ಲಖನೌ:ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಾದರೂ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಭಾನುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರಿಗೆ ರಾಜ್ಯದ ಎಲ್ಲಾ 403 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತದೆಯೋ ಅಥವಾ ಕೆಲವು ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆಯೇ ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, “ಈ ವಿಚಾರವಾಗಿ ಈಗ ಚರ್ಚಿಸುವುದು ಬೇಗ ಆಗುತ್ತದೆ. ನಾನು ಮೈತ್ರಿ ತಳ್ಳಿಹಾಕುವುದಿಲ್ಲ, ನಾವು ಮುಕ್ತ ಮನಸ್ಸನ್ನು ಹೊಂದಿದ್ದೇವೆ.” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಉದ್ದೇಶ. ಅದಕ್ಕೆ ನಮ್ಮಂತೆ ಇತರ ರಾಜಕೀಯ ಪಕ್ಷಗಳು ಸಹ ಮುಕ್ತ ಮನಸ್ಸಿನವರಾಗಿರಬೇಕು ಎಂದು ಎಂದು ಪ್ರಿಯಾಂಕಾ ಹೇಳಿದ್ದಾರೆ.
ನಾವು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗರಿಷ್ಠ ಕೆಲಸ ಮಾಡಿದ್ದೇವೆ. ಎಷ್ಟೊಂದು ಸಮಸ್ಯೆಗಳನ್ನು ಸರ್ಕಾರದ ಎದುರು ಎತ್ತಿ ಹಿಡಿದಿದ್ದೇವೆ ಎನ್ನುವುದನ್ನು ನೀವೇ ನೋಡಬಹುದು. ಕಾಂಗ್ರೆಸ್ ಪಕ್ಷವು ಹೂಮಾಲೆ ಮತ್ತು ಫೋಟೋಗಳಿಗೆ ಸೀಮಿತವಾಗಿಲ್ಲ. ನಮ್ಮ ಪಕ್ಷವು 30-32 ವರ್ಷಗಳಿಂದ ಅಧಿಕಾರದಿಂದ ಹೊರಗಿದೆ. ಆದಾಗ್ಯೂ, ಸಮಸ್ಯೆ ಬಗೆಹರಿಸಲು ಪೂರ್ಣ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. (ಏಜೆನ್ಸೀಸ್)
ನಟ ಸಿದ್ಧಾರ್ಥ್ ಬದುಕಿಲ್ಲ!? ಯೂಟ್ಯೂಬ್ ವಿಡಿಯೋ ನೋಡಿ ಶಾಕ್ ಆದ ಹೀರೋ!

ಮಗಳನ್ನು ಹೊತ್ತೊಯ್ಯಲು ಬಂದಿದ್ದ ಚಿರತೆಯ ವಿರುದ್ಧ ಹೋರಾಡಿ ಗೆದ್ದ ತಾಯಿ!

ಕಾಶ್ಮೀರದ ಜನರಿಗೆ ನಾನೇ ಬ್ರಾಂಡ್ ಅಂಬಾಸಿಡರ್! ಆರ್​ಎಸ್​ಎಸ್ ಮತ್ತು ಮೋದಿ ವಿರುದ್ಧ ಗುಡುಗಿದ ಇಮ್ರಾನ್ ಖಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 11 =
Remember me
