ಲಖನೌ:ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರಪ್ರದೇಶ ಪೊಲೀಸರು ಮತ್ತೆ ತಡೆದಿದ್ದಾರೆ. ಕೆಲವು ದಿನಗಳ ಹಿಂದೆ ರಾಜ್ಯದ ಲಖೀಂಪುರ್​ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರದ ಸ್ಥಳಕ್ಕೆ ಹೋಗದಂತೆ ಅವರನ್ನು ತಡೆಯಲಾಗಿತ್ತು. ಈ ಬಾರಿ ಪೊಲೀಸ್​​ ಕಸ್ಟಡಿಯಲ್ಲಿದ್ದಾಗ ಸಾವಪ್ಪಿರುವ ವ್ಯಕ್ತಿಯ ಕುಟುಂಬವನ್ನು ಮಾತನಾಡಿಸಲು ಹೊರಟಿದ್ದಾಗ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಕಾಂಗ್ರೆಸ್​ ನಾಯಕರು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮಂಗಳವಾರ ರಾತ್ರಿ ಉತ್ತರಪ್ರದೇಶದ ಆಗ್ರಾದಲ್ಲಿ ಜಗದೀಶ್​ಪುರ ಪೊಲೀಸ್​ ಠಾಣೆಯ ಸ್ಟೋರ್​ ರೂಂನಿಂದ 25 ಲಕ್ಷ ರೂಪಾಯಿ ಕದ್ದಿರುವ ಆರೋಪದ ಮೇಲೆ ಬಂಧಿಸಲಾಗಿದ್ದ ಅರುಣ್​ ವಾಲ್ಮೀಕಿ ಎಂಬ ಉದ್ಯೋಗಿ ಸಾವಪ್ಪಿದ್ದಾನೆ. ಪೊಲೀಸರು ಅವನ ಮನೆಯಲ್ಲಿ ಶೋಧ ನಡೆಸುವ ಸಂದರ್ಭದಲ್ಲಿ ಅವನ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ತಲುಪುವ ಮುನ್ನ ಸಾವಪ್ಪಿದನೆಂದು ಪೊಲೀಸರ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ:ಎಂದೂ ಮುಗಿಯದ ಕತೆಯಾಗಬಾರದು! ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ
ವಿರೋಧ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಆತನ ಕುಟುಂಬಸ್ಥರನ್ನು ಭೇಟಿಯಾಗಲು ಇಂದು ಹೊರಟಿದ್ದರು. ಈ ಸಂದರ್ಭ ಲಖನೌ-ಆಗ್ರಾ ಹೆದ್ದಾರಿಯಲ್ಲಿ ಸಾಗುತ್ತಿದ್ದ ಅವರ ಕಾನ್ವಾಯ್​ಅನ್ನು ಪೊಲೀಸರು ತಡೆದಿದ್ದಾರೆ ಎನ್ನಲಾಗಿದೆ. ಆಗ್ರಾದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇದ್ದು, ಜಿಲ್ಲಾ ಮ್ಯಾಜಿಸ್ಟ್ರೇಟರು ಯಾವುದೇ ರಾಜಕೀಯ ವ್ಯಕ್ತಿಗೆ ಪ್ರವೇಶ ನೀಡಬಾರದೆಂದು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕುಪಿತಗೊಂಡಿರುವ ಪ್ರಿಯಾಂಕ, “ಯುಪಿ ಸರ್ಕಾರ ಏತಕ್ಕಾಗಿ ಹೆದರುತ್ತಿದೆ” ಎಂದು ಪ್ರಶ್ನಿಸಿದ್ದಾರೆ. “ನಾನು ಮನೆಯಲ್ಲಿದ್ದರೆ ಅವರಿಗೆ ತೊಂದರೆಯಿಲ್ಲ, ಕಛೇರಿಗೆ ಹೋದರೆ ತೊಂದರೆಯಿಲ್ಲ. ನಾನು ಬೇರೆಲ್ಲಾದರೂ ಹೋದರೆ, ಅವರು ಈ ‘ತಮಾಷಾ’ ಶುರುಮಾಡಿಬಿಡುತ್ತಾರೆ” ಎಂದು ಟೀಕಿಸಿರುವ ಅವರು, “ಸ್ವತಂತ್ರವಾಗಿ ಓಡಾಡಲು ನನಗೆ ಹಕ್ಕಿದೆ” ಎಂದಿದ್ದಾರೆ.(ಏಜೆನ್ಸೀಸ್)
ಎಷ್ಟೇ ಶಕ್ತಿಶಾಲಿಯಾದರೂ, ವಂಚಕರನ್ನು ಸರ್ಕಾರ ಬಿಡುವುದಿಲ್ಲ: ಪ್ರಧಾನಿ ಮೋದಿ

ಪಾರಿವಾಳ ಬಳಸಿ ಡುಪ್ಲೆಕ್ಸ್ ಮನೆ ದೋಚುತ್ತಿದ್ದ ಚಾಲಾಕಿ ಕಳ್ಳ ಅಂದರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − six =
Remember me
