ನವದೆಹಲಿ :ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್​ ವಾಡ್ರಗೆ ಕರೊನಾ ಸೋಂಕು ದೃಢಪಟ್ಟಿದ್ದು, ಪತಿಯಂತೆ ತಾವೂ ಸೆಲ್ಫ್ ಐಸೊಲೇಷನ್​ನಲ್ಲಿರುವುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಸಾಂ, ತಮಿಳುನಾಡು ಮತ್ತು ಕೇರಳಕ್ಕೆ ಚುನಾವಣಾ ಪ್ರಚಾರಕ್ಕಾಗಿ ತೆರಳಬೇಕಿದ್ದ ಪ್ರಿಯಾಂಕಾ, ತಮ್ಮ ಪ್ರವಾಸವನ್ನು ರದ್ದು ಮಾಡಿದ್ದಾರೆ.
ವಾಣಿಜ್ಯೋದ್ಯಮಿಯಾದ ವಾಡ್ರ ಅವರು, ಕರೊನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದ್ದರೂ, ತಾವು ಈವರೆಗೆ ಏಸಿಂಪ್ಟೊಮಾಟಿಕ್ ಆಗಿರುವುದಾಗಿ ಫೇಸ್​ಬುಕ್​ನಲ್ಲಿ ತಿಳಿಸಿದ್ದಾರೆ. ಪ್ರಿಯಾಂಕಾ ಅವರು ಈ ಬಗ್ಗೆ ಟ್ವಿಟರ್​ನಲ್ಲಿ ವೀಡಿಯೋ ಸಂದೇಶ ಪೋಸ್ಟ್ ಮಾಡಿದ್ದಾರೆ. ನಿನ್ನೆ ತಮ್ಮ ಕರೊನಾ ಪರೀಕ್ಷಾ ಫಲಿತಾಂಶ ನೆಗೆಟೀವ್ ಬಂದಿದೆ. ಆದಾಗ್ಯೂ ವೈದ್ಯರ ಸಲಹೆಯ ಮೇರೆಗೆ ಕೆಲವು ದಿನಗಳು ತಮ್ಮ ದೆಹಲಿ ನಿವಾಸದಲ್ಲಿ ಸೆಲ್ಫ್​ ಐಸೊಲೇಟ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
हाल में कोरोना संक्रमण के संपर्क में आने के चलते मुझे अपना असम दौरा रद्द करना पड़ रहा है। मेरी कल की रिपोर्ट नेगेटिव आई है मगर डॉक्टरों की सलाह पर मैं अगले कुछ दिनों तक आइसोलेशन में रहूँगी। इस असुविधा के लिए मैं आप सभी से क्षमाप्रार्थी हूँ। मैं कांग्रेस विजय की प्रार्थना करती हूँpic.twitter.com/B1PlDyR8rc— Priyanka Gandhi Vadra (@priyankagandhi)April 2, 2021
हाल में कोरोना संक्रमण के संपर्क में आने के चलते मुझे अपना असम दौरा रद्द करना पड़ रहा है। मेरी कल की रिपोर्ट नेगेटिव आई है मगर डॉक्टरों की सलाह पर मैं अगले कुछ दिनों तक आइसोलेशन में रहूँगी। इस असुविधा के लिए मैं आप सभी से क्षमाप्रार्थी हूँ। मैं कांग्रेस विजय की प्रार्थना करती हूँpic.twitter.com/B1PlDyR8rc

“ಇಂದು ಅಸ್ಸಾಂಗೆ, ನಾಳೆ ತಮಿಳುನಾಡಿಗೆ ಮತ್ತು ಭಾನುವಾರ ಕೇರಳಕ್ಕೆ ಪ್ರಯಾಣ ಮಾಡಿ ಕಾಂಗ್ರೆಸ್ ಪರ ಪ್ರಚಾರ ಸಭೆಗಳಲ್ಲಿ ಭಾಗವಹಿಸುವ ಯೋಜನೆಯಿತ್ತು. ಆದರೆ ಕರೊನಾಗೆ ಎಕ್ಸ್​ಪೋಸ್​ ಆಗಿರುವ ಕಾರಣದಿಂದಾಗಿ ನಾನು ಅಲ್ಲಿಗೆ ಬರಲು ಆಗುತ್ತಿಲ್ಲ” ಎಂದು ಪ್ರಿಯಾಂಕಾ ಕ್ಷಮೆ ಕೋರಿದ್ದಾರೆ. ಜೊತೆಗೆ, “ನಾನು ಕ್ಯಾಂಪೇನ್ ಮಾಡಬೇಕಿದ್ದ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಹಾಗೂ ಕಾಂಗ್ರೆಸ್ ಜಯಶೀಲವಾಗಲಿ ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ.(ಏಜೆನ್ಸೀಸ್)
ದಾವೂದ್ ಭಂಟ ದಾನಿಶ್​ ಚಿಕ್ನಾ ಬಂಧನ
ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ
ಕರೊನಾ ಕಟ್ಟೆಚ್ಚರದಲ್ಲಿ ಕುಂಭ ಮೇಳ : ಹರಿದ್ವಾರದಲ್ಲಿ ಇಂದಿನಿಂದ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
