ಬೆಂಗಳೂರು:ವಿಧಾನಸಭೆ ಚುನಾವಣೆ ತಯಾರಿಯ ಭಾಗವಾಗಿ ಪ್ರದೇಶ ಕಾಂಗ್ರೆಸ್ ಸಮಿತಿ ಸೋಮವಾರ ಹಮ್ಮಿಕೊಂಡಿರುವ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ವಾದ್ರ ಪಾಲ್ಗೊಳ್ಳುವ ಮೂಲಕ ರಾಜ್ಯದ ಚುನಾವಣಾ ಕಣಕ್ಕೆ ರಂಗುತರುತ್ತಿದ್ದಾರೆ. ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ ಹಮ್ಮಿಕೊಂಡಿದ್ದು, ಇದರಲ್ಲಿ ಪ್ರಮುಖ ಆಕರ್ಷಣೆಯಾಗಿ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ.
ರಾಷ್ಟ್ರೀಯ ನಾಯಕತ್ವ ವಿಚಾರದಲ್ಲಿ ಎದುರಾಳಿಗೆ ಹೋಲಿಸಿದರೆ ಕಾಂಗ್ರೆಸ್ ಪಾಳಯ ಮಂಕಾಗಿ ಕಾಣಿಸುತ್ತಿರುವ ಹೊತ್ತಿನಲ್ಲೇ ಪ್ರಿಯಾಂಕಾ ಪ್ರವೇಶ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಏಪ್ರಿಲ್-ಮೇನಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುನ್ನ ಆಯೋಜನೆಗೊಳ್ಳುವ ಪ್ರಚಾರ ಸಭೆಗಳಲ್ಲಿ ಪ್ರಿಯಾಂಕಾ ಹೆಚ್ಚೆಚ್ಚು ಪಾಲ್ಗೊಳ್ಳಬೇಕೆಂಬುದು ಕೆಪಿಸಿಸಿ ಆಶಯ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಜ.20ರಂದು ಕಾಶ್ಮೀರ ಪ್ರವೇಶಿಸುತ್ತಿದ್ದು, ಜ.30ರಂದು ಯಾತ್ರೆ ಕೊನೆಯಾಗಲಿದೆ. ಬಳಿಕ ಒಂದು ವಿರಾಮ ಪಡೆಯುವ ರಾಹುಲ್, ಫೆಬ್ರವರಿ ಮಧ್ಯ ಭಾಗದಲ್ಲಿ ಕರ್ನಾಟಕದ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇಷ್ಟರ ನಡುವೆ ರಾಹುಲ್ ಹಾಗೂ ಪ್ರಿಯಾಂಕಾ ಪ್ರತ್ಯೇಕವಾಗಿ ಚುನಾವಣೆ ಸಭೆಗಳನ್ನು ಮುನ್ನಡೆಸುವುದರಿಂದ ಸಭೆಗಳಿಗೆ ಮಹತ್ವ ಬರಲಿದೆ, ಸ್ಥಳೀಯ ನಾಯಕರಿಗೂ ಗಂಭೀರತೆ ಬರಲಿದೆ ಎಂಬುದು ಕೆಪಿಸಿಸಿ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 15-20 ದೊಡ್ಡ ರ್ಯಾಲಿ, ರೋಡ್ ಶೋನಲ್ಲಿ ಪ್ರಿಯಾಂಕಾ ಪಾಲ್ಗೊಳ್ಳಬೇಕೆಂದು ಸ್ಥಳೀಯ ನಾಯಕರು ಬಯಸಿದ್ದು, ಇದೇ ಪ್ರಸ್ತಾಪವನ್ನು ದೆಹಲಿ ನಾಯಕರ ಮುಂದೆ ಇಟ್ಟಿದ್ದಾರೆ. ಬಿಜೆಪಿಯಿಂದ ಮೂರು ಹಂತದ ಪ್ರಯತ್ನಗಳಾಗುತ್ತವೆ. ಒಂದು ಸ್ಥಳೀಯ ಪ್ರಮುಖ ನಾಯಕರು, ಎರಡನೇಯದು ಸಂಘಟನೆ ಪ್ರಯತ್ನ, ಮೂರನೇಯದಾಗಿ ಬೂಸ್ಟ್ ಕೊಡುವ ರೀತಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖವಾಗಿ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್ ಕಡೆಯಿಂದಲೂ ಕೇಂದ್ರ ನಾಯಕರ ಬಲ ಬೇಕಾಗಿದೆ, ತಾವೂ ಸಹಕಾರ ನೀಡಿ ಎಂಬುದು ರಾಜ್ಯ ಪ್ರಮುಖರ ಅಭಿಲಾಷೆ. ಇದೇ ಅಂಶವನ್ನು ಸೋಮವಾರ ರಾಜ್ಯಕ್ಕೆ ಆಗಮಿಸುವ ಪ್ರಿಯಾಂಕಾ ಮುಂದೆ ಮಂಡಿಸಲು ಬಯಸಿದ್ದಾರೆ.
ರಾಜ್ಯಸಭೆ ಚುನಾವಣೆ ವೇಳೆ ಪ್ರಿಯಾಂಕರನ್ನು ಕರ್ನಾಟಕದಿಂದಲೇ ಕಳಿಸುವ ಬಗ್ಗೆ ಚರ್ಚೆಯಾಗಿತ್ತು, ನಾಲ್ಕಾರು ಬಾರಿ ಅವರನ್ನು ಕರೆಸಬೇಕೆಂಬ ಪ್ರಯತ್ನಗಳು ನಡೆದಿತ್ತು. ಆದರೆ, ಕಾಲ ಕೂಡಿಬಂದಿರಲಿಲ್ಲ. ಕೊನೆಗೆ ನಾ ನಾಯಕಿ ಕಾರ್ಯಕ್ರಮಕ್ಕೆ ಅವರಿಗೆ ಆಹ್ವಾನ ನೀಡಿದ್ದು, ಅವರೂ ಒಪ್ಪಿದ್ದಾರೆ. ಇದೀಗ ಮುಂದಿನ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅವರಲ್ಲಿ ನೇರವಾಗಿ ಕೋರಿಕೆ ಇಡಲಾಗುತ್ತದೆ. ತಾವು ಪಾಲ್ಗೊಳ್ಳುವ ಅವಶ್ಯಕತೆ ಎಷ್ಟಿದೆ, ಅನಿವಾರ್ಯತೆ ಏನಿದೆ ಎಂದು ಬಿಡಿಸಿ ಹೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಹೆಚ್ಚಿನ ಶ್ರಮ ಹಾಕಿದರೂ ನಿರೀಕ್ಷಿತ ಫಲ ಸಿಗಲಿಲ್ಲ. ಹಿಮಾಚಲದಲ್ಲಿ ಹೆಚ್ಚೆಚ್ಚು ತೊಡಗಿಕೊಂಡಿದ್ದರಿಂದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಾಧ್ಯವಾಯಿತು. ಕರ್ನಾಟಕದ ಮಟ್ಟಿಗೆ ರಾಜ್ಯ ನಾಯಕತ್ವ ಬಲಯುತವಾಗಿದ್ದು, ಇದರ ಜತೆಗೆ ಕೇಂದ್ರದ ನಾಯ ಕತ್ವದ ಬಲವೂ ಸಿಕ್ಕರೆ ಅಧಿಕಾರ ಹಿಡಿಯುವುದು ಖಚಿತ ಎಂಬ ಸಮೀಕರಣವನ್ನು ಪ್ರಸ್ತುತಪಡಿಸಲು ನಾಯಕರು ಸಿದ್ಧರಾಗಿದ್ದಾರೆ.
ಬೆಂಗಳೂರು:ವಿಧಾನಸಭೆ ಚುನಾವಣೆ ಉದ್ದೇಶದಲ್ಲಿ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರದೇಶ ಕಾಂಗ್ರೆಸ್ ಸಮಿತಿ ಸೋಮವಾರ ಹಮ್ಮಿಕೊಂಡಿರುವ ‘ನಾ ನಾಯಕಿ’ ಕಾರ್ಯಕ್ರಮಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರ ಆಗಮಿಸುತ್ತಿದ್ದಾರೆ. ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಸಮಾ ವೇಶದಲ್ಲಿ ಪ್ರತಿ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಯಲ್ಲಿ ಜನ ಪ್ರತಿನಿಧಿಯಾಗಿದ್ದವರು ಪಾಲ್ಗೊಳ್ಳುತ್ತಿದ್ದಾರೆ. ಇವರನ್ನು ಉದ್ದೇಶಿಸಿ ಪ್ರಿಯಾಂಕಾ ಪ್ರಧಾನ ಭಾಷಣ ಮಾಡುವರು. ಚುನಾವಣೆಗೆ ಮಹಿಳೆಯರನ್ನು ಉದ್ದೇಶಿಸಿ ಪ್ರಣಾಳಿಕೆ ಹೊರತರುತ್ತಿದ್ದು, ಇದಕ್ಕಾಗಿ ಅಭಿಪ್ರಾಯ ಅನಿಸಿಕೆ ಆಹ್ವಾನಿಸಲಾಗಿತ್ತು. ಇದನ್ನೆಲ್ಲ ಕ್ರೋಡೀಕರಿಸಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಜತೆಗೆ ಪ್ರಿಯಾಂಕ ವಾದ್ರಾ ಅವರು ಪ್ರಮುಖ ಭರವಸೆಯೊಂದನ್ನು ಪ್ರಕಟಿಸಿ, ತಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಆ ಭರವಸೆಯನ್ನು ಈಡೇರಿಸುವ ವಾಗ್ದಾನ ಮಾಡಲಿದ್ದಾರೆ.
‘ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊ’ ಎಂದ ಸಂಬಂಧಿಕರಿಬ್ಬರಿಗೂ ಇರಿದ; ಒಬ್ಬನ ಸಾವು, ಇನ್ನೊಬ್ಬನ ಪರಿಸ್ಥಿತಿ ಗಂಭೀರ

ಯುವಕನನ್ನು ಕೊಂದು 8 ತುಂಡಾಗಿಸಿ, ಹತ್ಯೆಯ ವಿಡಿಯೋ ಪಾಕಿಸ್ತಾನಕ್ಕೆ ಕಳಿಸಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 16 =
Remember me
