ಗೌಹಾಟಿ:ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಪುಶ್​ಅಪ್ಸ್​ ಮಾಡಿ ತಮ್ಮ ಫಿಟ್​ನೆಸ್​ ಸಾಬೀತು ಮಾಡಿದ್ದಾಯಿತು. ಈಗ ಸೋದರಿ ಪ್ರಿಯಾಂಕಾ ಗಾಂಧಿ ಸರದಿ! ಅಸ್ಸಾಂ ರಾಜ್ಯದಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಓಡಿಕೊಂಡು ತಲುಪಿದ ಪ್ರಿಯಾಂಕಾರ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಸ್ಸಾಂನಲ್ಲಿ ಕಳೆದ ಬಾರಿ ತಪ್ಪಿಹೋದ ಆಡಳಿತದ ಬಸ್ಸನ್ನು ಈ ಬಾರಿ ಹಿಡಿಯಲು ಕಾಂಗ್ರೆಸ್ ಭಾರೀ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ಸಮಯದೊಂದಿಗೆ ರೇಸ್ ಮಾಡಲು ತಯಾರಾಗಿದ್ದಾರೆ!ಅಸ್ಸಾಂನಲ್ಲಿ ಅವರ ಶೆಡ್ಯೂಲ್ ತುಂಬಾ ಟೈಟಾಗಿದ್ದು, ತೇಜಪುರದಲ್ಲಿ ಮಂಗಳವಾರ ನಿಗದಿಯಾಗಿದ್ದ ಸಾರ್ವಜನಿಕ ಸಭೆಯೊಂದಕ್ಕೆ ತಡವಾಗುತ್ತಿತ್ತು ಎನ್ನಲಾಗಿದೆ. ಆಗ ಬೇಗ ವೇದಿಕೆ ತಲುಪಲು, ಸೀರೆಯುಟ್ಟ ಪ್ರಿಯಾಂಕಾ, ಕ್ರೀಡಾಪಟುವಿನಂತೆ ಸ್ಪ್ರಿಂಟ್ ಮಾಡಿದ್ದಾರೆ!
ಇದನ್ನೂ ಓದಿ:ವಿದ್ಯಾರ್ಥಿನಿಯೊಂದಿಗೆ ಪುಶ್​ಅಪ್​ ಚಾಲೆಂಜ್​ನಲ್ಲಿ ರಾಹುಲ್​ ಗಾಂಧಿ! ಫಿಟ್​ ರಾಹುಲ್​ ಅದೆಷ್ಟು ಫಾಸ್ಟ್​ ಆಗಿದ್ದಾರೆ ನೋಡಿ..
ವೇದಿಕೆ ಕಡೆಗೆ ಪ್ರಿಯಾಂಕಾ ಓಡುತ್ತಿರುವಂತೆಯೇ, ಅವರ ಅಂಗರಕ್ಷಕರು ಮತ್ತು ಇತರ ಕಾರ್ಯಕರ್ತರು ಅವರೊಂದಿಗೆ ಓಡಿದ್ದಾರೆ. ನಂತರ ತಮ್ಮನ್ನು ನೋಡಿ ಸಂತೋಷ ವ್ಯಕ್ತಪಡಿಸಿದ ಜನರಿಗೆ ಕೈಮುಗಿಯುತ್ತಾ ಬಿರುಸು ನಡೆಯೊಂದಿಗೆ ಅವರು ವೇದಿಕೆಗೆ ಧಾವಿಸಿದ್ದಾರೆ. ಈ ವೀಡಿಯೋ ತುಣುಕನ್ನು ಕಾಂಗ್ರೆಸ್​ನ ಪ್ರಚಾರ ತಂಡ ಬಿಡುಗಡೆ ಮಾಡಿದೆ.
#WATCH| Congress leader Priyanka Gandhi Vadra was seen running towards the stage as she got late for the party rally in Tezpur, Assam.(Video credit — office of Priyanka Gandhi Vadra)pic.twitter.com/oxp7eXuZTM— ANI (@ANI)March 2, 2021
#WATCH| Congress leader Priyanka Gandhi Vadra was seen running towards the stage as she got late for the party rally in Tezpur, Assam.(Video credit — office of Priyanka Gandhi Vadra)pic.twitter.com/oxp7eXuZTM

ವೀಡಿಯೋದಲ್ಲಿ, ಸಭೆ ಸೇರಿದ್ದ ಜನರು ಪ್ರಿಯಾಂಕಾರನ್ನು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದರೆ, ಈ ಸುದ್ದಿ ಟ್ವೀಟ್ ಆದಾಗ ಅದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. “ಅಕ್ಕ 2099 ಬಂದರೂ ಕಾಂಗ್ರೆಸ್​ಗಾಗಿ ಓಡುತ್ತಿರುತ್ತಾರೆ.. ಅದೇ ವಿಪರ್ಯಾಸ” ಎಂದು ಒಬ್ಬರು ರೀಟ್ವೀಟ್​ ಮಾಡಿದ್ದರೆ, ಮತ್ತೊಬ್ಬರು “ಪೊಲೀಸ್ ಕೆಲಸಕ್ಕೆ ಆಯ್ಕೆ ನಡೆಯುತ್ತಿದೆಯೇ?!” ಎಂದು ಕೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್​ವೇ ಪ್ರೀತಿಯ ಪ್ರಸಂಗ
ಪೊಲೀಸರ ಮೇಲೆ ಕಣ್ಗಾವಲು! ಠಾಣೆ​ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸುಪ್ರೀಂ ಡೆಡ್​ಲೈನ್
ಮೌನ ಮುರಿದ ಮಾಜಿ ಪ್ರಧಾನಿ ! ಕೇರಳದಲ್ಲಿ ಏನು ಹೇಳಿದರು ಗೊತ್ತೆ ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + seven =
Remember me
