ಹೈದರಾಬಾದ್​:ಟೀಸರ್​ ರಿಲೀಸ್​ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕರು ನಾಯಕಿಗೆ ಮುತ್ತಿಟ್ಟಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ನಿರ್ದೇಶಕ ಎ.ಎಸ್​. ರವಿಕುಮಾರ್​ ಚೌಧರಿ ಪ್ರಿಯಾಂಕ ಚೋಪ್ರಾ ಅವರ ಸಹೋದರ ಸಂಬಂಧಿ ಮನ್ನಾರ ಚೋಪ್ರಾ ಅವರಿಗೆ ಮುತ್ತಿಡುವ ಮೂಲಕ ಸುದ್ದಿಯಲ್ಲಿದ್ದಾರೆ.
Tiragabadara Saami ಚಿತ್ರದ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನಿರ್ದೇಶಕನ ನಡೆ ಸಾಕಷ್ಟು ಖಂಡನೆಗೆ ಗುರಿಯಾಗಿದೆ.
ಇದನ್ನೂ ಓದಿ:ಇಸ್ರೋ ವಿಜ್ಞಾನಿ ಕಾರಿಗೆ ಕಲ್ಲೆಸೆತ, ಹಲ್ಲೆಗೆ ಯತ್ನ
ಚಿತ್ರದ ಟೀಸರ್ ಬಿಡುಗಡೆ ಬಳಿಕ ಕ್ಯಾಮರಾಗಳಿಗೆ ಪೋಸ್​ ನೀಡುತ್ತಿದ್ದ ಮನ್ನಾರ ಚೋಪ್ರಾ ಅವರ ಜೊತೆ ಬಂದು ನಿಲ್ಲುವ ನಿರ್ದೇಶಕ ರವಿ ಏಕಾಏಕಿ ಅವರ ಕೆನ್ನೆಗೆ ಮುತ್ತಿಡುತ್ತಾರೆ. ಈ ವೇಳೆ ನಟಿ ಒಂದು ಕ್ಷಣ ವಿಚಲಿತರಾದಂತೆ ಕಂಡರು ಅದನ್ನು ಅವರು ತೋರಿಸದೆ ಕ್ಯಾಮರಾಗಳಿಗೆ ಪೋಸ್​ ನೀಡುತ್ತಾರೆ. ನಿರ್ದೇಶಕರಾದವರು ವೃತ್ತಿ ಪರಧಿಯ ಎಲ್ಲೆ ಮೀರಬಾರದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರ ವಿಮರ್ಶಕರೊಬ್ಬರು ವೃತ್ತಿಪರ ಕ್ಷೇತ್ರಗಳಲ್ಲಿ ಇಂತಹ ನಡವಳಿಕೆಗೆ ಯಾವುದೇ ಸ್ಥಾನವಿಲ್ಲ. ಚಿತ್ರದ ಪ್ರಮೋಷನ್​ ಸಲುವಾಗಿ ಅಥವಾ ಟೀಸರ್​ ಹೆಚ್ಚು ವೀಕ್ಷಣೆಗೆ ಒಳಪಡಲಿ ಎಂದು ಈ ರೀತಿ ಮಾಡುವುದು ಕೀಳು ಮಟ್ಟದ ಪ್ರಚಾರಕ್ಕೆ ಸಾಕ್ಷಿಯಾಗಿದೆ. ಈ ರೀತಿ ಮಾಡುವುದರಿಂದ ಚಿತ್ರರಂಗದ ಮೇಲಿನ ನಕಾರಾತ್ಮಕ ಭಾವನೆ ಹೆಚ್ಚಾಗುತ್ತಲೇ ಹೋಗುತ್ತದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
