ನವದೆಹಲಿ:ತಮಗೆ ಕೊಟ್ಟಿದ್ದ ಎಸ್​ಪಿಜಿ ಭದ್ರತೆಯನ್ನು Z+ ಭದ್ರತೆಗೆ ಇಳಿಸಿರುವುದರಿಂದ, ನವದೆಹಲಿಯ ಲೋಧಿ ರಸ್ತೆಯಲ್ಲಿ ತಮಗೆ ಕೊಡಲಾಗಿರುವ ಲುಟಯೆನ್ಸ್​ ಬಂಗ್ಲೆಯನ್ನು ತೆರವುಗೊಳಿಸಿ ಎಂದು ಕೇಂದ್ರ ಸರ್ಕಾರ ನೋಟಿಸ್​ ಕೊಟ್ಟ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಾಕಿವುಳಿಸಿಕೊಂಡಿದ್ದ ಬಂಗ್ಲೆಯ ಬಾಡಿಗೆ ಮತ್ತಿತರ ಖರ್ಚುವೆಚ್ಚಗಳನ್ನು ಪಾವತಿಸಿದ್ದಾರೆ.
ಇದಕ್ಕೂ ಮುನ್ನ ಬಾಡಿಗೆ ಮತ್ತಿತರ ಖರ್ಚುವೆಚ್ಚಗಳು ಸೇರಿ ಒಟ್ಟು 3.46 ಲಕ್ಷ ರೂಪಾಯಿ ಬಾಕಿ ಇದೆ. ಆಗಸ್ಟ್​ 1ರೊಳಗೆ ಬಂಗ್ಲೆಯನ್ನು ತೆರವುಗೊಳಿಸುವ ಮುನ್ನ ಬಾಕಿಯನ್ನು ಚುಕ್ತಾ ಮಾಡುವಂತೆ ನೋಟಿಸ್​ನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ:‘ಮಾಯಾವತಿಯವರು ಬಿಜೆಪಿಯ ವಕ್ತಾರರಾಗಿ ಬದಲಾಗುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ ಪ್ರಿಯಾಂಕಾ ಗಾಂಧಿ’
ಪ್ರಿಯಾಂಕಾ ಅವರಿಗೆ ಒದಗಿಸಲಾಗಿದ್ದ ವೈಯಕ್ತಿಕ ಭದ್ರತೆಯನ್ನು Z+ ದರ್ಜೆಗೆ ಇಳಿಸಿ, ದೇಶಾದ್ಯಂತ ಸಿಆರ್​ಪಿಎಫ್​ ಯೋಧರ ಭದ್ರತೆಯನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಅವರು 6B ಮಾದರಿಯ ಲುಟಯೆನ್ಸ್​ ಬಂಗ್ಲೆಯನ್ನು ಪಡೆದುಕೊಳ್ಳಲು ಅವರು ಅರ್ಹರಿಲ್ಲ. ಹಾಗಾಗಿ ಸರ್ಕಾರಿ ಬಂಗ್ಲೆಯನ್ನು ತೆರವುಗೊಳಿಸುವಂತೆ ಸೂಚಿಸಿರುವುದಾಗಿ ಕೇಂದ್ರ ವಸತಿ ಮತ್ತು ನಗರಾಡಳಿತ ವ್ಯವಹಾರಗಳ ಸಚಿವಾಲಯ ಹೇಳಿತ್ತು.
ನೋಟಿಸ್​ ಅನ್ವಯ ಪ್ರಿಯಾಂಕಾ ಗಾಂಧಿ ವಾದ್ರಾ ಲುಟಯೆನ್ಸ್​ ಬಂಗ್ಲೆಯನ್ನು ಆಗಸ್ಟ್​ 1ರೊಳಗೆ ತೆರವುಗೊಳಿಸದಿದ್ದರೆ ಅವರು ನಿಯಮಾನುಸಾರ ಜುಲ್ಮಾನೆ ರೂಪದಲ್ಲಿ ಹೆಚ್ಚುವರಿ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.
ವಿಶ್ವಸಂಸ್ಥೆಯಲ್ಲಿ ಕರಾಚಿ ದಾಳಿ ಪ್ರಸ್ತಾಪಿಸಲು ಪಾಕ್​, ಚೀನಾ ಹುನ್ನಾರ; ಅಮೆರಿಕ ತೊಡರುಗಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
