ್ರದಲ್ಲಿ ಅತ್ತೆಯ ಕಣ್ಣಿನರೆಪ್ಪೆ ಮೇಲೆ ಕೃಷ್ಣಾ ಸಿಂಗರಿಸುತ್ತಿದ್ದಾಳೆ. ಇನ್ನು ಮೂರನೇ ಚಿತ್ರದಲ್ಲಿ ಮೇಕಪ್​ ಕೊನೇ ಹಂತಕ್ಕೆ ಬಂದಿದ್ದು, ಪ್ರಿಯಾಂಕಾ ಕ್ಯಾಮರಾಗೆ ಕೊಟ್ಟ ಫೋಸ್​ನಲ್ಲಿ ಲಿಪ್​ಸ್ಟಿಕ್​ ಮತ್ತು ಕಾಜಲ್ ಹೈಲೆಟ್​ ಆಗಿದೆ. ಈ ಫೋಟೋಗಳನ್ನು ಪೋಸ್ಟ್‌ ಮಾಡಿದ ಎರಡು ಗಂಟೆಯಲ್ಲೇ 6,38,000ಕ್ಕೂ ಹೆಚ್ಚು ಜನರು ‘ಲೈಕ್​’ ಮಾಡಿದ್ದಾರೆ.(ಏಜೆನ್ಸೀಸ್​)

https://www.instagram.com/p/B_yUHIrj9zQ/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
