ಮೈಸೂರು:ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ತಮ್ಮ ಪಕ್ಷಗಳತ್ತ ಮತದಾರರನ್ನು ಸೆಳೆಯಲು ನಾಯಕರು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ.
ಇನ್ನು ಮೈಸೂರು ಭಾಗದಲ್ಲಿ ಕಾಂಗ್ರೆಸ್​ ಪರ ಪ್ರಚಾರದಲ್ಲಿ ತೊಡಗಿರುವ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಮೈಸೂರಿನ ಸುಪ್ರಸಿದ್ದ ಮೈಲಾರಿ ಹೋಟೆಲ್​ ದೋಸೆ ಸವಿದಿದ್ದಾರೆ.
ಇನ್ನು ಮೈಲಾರಿ ಹೋಟೆಲ್​ಗೆ ಬೆಳಗಿನ ಉಪಃಆರಕ್ಕೆ ತೆರಳಿದ್ದ ಪ್ರಿಯಾಂಕ ಗಾಂಧಿಗೆ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್​ ಹಾಗೂ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ಸಾಥ್​ ನೀಡಿದ್ದರು.
ಈ ವೇಳೆ ಅಡುಗೆ ಮನೆಗೆ ಭೇಟಿ ನೀಡಿದ ಪ್ರಿಯಾಂಕಾ ಹೋಟೆಲ್​ ಸಿಬ್ಬಂದಿ ಜೊತೆ ಮಾತನಾಡುತ್ತಾ ದೋಸೆಯನ್ನು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
Perfect dosas are just the beginning; with such skillful hands, there's no limit to the power they can bring to the world.pic.twitter.com/qsgUw6IBeJ
ಇದನ್ನೂ ಓದಿ:ಸುರಕ್ಷತೆಗೆ ಡಬಲ್​ ಇಂಜಿನ್​ ಸರ್ಕಾರವೇ ಗ್ಯಾರಂಟಿ: ಮಂಡ್ಯದಲ್ಲಿ ಸಿಎಂ ಯೋಗಿ ಅಬ್ಬರದ ಪ್ರಚಾರ
ಈ ಕುರಿತು ಟ್ವೀಟ್​ ಮಾಡಿರುವ ಪ್ರಿಯಾಂಕ ಇತಿಹಾಸ ಪ್ರಸಿದ್ಧ ಮೈಲಾರಿ ಹೋಟೆಲ್​ಗೆ ಭೇಟಿ ನೀಡಿ ಅಲ್ಲಿನ ದೋಸೆಗಳನ್ನು ಸವಿದೆ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಇದು ಜೀವಂತ ಉದಾಹರಣೆಯಾಗಿದೆ.
ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು ನನ್ನ ಮಗಳೊಂದಿಗೆ ಬಂದು ಇಲ್ಲಿ ದೋಸೆ ಸವಿಯಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Enjoyed making dosas with the legendary Myalri Hotel owners this morning….what a shining example of honest, hard work and enterprise.Thank you for your gracious hospitality.The dosas were delicious too…can’t wait to bring my daughter to Mysuru to try them.pic.twitter.com/S260BMEHY7
ಇನ್ನು ಪ್ರಿಯಾಂಕ ಗಾಂಧಿ ಭೇಟಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಮೈಲಾರಿ ಹೋಟೆಲ್​ ಮಾಲೀಕರು ಸಂತಸ ವ್ಯಕ್ತಪಡಿಸಿದ್ದು ದೋಸೆ ಹಿಟ್ಟಿಗೆ ಬಳಸುವ ರೆಸಿಪಿಯನ್ನು ಕೇಳಿದ್ದರು.
ನಮ್ಮ ಹೋಟೆಲ್​ಗೆ ತುಂಬಾ ಜನ ಸೆಲೆಬ್ರಿಟಿಗಳು ಭೇಟಿ ನೀಡುತ್ತಾರೆ. ಆದರೆ, ಇವರು ನಮ್ಮೊಂದಿಗೆ ಕೆಲಕಾಲ ಮಾತನಾಡಿ ಫೋಟೋವನ್ನು ತೆಗೆಸಿಕೊಂಡು ಮತ್ತೊಮ್ಮೆ ಬರುವುದಾಗಿ ಹೇಳಿದರು ಎಂದು ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + six =
Remember me
