ನವದೆಹಲಿ:ಹಿಂದಿ ಬಿಗ್​ಬಾಸ್​ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಹಾಗೂ ಸೀಸನ್​ 16ರ ಐವರು ಫೈನಲಿಸ್ಟ್​ಗಳಲ್ಲಿ ಒಬ್ಬರಾದ ಅರ್ಚನಾ ಗೌತಮ್​ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಆಪ್ತ ಸಹಾಯಕ ಸಂದೀಪ್​ ಕುಮಾರ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪರಸ್ಪರ ಸಂಭಾಷಣೆ ವೇಳೆ ಜಾತಿಯ ಬಗ್ಗೆ ಅವಹೇಳನ ಮಾಡಿದ್ದಲ್ಲದೆ, ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂದೀಪ್​ ವಿರುದ್ಧ ಅರ್ಚನಾ ಆರೋಪ ಮಾಡಿದ್ದು, ಅರ್ಚನಾ ಅವರ ತಂದೆ, ಉತ್ತರ ಪ್ರದೇಶದ ಪರ್ತಾಪುರ್ ಪೊಲೀಸ್ ಠಾಣೆಯಲ್ಲಿ ಸಂದೀಪ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಮೀರತ್ ಪೊಲೀಸರು ಸೆಕ್ಷನ್ 504, 506 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….
ಅರ್ಚನಾ ತಂದೆಯ ಪ್ರಕಾರ, ಪ್ರಿಯಾಂಕಾ ಗಾಂಧಿಯವರ ಆಹ್ವಾನದ ಮೇರೆಗೆ ಅರ್ಚನಾ, 2023 ಫೆ. 26ರಂದು ಕಾಂಗ್ರೆಸ್ ಮಹಾಧಿವೇಶನದಲ್ಲಿ ಭಾಗವಹಿಸಲು ರಾಯ್‌ಪುರಕ್ಕೆ ಹೋಗಿದ್ದರು. ಬಳಿಕ ಪ್ರಿಯಾಂಕಾ ಗಾಂಧಿಯವರಿಗೆ ಪರಿಚಯಿಸುವಂತೆ ಸಂದೀಪ್​ಗೆ ಕೇಳಿದರು, ಆದರೆ ಅದನ್ನು ನಿರಾಕರಿಸಿದ ಸಂದೀಪ್​, ಅರ್ಚನಾ ವಿರುದ್ಧ ಜಾತಿ ನಿಂದನೆ ಸೇರಿದಂತೆ ಅತ್ಯಂತ ಕೊಳಕು ಭಾಷೆಯನ್ನು ಬಳಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ, ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯ ಬಗ್ಗೆ ಸ್ವತಃ ಅರ್ಚನಾ ಅವರೇ ಫೇಸ್‌ಬುಕ್ ಲೈವ್‌ನಲ್ಲಿ ಬಹಿರಂಗಪಡಿಸಿದ್ದರು. ಬಳಿಕ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಂದೀಪ್​ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮೀರತ್ ಸಿಟಿಯ ಎಸ್‌ಪಿ ಪಿಯೂಷ್ ಸಿಂಗ್ ಖಚಿತಪಡಿಸಿದ್ದಾರೆ.
ಅಂದಹಾಗೆ ಅರ್ಚನಾ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಬಿಗ್ ಬಾಸ್‌ನಲ್ಲಿರುವ ಸಮಯದಲ್ಲಿ ಪ್ರಿಯಾಂಕಾ ಗಾಂಧಿಯ ಬಗ್ಗೆ ಶಿವ ಠಾಕರೆ ಅವರೊಂದಿಗೆ ವಾಗ್ವಾದಕ್ಕಿಳಿದ ನಂತರ ಅವರನ್ನು ಕಾರ್ಯಕ್ರಮದಲ್ಲಿ ಹೊರಹಾಕಲಾಯಿತು. ಆದಾಗ್ಯೂ, ನಿರೂಪಕ ಸಲ್ಮಾನ್ ಖಾನ್, ಅರ್ಚನಾರನ್ನು ಮತ್ತೆ ಕಾರ್ಯಕ್ರಮಕ್ಕೆ ಕರೆತಂದಿದ್ದರು.
ಇದನ್ನೂ ಓದಿ:ಹೆಣ್ಣುಮಕ್ಕಳ ಆರೋಗ್ಯ-ಶಿಕ್ಷಣ, ಸದೃಢ ಸಮಾಜ ನಿರ್ಮಾಣ
ಯಾರು ಈ ಅರ್ಚನಾ ಗೌತಮ್​?ಉತ್ತರ ಪ್ರದೇಶದ ಸುಂದರಿ ಅರ್ಚನಾ ಗೌತಮ್​ ಅವರನ್ನು ಕಾಂಗ್ರೆಸ್ 2022ರಲ್ಲಿ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಿತ್ತು. ಹಸ್ತಿನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರ್ಚನಾ ಬಿಜೆಪಿಯ ದಿನೇಶ್​ ಕಾಟಿಕ್​ ವಿರುದ್ಧ ಹೀನಾಯ ಸೋಲು ಅನುಭವಿಸಿದರು. ಅರ್ಚನಾ ಅವರು 2014ರಲ್ಲಿ ಮಿಸ್​ ಉತ್ತರ ಪ್ರದೇಶ ಆಗಿದ್ದರು. ನಟಿ, ರೂಪದರ್ಶಿಯೂ ಆಗಿರುವ ಅರ್ಚನಾ,​ ಮಿಸ್​ ಬಿಕಿನಿ ಇಂಡಿಯಾ, ಮಿಸ್​ ಬಿಕಿನಿ ಯೂನಿವರ್ಸ್​​​ ಇಂಡಿಯಾ ಆಗಿಯೂ ಮಿಂಚಿದ್ದಾರೆ. ಮೀರತ್​​ನ ಐಐಎಂಟಿಯಿಂದ ಬಿಜೆಎಂಸಿ ಯಲ್ಲಿ ಡಿಗ್ರಿ ಪಡೆದುಕೊಂಡಿದ್ದು, 2018ರಲ್ಲಿ ‘ಮೋಸ್ಟ್​ ಟ್ಯಾಲೆಂಟ್’​​ ಶೀರ್ಷಿಕೆ ಗೆದ್ದಿದ್ದಾರೆ. ಇವರನ್ನು ‘ಬಿಕಿನಿ ಗರ್ಲ್’​ ಎಂದೇ ಕರೆಯಲಾಗುತ್ತದೆ.(ಏಜೆನ್ಸೀಸ್​)
‘ಉತ್ತರ ಪ್ರದೇಶ ಸುಂದರಿ’ಗೆ ಒಲಿಯದ ಮತದಾರ! ಬಿಜೆಪಿ ಎದುರು ‘ಮಿಸ್​ ಬಿಕಿನಿ ಗರ್ಲ್’​ಗೆ ಭಾರಿ ಹಿನ್ನಡೆ…

ಕಾರು ತಡೆದ ಟ್ರಾಫಿಕ್​ ಪೊಲೀಸ್​: ನಡುರಸ್ತೆಯಲ್ಲೇ ಯುವತಿಯಿಂದ ಭಾರೀ ಹೈಡ್ರಾಮ, ವಿಡಿಯೋ ವೈರಲ್​

ಪರೀಕ್ಷೆ ಸಮಯದಲ್ಲೂ ನೆಮ್ಮದಿ ಹೇಗೆ!?; ಇಲ್ಲಿದೆ ಮಕ್ಕಳಿಗೆ ಸಲಹೆ-ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 3 =
Remember me
